ನವದೆಹಲಿ: ಇಂದು ದೇಶದಲ್ಲಿ ಜಲಿಯನ್ ವಾಲಾಭಾಗ್ ನರಮೇಧದ 100ನೇ ವರ್ಷವನ್ನು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಘಟನೆಯಲ್ಲಿ ಪ್ರಾಣ ತ್ಯಾಗ ಮಾಡಿದ ವೀರರನ್ನು ಸ್ಮರಿಸಿಕೊಂಡು, ಗೌರವ ನಮನವನ್ನು ಸಲ್ಲಿಸಿದ್ದಾರೆ.
‘100 ವರ್ಷಗಳ ಹಿಂದೆ ಈ ದಿನ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಜಲಿಯನ್ ವಾಲಾಭಾಗ್ನಲ್ಲಿ ಹುತಾತ್ಮರಾದರು. ಇದು ಅತ್ಯಂತ ಹೇಯ ನರಮೇಧ, ನಾಗರಿಕತೆಯ ಮೇಲಿನ ಕಪ್ಪು ಚುಕ್ಕೆ. ಈ ಬಲಿದಾನ ದಿನವನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಇದು ಶ್ರದ್ಧಾಂಜಲಿಯ ದಿನ. ಜಲಿಯನ್ ವಾಲಾಭಾಗಿನಲ್ಲಿ ಹುತಾತ್ಮರಾದ ನಮ್ಮವರಿಗೆ ನಮನಗಳು’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಟ್ವೀಟ್ ಮಾಡಿದ್ದಾರೆ.
A 100 years ago today, our beloved freedom fighters were martyred at Jallianwala Bagh. A horrific massacre, a stain on civilisation, that day of sacrifice can never be forgotten by India. At this solemn moment, we pay our tribute to the immortals of Jallianwala #PresidentKovind pic.twitter.com/tNt0v5aFWv
— President of India (@rashtrapatibhvn) April 13, 2019
ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟ್ ಮಾಡಿ, ‘ಇಂದು, ನಾವು 100 ವರ್ಷಗಳ ಭಯಾನಕ ಜಲಿಯನ್ ವಾಲಾಭಾಗ್ ಹತ್ಯಾಕಾಂಡದ ವರ್ಷಾಚರಣೆ ಮಾಡುತ್ತಿದ್ದು, ಭಾರತ ಆ ದಿನದಂದು ಹುತಾತ್ಮರಾದ ಎಲ್ಲರಿಗೂ ಗೌರವಾರ್ಪಣೆ ಮಾಡುತ್ತದೆ. ಅವರ ಶೌರ್ಯ ಮತ್ತು ತ್ಯಾಗ ಎಂದಿಗೂ ಮರೆತು ಹೋಗುವುದಿಲ್ಲ, ಭಾರತವನ್ನು ನಿರ್ಮಿಸಲು ಇನ್ನೂ ಕಷ್ಟಪಟ್ಟು ಕೆಲಸ ಮಾಡಲು ಅವರ ಸ್ಮರಣೆಯು ನಮಗೆ ಸ್ಫೂರ್ತಿ ನೀಡುತ್ತದೆ’ ಎಂದಿದ್ದಾರೆ.
Today, when we observe 100 years of the horrific Jallianwala Bagh massacre, India pays tributes to all those martyred on that fateful day. Their valour and sacrifice will never be forgotten. Their memory inspires us to work even harder to build an India they would be proud of. pic.twitter.com/jBwZoSm41H
— Chowkidar Narendra Modi (@narendramodi) April 13, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.