ಅಹ್ಮದಾಬಾದ್ : ಎಂಜಿನಿಯರ್, ಡಾಕ್ಟರ್, ಐಟಿ ಉದ್ಯೋಗಿಗಳು ಸೇರಿದಂತೆ ಸುಮಾರು 1700 ಅನಿವಾಸಿ ಭಾರತೀಯರು ನರೇಂದ್ರ ಮೋದಿಯವರಿಗೆ ಮತ ಚಲಾಯಿಸುವ ಸಲುವಾಗಿ ಭಾರತಕ್ಕೆ ಬರಲು ನಿರ್ಧರಿಸಿದ್ದಾರೆ. ಈಗಾಗಲೇ ಗುಜರಾತಿನ 250 ಮಂದಿ ಅನಿವಾಸಿಗಳು ತಮ್ಮ ರಾಜ್ಯಕ್ಕೆ ಆಗಮಿಸಿದ್ದು, ಬಿಜೆಪಿಯ ಪರವಾಗಿ ಮನೆ ಮನೆ ಪ್ರಚಾರ ನಡೆಸುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಓವರ್ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ ಆಸ್ಟ್ರೇಲಿಯಾ ಅಧ್ಯಕ್ಷ ಜಯ್ ಶಾ ಅವರು ಮಾತನಾಡಿ, ‘ಇತ್ತೀಚಿನ ವರ್ಷಗಳಲ್ಲಿ ಭಾರತೀಯ ರಾಯಭಾರ ಕಛೇರಿಯು ಹೆಚ್ಚು ಸ್ಪಂದನಾಶೀಲವಾಗಿದೆ. ರಾಯಭಾರ ಕಛೇರಿಯು ಅಗತ್ಯವಿರುವವರಿಗೆ ತುರ್ತು ವೀಸಾಗಳನ್ನೂ ನೀಡಿದೆ. ಸ್ಟಾರ್ಟ್ಅಪ್ಗಳು ಭಾರತದ ಹಲವರಿಗೆ ಹೊಸ ಜೀವನವನ್ನು ನೀಡಿದೆ’ ಎಂದಿದ್ದಾರೆ.
‘ನಾವು ಆಸ್ಟ್ರೇಲಿಯಾದಲ್ಲೂ ಅಭಿಯಾನವನ್ನು ನಡೆಸಿದ್ದೇವೆ. ಬೈಕ್ ರ್ಯಾಲಿ ನಡೆಸಿ ನಮೋ ಅಗೈನ್’, ‘ಮೇ ಭೀ ಚೌಕಿದಾರ್’ ಘೋಷಣೆಯೊಂದಿಗೆ ಸಿಡ್ನಿಯ ಒಪೇರಾ ಹೌಸ್, ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ ಮುಂತಾದ ಐಕಾನಿಕ್ ಸ್ಥಳಗಳಿಗೆ ತೆರಳಿದ್ದೇವೆ’ ಎಂದಿದ್ದಾರೆ.
ಮಹಿಳೆಯರಿಗಾಗಿ ಎನ್ಜಿಒ ಅನ್ನು ನಡೆಸುತ್ತಿರುವ ಅನರ್ ಮೆಹ್ತಾ ಎಂಬ ಅನಿವಾಸಿ ಭಾರತೀಯೆ ಬಿಜೆಪಿಗೆ ಮತ ಹಾಕಲು ಭಾರತಕ್ಕೆ ಬಂದಿದ್ದು, ‘ಮೋದಿಯವರು ಮಹಿಳೆಯರಿಗೆ ಉಜ್ವಲ ಯೋಜನೆ, ಬೇಟಿ ಬಚಾವೋ ಬೇಟಿ ಪಡಾವೋ ಮುಂತಾದ ಯೋಜನೆಗಳನ್ನು ತಂದಿದ್ದಾರೆ. ತ್ರಿವಳಿ ತಲಾಖ್ ನಿಷೇಧಿಸಿದ್ದಾರೆ. ಮೋದಿಯವರ ಭಾರತದಿಂದ ಬಂದವರು ಎಂದು ವಿದೇಶದಲ್ಲಿ ಪರಿಗಣಿಸಲ್ಪಡಲು ನಾವು ಹೆಮ್ಮೆ ಪಡುತ್ತೇವೆ’ ಎಂದಿದ್ದಾರೆ.
ಎಪ್ರಿಲ್ 23 ರಂದು ಗುಜರಾತಿನಲ್ಲಿ ಚುನಾವಣೆ ನಡೆಯಲಿದೆ. ಅಲ್ಲಿ 250 ಅನಿವಾಸಿ ಭಾರತೀಯರು ಮನೆಮನೆಗೆ ತೆರಳಿ ಸಕ್ರಿಯ ಮತಪ್ರಚಾರದಲ್ಲಿ ತೊಡಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.