ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ಎರಡನೇ ಹಂತದ ಮತದಾನ ಎಪ್ರಿಲ್ 18 ರಂದು ನಡೆಯಲಿದೆ. ಈಗಾಗಲೇ ಬಹಿರಂಗ ಮತ ಪ್ರಚಾರ ಸ್ಥಗಿತಗೊಂಡಿದೆ. ಈ ನಡುವೆ, ಚುನಾವಣಾ ಆಯೋಗವು #MyShotMatters ಎಂಬ ವಿಶೇಷ ಸ್ಪರ್ಧೆಯನ್ನು ಏರ್ಪಡಿಸಿದ್ದು, ಗೆದ್ದವರಿಗೆ ಪ್ರಶಸ್ತಿಯನ್ನೂ ನೀಡುತ್ತದೆ.
ಇದಕ್ಕಾಗಿ ನಾವು ಮಾಡಬೇಕಾಗಿರುವುದು ಇಷ್ಟೇ, ಚುನಾವಣೆಗೆ ಸಂಬಂಧಿಸಿದ ಫೋಟೋಗಳನ್ನು ಕ್ಲಿಕ್ಕಿಸಿ ಅದನ್ನು ಫೋಟೋ ಸ್ಟೋರಿ ಮಾಡಿ ಆಯೋಗದೊಂದಿಗೆ ಹಂಚಿಕೊಳ್ಳುವುದು. ಚುನಾವಣಾ ಪ್ರಕ್ರಿಯೆ, ಮತದಾರರ ಮತ್ತು ಅಧಿಕಾರಿಗಳು ಹೀಗೆ ಯಾರ ಫೋಟೋವೋ ಆಗುತ್ತದೆ.
ಈ ಸ್ಪರ್ಧೆಯ ನೀತಿ ನಿಯಮಗಳೆಂದರೆ, ಚುನಾವಣಾ ಸಂಬಂಧಿತ ಫೋಟೋಗಳನ್ನು ಟ್ವಿಟರ್ ಅಥವಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಬೇಕು. ಫೋಟೋದೊಂದಿಗೆ, @ECISVEEP ಮತ್ತು #MyShotMatters ಎಂದು ಬರೆದುಕೊಳ್ಳಬೇಕು. ಅತ್ಯುತ್ತಮ ಫೋಟೋ ಕಳುಹಿಸಿಕೊಟ್ಟವರ ಫೋಟೋಗಳು ಅಂತಿಮ ಹಂತಕ್ಕೆ ಆಯ್ಕೆಯಾಗುತ್ತವೆ, ಬಳಿಕ ವಿಜೇತರನ್ನು ಘೋಷಿಸಿ, ಅವರಿಗೆ ರಿವಾರ್ಡ್ ನೀಡಲಾಗುತ್ತದೆ.
ಫೋಟೋಗಳು ಹೆಚ್ಚು ಲೈಕ್ಗಳನ್ನು ಪಡೆದರೆ ಹೆಚ್ಚಿನ ಸ್ಕೋರ್ ಸಿಗುತ್ತದೆ. ರಿ-ಟ್ವೀಟ್ ಅಥವಾ ರಿ-ಪೋಸ್ಟಿಂಗ್ ಆದರೆ ಅದಕ್ಕೆ ಎರಡು ಸ್ಕೋರ್ ಸಿಗಲಿದೆ. ಈ ಆಧಾರದಲ್ಲಿ ವಿಜೇತರನ್ನು ಆಯ್ಕೆಮಾಡಲಾಗುತ್ತದೆ.
ಫೋಟೋದಲ್ಲಿ ಫೋಟೋ ಕ್ಲಿಕ್ಕಿಸಿದ ಸಮಯ ಉಲ್ಲೇಖಗೊಂಡಿರುವುದು ಕಡ್ಡಾಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.