ನವದೆಹಲಿ: ಸ್ವಚ್ಛ ಭಾರತ ಅಭಿಯಾನವು ಭಾರತ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದು. ಈ ಅಭಿಯಾನ ಹಲವರ ಬದುಕನ್ನೂ ಬದಲಾಯಿಸಿದೆ. ಗ್ರಾಮೀಣ ಭಾರತ ಸಂಪೂರ್ಣ ಬಯಲು ಶೌಚಮುಕ್ತಗೊಳ್ಳಲು ಇನ್ನು ಕೆಲವೇ ಹೆಜ್ಜೆಗಳನ್ನು ಇಡಬೇಕಾಗಿದೆ. ಒರಿಸ್ಸಾ, ಗೋವಾ, ತೆಲಂಗಾಣ ಮತ್ತು ಪಶ್ಚಿಮಬಂಗಾಳ ಮಾತ್ರ ಗ್ರಾಮೀಣ ಭಾಗದಲ್ಲಿ ಶೇ.100ರಷ್ಟು ಶೌಚಾಲಯಗಳನ್ನು ಹೊಂದಬೇಕಾದ ರಾಜ್ಯಗಳು.
ಒರಿಸ್ಸಾದಲ್ಲಿ ಶೇ.84.35ರಷ್ಟು ಶೌಚಾಲಯಗಳು ನಿರ್ಮಾಣವಾಗಿದೆ, ಪಶ್ಚಿಮಬಂಗಾಳದಲ್ಲಿ ಶೇ.99.97ರಷ್ಟು, ತೆಲಂಗಾಣದಲ್ಲಿ ಶೇ.95.89ರಷ್ಟು, ಗೋವಾದಲ್ಲಿ ಶೇ.76.22ರಷ್ಟು ಶೌಚಾಲಯಗಳು ನಿರ್ಮಾಣವಾಗಿದೆ. ಈ ರಾಜ್ಯಗಳು ಶೇ.100ರಷ್ಟು ಶೌಚಾಲಯಗಳನ್ನು ಹೊಂದಿದರೆ, ಇಡೀ ಗ್ರಾಮೀಣ ಭಾರತ ಸಂಪೂರ್ಣ ಬಯಲುಶೌಚ ಮುಕ್ತ ಎಂದು ಘೋಷಿಸಲ್ಪಡುತ್ತದೆ.
2019ರ ಅಕ್ಟೋಬರ್ ವೇಳೆಗೆ ಶೇ.100ರಷ್ಟು ಶೌಚಾಲಯ ನಿರ್ಮಾಣದ ಗುರಿಯನ್ನು ಇಡಲಾಗಿದೆ. ಚುನಾವಣೆ ಮುಗಿಯುವುದರೊಳಗೆ ಈ ಗುರಿಯನ್ನು ತಲುಪುವ ನಿರೀಕ್ಷೆ ಇದೆ. ಹಾಗಾದರೆ ಮೋದಿ ಸರ್ಕಾರಕ್ಕೆ ಹೆಚ್ಚಿನ ಉತ್ತೇಜನ ಸಿಗಲಿದೆ.
ಸ್ವಚ್ಛ ಭಾರತ ಅಭಿಯಾನ ಆರಂಭವಾದ ಬಳಿಕ ದೇಶದ ನೈರ್ಮಲ್ಯದ ಚಿತ್ರಣ ಸಂಪೂರ್ಣ ಬದಲಾಗಿದೆ. 201ರ ವೇಳೆ ರಾಜಸ್ಥಾನ, ಜಮ್ಮು ಕಾಶ್ಮೀರ, ಬಿಹಾರ, ಜಾರ್ಖಾಂಡ್ ರಾಜ್ಯಗಳು ಶೇ.30ಕ್ಕಿಂತಲೂ ಕಡಿಮೆ ಶೌಚಾಲಯವನ್ನು ಹೊಂದಿದ್ದವು. ಇದೀಗ ಅವುಗಳು ಶೇ.100ರಷ್ಟು ಶೌಚಾಲಯವನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.