ನವದೆಹಲಿ: ದೇಶದಾದ್ಯಂತ ಇಂದು ಶ್ರೀರಾಮ ನವಮಿಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಮಹಾವಿಷ್ಣುವಿನ 7ನೇ ಅವತಾರ ಎಂದು ಪರಿಗಣಿಸಲ್ಪಡುವ ಶ್ರೀರಾಮನ ಜನ್ಮದಿನವನ್ನು ರಾಮ ನವಮಿಯಾಗಿ ಆಚರಣೆ ಮಾಡಲಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ರಾಮ ನವಮಿಯ ಹಿನ್ನಲೆಯಲ್ಲಿ ದೇಶದ ಜನರಿಗೆ ಶುಭಾಶಯಗಳನ್ನು ಕೋರಿದ್ದಾರೆ.
ಕೋವಿಂದ್ ಅವರು, ‘ಉದಾತ್ತ ಚಿಂತನೆಯಲ್ಲಿ, ಕೃತಿ ಮತ್ತು ಮಾತಿನಲ್ಲಿ ತನ್ನ ಹೆಜ್ಜೆ ಗುರುತನ್ನು ಅನುಸರಿಸಲು ಶ್ರೀರಾಮ ನಮಗೆ ಪ್ರೇರಣೆ ನೀಡುತ್ತಾನೆ. ಸಮೃದ್ಧ ದೇಶ ಮತ್ತು ಸೌಹಾರ್ದಯುತವಾದ ಜಗತ್ತನ್ನು ಕಟ್ಟಲು ನಾವು ಆತನ ಮೌಲ್ಯಗಳನ್ನು ಅಳವಡಿಸಬೇಕು’ ಎಂದು ಸಂದೇಶ ನೀಡಿದ್ದಾರೆ.
Greetings and good wishes to fellow citizens on Ram Navami. Lord Rama’s life is a message in itself and inspires us to strive for nobility in thought, words and deeds. May this occasion motivate us to serve our nation and build fraternity in society #PresidentKovind
— President of India (@rashtrapatibhvn) April 13, 2019
ಮೋದಿಯವರು ಟ್ವಿಟ್ ಮಾಡಿ, ‘ದೇಶದ ಎಲ್ಲಾ ಜನತೆಗೂ ರಾಮ ನವಮಿಯ ಶುಭ ಸಂದರ್ಭದಲ್ಲಿ ಆತ್ಮೀಯ ಶುಭಾಶಯ’ ಎಂದಿದ್ದಾರೆ.
रामनवमी के पावन पर्व पर सभी देशवासियों को हार्दिक शुभकामनाएं। जय श्रीराम!
— Chowkidar Narendra Modi (@narendramodi) April 13, 2019
ದೇಶದಾದ್ಯಂತ ಇಂದು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದ್ದು ಹಲವೆಡೆ ಪಾನಕ, ಮಜ್ಜಿಗೆ, ಕೋಸಂಬರಿಯನ್ನು ವಿತರಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.