ನವದೆಹಲಿ: ಇದೇ ಮೊದಲ ಬಾರಿಗೆ, ಕೇಂದ್ರ ಸರ್ಕಾರ ಇಲಾಖೆಗಳಲ್ಲಿ ಜಂಟಿ ಕಾರ್ಯದರ್ಶಿಗಳಾಗಿ ಒಂಬತ್ತು ಖಾಸಗಿ ವಲಯದ ತಜ್ಞರನ್ನು ಆಯ್ಕೆ ಮಾಡಲಾಗಿದೆ.
ಸಾಮಾನ್ಯವಾಗಿ, ಜಂಟಿ ಕಾರ್ಯದರ್ಶಿಗಳ ಹುದ್ದೆಗಳಿಗೆ, ಭಾರತೀಯ ಆಡಳಿತಾತ್ಮಕ ಸೇವೆ (ಐಎಎಸ್), ಇಂಡಿಯನ್ ಪೋಲಿಸ್ ಸರ್ವೀಸ್ (ಐಪಿಎಸ್), ಇಂಡಿಯನ್ ಫಾರೆಸ್ಟ್ ಸರ್ವಿಸ್ (ಐಎಫ್ಒಎಸ್) ಮತ್ತು ಭಾರತೀಯ ಕಂದಾಯ ಸೇವೆ (ಐಆರ್ ಎಸ್) ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್ಸಿ) ನಡೆಸಿದ ಕಠಿಣ ಪ್ರಕ್ರಿಯೆಯ ನಂತರವೇ ಆಯ್ಕೆ ಮಾಡಲಾಗುತ್ತದೆ.
ವೈಯಕ್ತಿಕ ಸಚಿವಾಲಯವು ಕಳೆದ ವರ್ಷ, ಜಂಟಿ ಕಾರ್ಯದರ್ಶಿ ಹುದ್ದೆಗೆ “ಲ್ಯಾಟರಲ್ ಎಂಟ್ರಿ” ಮಾದರಿ ಮೂಲಕ ಅರ್ಜಿಗಳನ್ನು ಆಹ್ವಾನಿಸಿತ್ತು.
ಸರ್ಕಾರದ ಸಂಸ್ಥೆಗಳಲ್ಲಿ ಖಾಸಗಿ ಕ್ಷೇತ್ರದಿಂದ ತಜ್ಞರನ್ನು ನೇಮಕ ಮಾಡುವುದೇ ಲ್ಯಾಟರಲ್ ಎಂಟ್ರಿ, ಅಧಿಕಾರಶಾಹಿಗೆ ಹೊಸ ಪ್ರತಿಭೆಗಳನ್ನು ತರಲು ಮೋದಿ ಸರಕಾರ ತೆಗೆದುಕೊಂಡ ಅತ್ಯಂತ ಮಹತ್ವಾಕಾಂಕ್ಷೆಯ ನಿರ್ಧಾರ ಇದಾಗಿದೆ.
ಆದಾಯ, ಹಣಕಾಸು ಸೇವೆಗಳು, ಆರ್ಥಿಕ ವ್ಯವಹಾರಗಳು, ಕೃಷಿ ಮತ್ತು ರೈತರ ಕಲ್ಯಾಣ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು, ಸಾಗಣೆ, ಪರಿಸರ, ಅರಣ್ಯ ಮತ್ತು ಹವಮಾನ ಬದಲಾವಣೆ, ಹೊಸ ಮತ್ತು ನವೀಕರಿಸಬಹುದಾದ ಶಕ್ತಿ, ನಾಗರಿಕ ವಾಯುಯಾನ ಮತ್ತು ವಾಣಿಜ್ಯ ಇಲಾಖೆಗಳಲ್ಲಿ ಖಾಸಗಿ ತಜ್ಞರನ್ನು ‘ಲ್ಯಾಟರಲ್ ಎಂಟ್ರಿ’ ಮೂಲಕ ನೇಮಕ ಮಾಡಲಾಗಿದೆ.
6,077 ಖಾಸಗಿಯವರು ಈ ಹುದ್ದೆಗಳಿಗೆ ಅರ್ಜಿಯನ್ನು ಹಾಕಿದ್ದರು, ಅದರಲ್ಲಿ 87 ಮಂದಿ ಮಾತ್ರ ಶಾರ್ಟ್ ಲಿಸ್ಟ್ ಆಗಿದ್ದರು. ಇದೀಗ ಅದರಲ್ಲಿ 9 ಮಂದಿಯನ್ನು ನೇಮಕ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.