ಸಿಯಾಚಿನ್ : ಕೊರೆಯುವ ಚಳಿಯ ನಡುವೆಯೂ ದೇಶಸೇವೆಯನ್ನು ಅದಮ್ಯ ಉತ್ಸಾಹದಿಂದ ಮಾಡುತ್ತಿರುವ, ಜಮ್ಮು ಕಾಶ್ಮೀರದ ಸಿಯಾಚಿನ ಗ್ಲೇಸಿಯರ್ ಮತ್ತು ಜಮ್ಮು ಕಾಶ್ಮೀರದ ವಾಸ್ತವ ಗಡಿರೇಖೆಯಲ್ಲಿ ನಿಯೋಜನೆಗೊಂಡಿರುವ ಯೋಧರು ಗುರುವಾರ ಸರ್ವಿಸ್ ವೋಟರ್ಸ್ಗಳಾಗಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಇದೇ ಮೊದಲ ಬಾರಿಗೆ ಅವರಿಗೆ ಇಂತಹ ಅವಕಾಶ ದೊರೆತಿದೆ.
ಅತ್ಯಂತ ಕ್ಲಿಷ್ಟಕರವಾದ ಭೂಪ್ರದೇಶ, ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜನೆಗೊಂಡಿರುವ ಯೋಧರಿಗೆ ಇದೇ ಮೊದಲ ಬಾರಿಗೆ ಚುನಾವಣಾ ಆಯೋಗವು ಮತದಾನ ಮಾಡಲು ಬೇಕಾದ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ. ಬ್ಯಾಲೆಟ್ ಪೇಪರ್ಗಳನ್ನು ಇವರು ಆನ್ಲೈನ್ ಮೂಲಕ ಡೌನ್ ಲೋಡ್ ಮಾಡಿಕೊಂಡಿದ್ದಾರೆ, ಪೋಸ್ಟ್ ಮೂಲಕ ಇದನ್ನು ತಮ್ಮ ಕ್ಷೇತ್ರದ ರಿಟರ್ನಿಂಗ್ ಆಫೀಸರ್ಗಳಿಗೆ ಕಳುಹಿಸಿಕೊಟ್ಟಿದ್ದಾರೆ.
ನಿಲ್ಲದ ಕದನವಿರಾಮ ಉಲ್ಲಂಘನೆ, ಸಹಿಸಲು ಸಾಧ್ಯವಾಗದಂತಹ ವಾತಾವರಣದ ನಡುವೆಯೂ ಯೋಧರು ಮತದಾನಕ್ಕೆ ಹೆಚ್ಚಿನ ಉತ್ಸಾಹವನ್ನು ತೋರಿಸಿದ್ದಾರೆ. ಈ ಮೂಲಕ ಪ್ರಜಾಪ್ರಭುತ್ವದ ಶಕ್ತಿಯನ್ನು ಪ್ರದರ್ಶಿಸಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ.
‘ಸಿಯಾಚಿನ್ ಗ್ಲೇಸಿಯರ್ ಮತ್ತು ಎಲ್ಒಸಿ ಸಮೀಪ ನಿಯೋಜಿತರಾಗಿರುವ ಭಾರತೀಯ ಸೇನಾಪಡೆಗಳು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಮೂಲಕ ಜವಾಬ್ದಾರಿಯುತ ನಾಗರಿಕರ ಕರ್ತವ್ಯವನ್ನು ನಿರ್ವಹಿಸಿದ್ದಾರೆ’ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.