ನವದೆಹಲಿ: ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಭಾರತದ ಒಟ್ಟಾರೆ ರಫ್ತುಗಳ ಅಂದಾಜುಗಳನ್ನು ಸೋಮವಾರ ಬಿಡುಗಡೆ ಮಾಡಿದೆ. ಏಪ್ರಿಲ್ ತಿಂಗಳಿನಿಂದ ಮಾರ್ಚ್ 19 ರವರೆಗೆ ವ್ಯಾಪಾರ ಕೇಂದ್ರಗಳು ಶೇ.7.97 ರಷ್ಟು ಸಕಾರಾತ್ಮಕ ಬೆಳವಣಿಗೆಯನ್ನು ಕಂಡಿದ್ದು, 535.45 ಬಿಲಿಯನ್ ಯುಎಸ್ ಡಾಲರ್ ಮೊತ್ತದ ರಫ್ತು ಆಗಿರುವ ಬಗ್ಗೆ ಅಂದಾಜಿಸಲಾಗಿದೆ ಎಂದಿದೆ.
ಆದರೆ, ಈ ಅವಧಿಯಲ್ಲಿನ ಒಟ್ಟಾರೆ ಆಮದು 631.29 ಬಿಲಿಯನ್ ಯುಎಸ್ ಡಾಲರ್ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷಕ್ಕಿಂತ ಶೇಕಡಾ 8.48 ರಷ್ಟು ಸಕಾರಾತ್ಮಕ ಬೆಳವಣಿಗೆಯನ್ನು ಕಂಡಿದೆ. “ಈ ಅಂದಾಜಿಗೆ ಮೂಲ ಆಧಾರ ಭಾರತೀಯ ರಿಸರ್ವ್ ಬ್ಯಾಂಕ್ . ಈ ಅಂಕಿ-ಅಂಶ ತಾತ್ಕಾಲಿಕವಾಗಿದ್ದು ಮತ್ತು ಆರ್ಬಿಐ ಇದನ್ನು ಪರಿಷ್ಕರಣೆಗೆ ಒಳಪಡಿಸುತ್ತದೆ’ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಮಾರ್ಚ್ 2019ರಲ್ಲಿ 2,26,138.76 ಕೋಟಿ ರೂ. ರಫ್ತು ಮಾಡಲಾಗಿದ್ದು, ಮಾರ್ಚ್ 2018 ರ ಅವಧಿಯಲ್ಲಿ ರೂ. 190,619.25 ಕೋಟಿ ರಫ್ತು ಆಗಿದೆ. ಇದಕ್ಕೆ ಹೋಲಿಸಿದರೆ ಈ ವರ್ಷ ಶೇ. 18.63 ರಷ್ಟು ಪ್ರಗತಿಯನ್ನು ಕಾಣಲಾಗಿದೆ. ಮಾರ್ಚ್ 2019 ರಲ್ಲಿ ರಫ್ತಿನಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರಗತಿಯನ್ನು ಕಂಡ ಸರಕುಗಳೆಂದರೆ, ಸಾವಯವ ಮತ್ತು ಅಜೈವಿಕ ರಾಸಾಯನಿಕಗಳು, ಎಂಜಿನೀಯರಿಂಗ್ ಸರಕುಗಳು, ಔಷಧಿಗಳು ಮತ್ತು ಔಷಧೀಯ ಮತ್ತು ಪೆಟ್ರೋಲಿಯಂ ಉತ್ಪನ್ನಗಳು.
ಮಾರ್ಚ್ 2019ರ ಆಮದು ಶೇ.18.23ರಷ್ಟು ಧನಾತ್ಮಕ ಬೆಳವಣಿಗೆಯನ್ನು ಕಂಡಿದೆ. ಇದರ ಮೌಲ್ಯವು 3,01,814.05 ಕೋಟಿ ರೂಪಾಯಿ. ಮಾರ್ಚ್ 2018 ರಲ್ಲಿ ರೂ 2,78,441.24 ಕೋಟಿ ಎಂದು ವರದಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.