ನವದೆಹಲಿ: ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಲಾಗಿರುವ ಆಯವ್ಯಯ ವರದಿಯ ಪ್ರಕಾರ, ಮಾಯಾವತಿಯವರ ಬಹುಜನ ಸಮಾಜವಾದಿ ಪಕ್ಷ ಅತೀ ಹೆಚ್ಚು ಬ್ಯಾಂಕ್ ಬ್ಯಾಲೆನ್ಸ್ ಹೊಂದಿರುವ ಪಕ್ಷವಾಗಿ ಹೊರಹೊಮ್ಮಿದೆ. ಈ ಮೂಲಕ ಎಲ್ಲಾ ಪಕ್ಷಗಳಿಗಿಂತಲೂ ಅತೀ ಹೆಚ್ಚಿನ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರುವ ಪಕ್ಷ ಎನಿಸಿಕೊಂಡಿದೆ.
ದೇಶದ ಮೂರನೇ ಅತೀದೊಡ್ಡ ರಾಷ್ಟ್ರೀಯ ಪಕ್ಷವಾಗಿರುವ ಬಹುಜನ ಸಮಾಜವಾದಿ ಪಕ್ಷ, ಸಾರ್ವಜನಿಕ ವಲಯದ ಬ್ಯಾಂಕುಗಳ 8 ಖಾತೆಗಳಲ್ಲಿ ಬರೋಬ್ಬರಿ ರೂ.669 ಕೋಟಿ ಠೇವಣಿ ಇಟ್ಟಿದೆ.
ತಮ್ಮ ಕೈಯಲ್ಲಿ ರೂ.95.54 ಲಕ್ಷ ನಗದು ಇದೆ ಎಂಬುದನ್ನು ಪಕ್ಷ ಘೋಷಣೆ ಮಾಡಿದೆ. ಈ ಪಕ್ಷದ ಬಳಿಕ ಸಮಾಜವಾದಿಯ ಬಳಿ ಅತೀ ಹೆಚ್ಚು ಬ್ಯಾಲೆನ್ಸ್ ಇದೆ. ರೂ.471 ಕೋಟಿಯನ್ನು ಅದು ಬ್ಯಾಂಕುಗಳಲ್ಲಿ ಠೇವಣಿ ಇಟ್ಟಿದೆ.
ಮೂರನೇ ಸ್ಥಾನವನ್ನು ಭಾರತದ ಎರಡನೇ ಅತೀದೊಡ್ಡ ಕಾಂಗ್ರೆಸ್ ಪಕ್ಷ ಹೊಂದಿದೆ. ಅದರ ಬಳಿ 196 ಕೋಟಿ ರೂಪಾಯಿ ಬ್ಯಾಂಕ್ ಬ್ಯಾಲೆನ್ಸ್ ಇದೆ. 2018ರ ನವೆಂಬರ್ನಲ್ಲಿ ಸಲ್ಲಿಕೆ ಮಾಡಲಾದ ವರದಿಯ ಪ್ರಕಾರ ಈ ಮಾಹಿತಿಯನ್ನು ನೀಡಲಾಗಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢದಲ್ಲಿ ವಿಧಾನಸಭಾ ಚುನಾವಣೆಯನ್ನು ಗೆದ್ದ ಬಳಿಕ ಈ ಮೊತ್ತ ಹೆಚ್ಚಾಗಿರುವ ಸಾಧ್ಯತೆ ಇದೆ.
ಬಿಜೆಪಿ ಬಳಿ ಒಟ್ಟು 83 ಕೋಟಿ ರೂಪಾಯಿ ಠೇವಣಿ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.