ನವದೆಹಲಿ: ಇತ್ತೀಚಿಗೆ ನಡೆಸಲಾದ Ipsos ಸಮೀಕ್ಷೆಯ ಪ್ರಕಾರ, ಶೇ.73ರಷ್ಟು ಜನರು ದೇಶ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದಾಗಿ ಅಭಿಪ್ರಾಯಿಸಿದ್ದಾರೆ ಮತ್ತು ಬಹುತೇಕರು ಭಯೋತ್ಪಾದನೆ, ನಿರುದ್ಯೋಗ ಮತ್ತು ರಾಜಕೀಯ ಭ್ರಷ್ಟಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
‘What Warries the World-March 2019’ ವರದಿಯ ಪ್ರಕಾರ, ಭಾರತ ನಿರಾಶಾವಾದಿ ಟ್ರೆಂಡ್ ಅನ್ನು ಹಿಂದಿಕ್ಕಿದೆ. ಈ ಸಮೀಕ್ಷೆಯಲ್ಲಿ ಪಾಲ್ಗೊಂಡ 28 ರಾಷ್ಟ್ರಗಳ ಪೈಕಿ ಬಹುತೇಕ ರಾಷ್ಟ್ರಗಳ ಜನರು ತಮ್ಮ (ಶೇ.58ರಷ್ಟು) ತಮ್ಮ ದೇಶದ ತಪ್ಪು ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದಾಗಿ ಅಭಿಪ್ರಾಯಿಸಿದ್ದಾರೆ. ಸಮೀಕ್ಷೆಯಲ್ಲಿ ಟಾಪ್ ಸ್ಥಾನ ಪಡೆದ ದೇಶವೆಂದರೆ ಚೀನಾ, ಇಲ್ಲಿನ ಶೇ.94ರಷ್ಟು ಮಂದಿ ತಮ್ಮ ದೇಶ ಸರಿಯಾದ ದಿಕ್ಕಿನಲ್ಲೇ ಸಾಗುತ್ತಿದೆ ಎಂಬ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ, ಬಳಿಕ ಸೌದಿ ಅರೇಬಿಯಾ, ಇಲ್ಲಿ ಶೇ.73ರಷ್ಟು ಜನ ದೇಶ ಸರಿಯಾದ ದಿಕ್ಕಿನಲ್ಲಿ ಇದೆ ಎಂದಿದ್ದಾರೆ. ಬಳಿಕದ ಸ್ಥಾನ ಭಾರತದ್ದಾಗಿದ್ದು, ಶೇ.73ರಷ್ಟು ಜನರು ಭಾರತ ಸರಿಯಾದ ಮಾರ್ಗದಲ್ಲಿ ಸಾಗುತ್ತಿದೆ ಎಂದಿದ್ದಾರೆ.
ಭಾರತ ಮತ್ತು ಸ್ವೀಡನ್ ಈ ವಿಷಯದಲ್ಲಿ ಸಕಾರಾತ್ಮಕ ಪ್ರಗತಿಯನ್ನು ಸಾಧಿಸುತ್ತಿವೆ. ತಿಂಗಳಿನಿಂದ ತಿಂಗಳಿಗೆ ಇಲ್ಲಿನ ಜನರಿಗೆ ತಮ್ಮ ದೇಶದ ಮೇಲಿನ ನಂಬಿಕೆ ಹೆಚ್ಚಾಗುತ್ತಿದೆ. ದೇಶ ಸರಿಯಾದ ಮಾರ್ಗದಲ್ಲಿ ನಡೆಯುತ್ತಿದೆ ಎಂದು ಅವರಿಗೆ ಅನಿಸುತ್ತಿದೆ ಎಂದು ವರದಿ ಹೇಳಿದೆ.
”What Warries the World-March 2019′ ಮಾಸಿಕ ಸಮೀಕ್ಷೆಯಾಗಿದ್ದು, 65ರೊಳಗಿನ ವಯಸ್ಸಿನ 28 ದೇಶಗಳ ಜನರನ್ನು ಸಮೀಕ್ಷೆಗೊಳಪಡಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.