ನವದೆಹಲಿ: 16ನೇ ಲೋಕಸಭಾದ ಸಂಸದರ ರ್ಯಾಂಕಿಂಗ್ ಅನ್ನು ಇಂಡಿಯಾ ಟುಡೇ ಇತ್ತೀಚಿಗೆ ಬಿಡುಗಡೆಗೊಳಿಸಿದೆ. ಕಾಂಗ್ರೆಸ್ಸಿನ ಮುಖಂಡರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ರ್ಯಾಂಕಿಂಗ್ನಲ್ಲಿ ಅತೀ ಕೆಳಮಟ್ಟದ ಸ್ಥಾನವನ್ನು ಪಡೆದುಕೊಂಡಿದ್ದಾರೆ. ರಾಹುಲ್ 387ನೇ ಸ್ಥಾನ ಪಡೆದರೆ, ಸೋನಿಯಾ 381ನೇ ಸ್ಥಾನ ಪಡೆದುಕೊಂಡಿದ್ದಾರೆ.
ಒಟ್ಟು 416 ಸಂಸದರ ಸಾಧನೆಯನ್ನು ಆಧರಿಸಿ ರ್ಯಾಂಕಿಂಗ್ ಅನ್ನು ನೀಡಲಾಗಿದೆ. ಹಾಜರಾತಿ ದಾಖಲೆ, ಕೇಳಿದ ಪ್ರಶ್ನೆಗಳ ಸಂಖ್ಯೆ, ಮಂಡಿಸಿದ ವೈಯಕ್ತಿಕ ಸದಸ್ಯತ್ವ ಮಸೂದೆಗಳ ಸಂಖ್ಯೆ, ಅನುದಾನದ ಬಳಕೆ ಮತ್ತು ಅವರ ಕಾರ್ಯವೈಖರಿಯ ಬಗ್ಗೆ ಜನರ ಭಾವನೆ-ಈ ಐದು ಅಂಶಗಳನ್ನು ಗಮನಿಸಿ ರ್ಯಾಂಕಿಂಗ್ ನೀಡಲಾಗಿದೆ.
ರಾಹುಲ್ ಗಾಂಧಿಯವರು ಶೇ.52ರಷ್ಟು ಹಾಜರಾತಿ ಪಡೆದುಕೊಂಡಿದ್ದಾರೆ ಮತ್ತು ಒಟ್ಟು 20 ಕೋಟಿ ಲಭ್ಯವಿರುವ ಸಂಸದ ಅನುದಾನದಲ್ಲಿ ರೂ 19.6 ಕೋಟಿಯನ್ನು ವ್ಯಯಿಸಿದ್ದಾರೆ. ಸಂಸತ್ತಿನ ಪ್ರಶ್ನೆ ಅವಧಿಯಲ್ಲಿ ಅವರು ಯಾವ ಪ್ರಶ್ನೆಗಳನ್ನೂ ಕೇಳಿಲ್ಲ, ಯಾವುದೇ ವೈಯಕ್ತಿಕ ಮಸೂದೆ ಮಂಡಿಸಿಲ್ಲ. ಸೋನಿಯಾ ಗಾಂಧಿಯವರ ಹಾಜರಾತಿ ಶೇ.60 ಇದ್ದು, ಉಳಿದೆಲ್ಲಾ ಮಗನಂತೆಯೇ ಇದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಕೇಂದ್ರ ಸಚಿವರುಗಳ ರ್ಯಾಂಕಿಂಗ್ ಲಭ್ಯವಿಲ್ಲ. ಯಾಕೆಂದರೆ ಅವರ ಬಗೆಗಿನ ವಿವರಗಳು ಲಭ್ಯವಿಲ್ಲ. ಯಾಕೆಂದರೆ, ಕೇಂದ್ರ ಸಚಿವರುಗಳು, ಲೋಕಸಭಾ ಸ್ಪೀಕರ್, ಡೆಪ್ಯೂಟಿ ಸ್ಪೀಕರ್, ಪ್ರತಿಪಕ್ಷ ನಾಯಕರು ಹಾಜರಾತಿ ನೋಂದಣಿ ಮೇಲೆ ಸಹಿ ಮಾಡುವ ಅಗತ್ಯವಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.