ನವದೆಹಲಿ: ಕೇರಳ, ತಮಿಳುನಾಡು, ಕರ್ನಾಟಕದ ಕರಾವಳಿ ಸೇರಿದಂತೆ ದೇಶದ ಕೆಲವೊಂದು ಭಾಗಗಳಲ್ಲಿ ಇಂದು ಬಿಸು, ವಿಶು ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಆಯಾ ಭಾಷೆಯಲ್ಲಿ ಆಯಾ ಜನತೆಗೆ ಬಿಸು ಹಬ್ಬದ ಶುಭಾಶಯವನ್ನು ಕೋರಿದ್ದಾರೆ.
‘ವಿವಿಧತೆಯಲ್ಲಿ ಏಕತೆಯ ಸಂಭ್ರಮಾಚರಣೆ, ಸೌಹಾರ್ದತೆ ಮತ್ತು ಭಾತೃತ್ವದ ಆಚರಣೆ. ದೇಶದಾದ್ಯಂತದ ಜನರು ವಿವಿಧ ಹಬ್ಬಗಳನ್ನು ಆಚರಿಸುತ್ತಿದ್ದಾರೆ. ಅವರೆಲ್ಲರಿಗೂ ಶುಭಾಶಯಗಳು. ಪ್ರತಿಯೊಬ್ಬರ ಬದುಕಿನಲ್ಲೂ ಸಂತೋಷ ಮತ್ತು ಸಮೃದ್ಧಿ ಇರಲಿ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಬೈಸಾಖಿ ಆಚರಿಸುತ್ತಿರುವವರಿಗೆ ಶುಭ ಕೋರಿರುವ ಮೋದಿ,ಈ ಹಬ್ಬ ಆರೋಗ್ಯ ಮತ್ತು ಯಶಸ್ಸನ್ನು ತರಲಿ ಎಂದು ಆಶಿಸಿದ್ದಾರೆ.
ಒರಿಸ್ಸಾದಲ್ಲಿ ಇಂದು ಹೊಸ ವರ್ಷವನ್ನು ಆಚರಿಸಲಾಗುತ್ತಿದ್ದು, ಮಹಾ ವಿಶುಬ ಸಂಕ್ರಾತಿ ಮತ್ತು ಹೊಸ ವರ್ಷ ನಿಮ್ಮೆಲ್ಲಾ ಆಶಯ ಈಡೇರುವಂತೆ ಮಾಡಲಿ ಎಂದಿದ್ದಾರೆ.
ಪುತಂಡು ಆಚರಿಸುತ್ತಿರುವ ತಮಿಳುನಾಡಿನ ಸಹೋದರ ಮತ್ತು ಸಹೋದರಿಯರಿಗೆ ಶುಭಾಶಯಗಳು ಎಂದಿದ್ದಾರೆ.
ವಿಶು ಆಚರಿಸುತ್ತಿರುವ ಕೇರಳದ ಜನತೆಗೂ ಶುಭ ಕೋರಿದ್ದಾರೆ.
Baisakhi greetings to you all! pic.twitter.com/tQTOJPJ0aF
— Chowkidar Narendra Modi (@narendramodi) April 14, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.