ವಿಶಾಖಪಟ್ಟಣಂ: ಕಡಲಾಚೆಯ ಗಸ್ತು ಹಡಗು (Offshore patrol vessel) ‘ವೀರ’ ಅನ್ನು ಸೋಮವಾರ ವಿಶಾಖಪಟ್ಟಣದಲ್ಲಿ ಸೇರ್ಪಡೆಗೊಳಿಸಲಾಯಿತು. ಹೊಸ ತಲೆಮಾರಿನ ಕಡಲಾಚೆಯ ಗಸ್ತು ಹಡಗುಗಳ ಪೈಕಿ ಇದು ಮೂರನೆಯ ಸರಣಿಯ ಹಡಗಾಗಿದೆ. ಇದರ ಸೇರ್ಪಡೆಯಿಂದ ಕೋಸ್ಟ್ ಗಾರ್ಡ್ಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು, ಭಾರತೀಯ ಸೇನೆಯು ಇಂಡಿಯನ್ ಕೋಸ್ಟ್ ಗಾರ್ಡ್ನೊಂದಿಗೆ ಜಂಟಿ ಸಮರಭ್ಯಾಸ ಮತ್ತು ತರಬೇತಿಯನ್ನು ನಡೆಸಲಿದೆ ಎಂದು ಘೋಷಿಸಿದ್ದಾರೆ.
‘ಇಂಡಿಯನ್ ಕೋಸ್ಟ್ ಗಾರ್ಡ್ನ ವೀರ ಹಡಗು, ಸಮುದ್ರ ಗಡಿಗಳನ್ನು ಕಾಯುವಲ್ಲಿ ಮಹತ್ವದ ಪಾತ್ರವನ್ನು ನಿಭಾಯಿಸಲಿದೆ ಮತ್ತು ಕಡಲ ಸಾಮರ್ಥ್ಯಕ್ಕೆ ಹೆಚ್ಚಿನ ಬಲ ತಂದುಕೊಡಲಿದೆ’ ಎಂದಿದ್ದಾರೆ.
97 ಮೀಟರ್ ಉದ್ದ ಮತ್ತು 15 ಮೀಟರ್ ಅಗಲವಿರುವ ವೀರ, 5000 ನಾಟಿಕಲ್ ಮೈಲ್ಸ್ ರೇಂಜ್ ಅನ್ನು ಹೊಂದಿದೆ. ಕಮಾಂಡೆಂಟ್ ಗಿರೀಶ್ ದತ್ತ್ ಇದನ್ನು ಕಮಾಂಡ್ ಮಾಡುತ್ತಾರೆ. 12 ಅಧಿಕಾರಿಗಳು ಮತ್ತು 91 ಸಿಬ್ಬಂದಿ ಇದರಲ್ಲಿ ಕಾರ್ಯನಿರ್ವಹಣೆ ಮಾಡಲಿದ್ದಾರೆ. 26 ನಾಟ್ಸ್ ವೇಗವನ್ನು ಇದು ಹೊಂದಿದ್ದು, 12.7 ಎಂಎಂ ಹೆವೀ ಮೆಶಿನ್ ಗನ್ ಅನ್ನು ಹೊಂದಿದೆ. ಫೈಯರ್ ಕಂಟ್ರೋಲ್ ಸಿಸ್ಟಮ್ನೊಂದಿಗೆ 30 ಎಂಎಂ ನಾವೆಲ್ ಗನ್ ಅನ್ನು ಹೊಂದಿದೆ.
ಇಂಟಿಗ್ರೇಟೆಡ್ ಬ್ರಿಡ್ಜ್ ಸಿಸ್ಟಮ್, ಇಂಟಿಗ್ರೇಟೆಡ್ ಪ್ಲಾಟ್ ಫಾರಂ ಮ್ಯಾನೇಜ್ ಮೆಂಟ್ ಸಿಸ್ಟಮ್, ಹೈ ಪವರ್ ಎಕ್ಸಟರ್ನಲ್ ಫೈಯರ್ ಫೈಟಿಂಗ್ ಸಿಸ್ಟಮ್ ಅನ್ನು ಒಳಗೊಂಡಿದೆ. ಎರಡು ಎಂಜಿನ್ ಹೆಲಿಕಾಫ್ಟರ್, ನಾಲ್ಕು ಹೈ ಸ್ಪೀಡ್ ಬೋಟ್ಗಳನ್ನು ಇದು ಹೊತ್ತೊಯ್ಯಬಲ್ಲದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.