ನವದೆಹಲಿ: ಭಾರತೀಯ ಸೇನೆಯು ಹೊಸ ತುರ್ತು ಖರೀದಿ ಪ್ರಕ್ರಿಯೆಯಡಿಯಲ್ಲಿ, ಇಸ್ರೇಲಿನಿಂದ 210 ಸ್ಪೈಕ್ ಮಿಸೈಲ್ ಮತ್ತು 12 ಲಾಂಚ್ ವೆಹ್ಹಿಕಲ್ ಅನ್ನು ಖರೀದಿ ಮಾಡಲಿದೆ. ರೂ. 280 ಕೋಟಿಗಳ ಡೀಲ್ ಇದಾಗಿದ್ದು, ಸೇನೆಗೆ ಇನ್ಫಾಂಟ್ರಿ ಮತ್ತು ಟ್ಯಾಂಕ್ಗಳನ್ನು ಶತ್ರಗಳ ಶಸ್ತ್ರಾಸ್ತ್ರದಿಂದ ರಕ್ಷಣೆ ಮಾಡುವುದು ಇದರಿಂದ ಸಹಾಯಕವಾಗಲಿದೆ.
ಭಾರತೀಯ ಸೇನೆಯ ತುರ್ತು ಕಾರ್ಯಾಚರಣಾ ಅವಶ್ಯಕತೆಗಳನ್ನು ಪೂರೈಸುವ ಸಲುವಾಗಿ ಇವುಗಳು ಶೀಘ್ರದಲ್ಲೇ ಭಾರತೀಯ ಸೇನೆಯನ್ನು ಸೇರುವ ನಿರೀಕ್ಷೆ ಇದೆ. ಪುಲ್ವಾಮ ದಾಳಿ ಮತ್ತು ಅದರ ನಂತರ ಜರುಗಿದ ಬೆಳವಣಿಗೆಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ಖರೀದಿಯನ್ನು ಮಾಡಲಾಗುತ್ತಿದೆ.
ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಈ ಖರೀದಿಗೆ ಅನುಮೋದನೆ ಬಹಳ ವಿಳಂಬವಾಗುತ್ತಿತ್ತು. ಆದರೆ ತುರ್ತು ಖರೀದಿ ಪ್ರೊವಿಶನ್ ಅಡಿಯಲ್ಲಿ ಪ್ರಸ್ತಾವ ಸಲ್ಲಿಕೆ ಮಾಡಿರುವುದರಿಂದ ಶೀಘ್ರದಲ್ಲೇ ಭಾರತಕ್ಕೆ 210 ಸ್ಪೈಕ್ ಮಿಸೈಲ್ ಮತ್ತು 12 ಲಾಂಚ್ ವೆಹ್ಹಿಕಲ್ ಬರಲಿದೆ.
ಈ ಖರೀದಿ ಒಪ್ಪಂದ ಭಾರತೀಯ ಸಶಸ್ತ್ರ ಪಡೆಗಳ ಆರ್ಥಿಕ ಅಧಿಕಾರಗಳನ್ನು ಹೆಚ್ಚಿಸುತ್ತದೆ ಮತ್ತು ರಕ್ಷಣಾ ಸಚಿವಾಲಯದ ಪೂರ್ವ ಅನುಮತಿಯಿಲ್ಲದೆ ಸರಕುಗಳನ್ನು ಮತ್ತು ರಕ್ಷಣಾ ಸಾಮಗ್ರಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಕಾರವನ್ನು ನೀಡುತ್ತದೆ. ಈ ಪ್ರೊವಿಶನ್ ಅಡಿಯಲ್ಲಿ ಭಾರತೀಯ ಸೇನೆಯು 300 ಕೋಟಿ ರೂಪಾಯಿ ಮೊತ್ತದ ಖರೀದಿಗಳನ್ನು ಮಾಡಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.