ಹೈದರಾಬಾದ್ : ಸಂಶೋಧನೆ ಮತ್ತು ಅಭಿವೃದ್ಧಿಯ ವಾತಾವರಣವನ್ನು ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಇಡಲಾಗಿದೆ. ಶೀಘ್ರದಲ್ಲೇ ಹೈದರಾಬಾದಿನಲ್ಲಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ ಹೈದರಾಬಾದ್) ಮಾನವ ರಹಿತ ಏರಿಯಲ್ ಸೊಲ್ಯೂಷನ್ಗಾಗಿ ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಪಡೆಯಲಿದೆ.
ಐಐಟಿ-ಹೈದರಾಬಾದ್, ಜಪಾನ್ ಮೂಲದ ಟೆರ್ರಾ ಡ್ರೋನ್ ಕಾರ್ಪೋರೇಶನ್ ಮತ್ತು ಅದರ ಸಹ ಸಂಸ್ಥೆ ಟೆರ್ರಾ ಡ್ರೋನ್ ಇಂಡಿಯಾ ನಡುವೆ ಎಕ್ಸಲೆನ್ಸ್ ಸೆಂಟರ್ ಸ್ಥಾಪನೆಯ ತ್ರಿಕೋನ ಒಪ್ಪಂದ ಜರುಗಿದೆ. ಟೆರ್ರಾ ಡ್ರೋನ್ ಕಾರ್ಪೋರೇಶನ್ ವಿಶ್ವದ ಅತೀದೊಡ್ಡ ಇಂಡಸ್ಟ್ರಿಯಲ್ ಡ್ರೋನ್ ಸೊಲ್ಯೂಷನ್ ಪೂರೈಕೆದಾರನಾಗಿದೆ.
ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಮತ್ತು ಅದಕ್ಕೆ ಸಂಬಂಧಿಸಿದ ತಂತ್ರಜ್ಞಾನಗಳಲ್ಲಿ ವೃತ್ತಿಪರ ಕೋರ್ಸುಗಳನ್ನು ನೀಡುವ ದೇಶದ ಮೊದಲ ಶೈಕ್ಷಣಿಕ ಸಂಸ್ಥೆ ಐಐಟಿ-ಹೈದರಾಬಾದ್. ಇದಕ್ಕಾಗಿ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪಿಸಲು ಐಐಟಿ ಹೈದರಾಬಾದ್ ಅನ್ನು ಸ್ಥಾಪನೆ ಮಾಡಲಾಗಿದೆ. ಈ ಸೆಂಟರ್ ಆಸಕ್ತ ವಿದ್ಯಾರ್ಥಿಗಳಿಗೆ ಬೋಧನೆ, ತರಬೇತಿ, ಸಂಶೋಧನೆ ಇತ್ಯಾದಿಗಳನ್ನು ಒದಗಿಸಲಿದೆ.
ಡ್ರೋನ್ LiDAR systems ಮತ್ತು ಅದಕ್ಕೆ ಸಂಬಂಧಿಸಿದ ಇತರ ತಂತ್ರಜ್ಞಾನಗಳ ಬಗ್ಗೆ ಮುಂಬರುವ ದಿನಗಳಲ್ಲಿ ಈ ಐಐಟಿಯ ಕ್ಯಾಂಪಸ್ನೊಳಗೆ ಸೆಮಿನಾರ್, ವರ್ಕ್ ಶಾಪ್, ಲೆಕ್ಚರ್ ಇತ್ಯಾದಿಗಳು ಜರುಗಲಿವೆ. ಟೆರ್ರಾ ಡ್ರೋನ್ ಇಂಡಿಯಾ ಐಐಟಿ-ಹೈದರಾಬಾದ್ ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್ ಪ್ರೋಗ್ರಾಂ ಆಫರ್ ಮಾಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.