ನವದೆಹಲಿ: ರಷ್ಯಾವು ನರೇಂದ್ರ ಮೋದಿಯವರಿಗೆ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿ ‘Order of St Andrew the Apostle’ ಅನ್ನು ನೀಡಿ ಗೌರವಿಸುವುದಾಗಿ ಘೋಷಿಸಿದೆ. ರಷ್ಯಾ ಮತ್ತು ಭಾರತದ ನಡುವಣ ವಿಶೇಷ ಪಾಲುದಾರಿಕೆಯನ್ನು ಉತ್ತೇಜಿಸಲು ಅಸಾಧಾರಣ ಸೇವೆಯನ್ನು ನೀಡಿದ್ದಕ್ಕಾಗಿ ಈ ಗೌರವವನ್ನು ನೀಡುತ್ತಿರುವುದಾಗಿ ಭಾರತದಲ್ಲಿ ರಷ್ಯಾ ರಾಯಭಾರ ಕಛೇರಿಯು ಟ್ವೀಟ್ ಮೂಲಕ ತಿಳಿಸಿದೆ.
On April 12, @narendramodi was decorated with the Order of St Andrew the Apostle for exceptional services in promoting special & privileged strategic partnership between 🇷🇺 and 🇮🇳 and friendly relations between the Russian and Indian peoples.@mfa_russia @MEAIndia @IndEmbMoscow pic.twitter.com/jUFt5aawxw
— Russia in India (@RusEmbIndia) April 12, 2019
ರಷ್ಯಾ ಸರ್ಕಾರದ ಪ್ರಕಾರ, Order of St Andrew the Apostle ಅನ್ನು 17ನೇ ಶತಮಾನದಲ್ಲಿ 1699ರಲ್ಲಿ ಪೀಟರ್ ದಿ ಗ್ರೇಟ್ ಸ್ಥಾಪನೆ ಮಾಡಿದ್ದರು, ಇದು ಅತ್ಯಂತ ಹಳೆಯ ಪುರಸ್ಕಾರವಾಗಿದೆ.
Order of St Andrew the Apostle ರಷ್ಯಾದ ಅತ್ಯಂತ ಹಳೆಯ ಮತ್ತು ಅತ್ಯುನ್ನತ ಸರ್ಕಾರಿ ಗೌರವವಾಗಿದೆ. 1918ರಲ್ಲಿ ಸೋವಿಯತ್ ಯೂನಿಯನ್ ಇದನ್ನು ರದ್ದುಪಡಿಸಿತ್ತು, ಆದರೆ 1998ರಲ್ಲಿ ಇದನ್ನು ಮರುಸ್ಥಾಪನೆ ಮಾಡಲಾಯಿತು.
ರಷ್ಯಾ ಸರ್ಕಾರದ ಪ್ರಕಾರ, “Order of St Andrew the Apostle ಅತ್ಯುತ್ತಮ ರಾಜಕಾರಣಿಗಳಿಗೆ ಮತ್ತು ಸಾರ್ವಜನಿಕ ವ್ಯಕ್ತಿಗಳಿಗೆ, ಹಾಗೆಯೇ ರಷ್ಯಾದ ಸಾಧಕ ಪ್ರಜೆಗಳಿಗೆ, ಅಸಾಧಾರಣ ಸೇವೆಗಳಿಗಾಗಿ ನೀಡಲಾಗುತ್ತದೆ”
2017 ರಲ್ಲಿ, ಚೀನಾದ ಅಧ್ಯಕ್ಷ ಕ್ಸಿ ಜಿಂಗ್ ಪಿನ್ ಅವರಿಗೆ ಇದನ್ನು ನೀಡಿ ಗೌರವಿಸಲಾಗಿತ್ತು.
ರಷ್ಯಾದ ಈ ಪ್ರಶಸ್ತಿಯ ಮೂಲಕ ನರೇಂದ್ರ ಮೋದಿಯವರಿಗೆ ಒಟ್ಟು ಏಳು ಉನ್ನತ ಜಾಗತಿಕ ಪ್ರಶಸ್ತಿಗಳು ಸಿಕ್ಕಿದಂತಾಗಿದೆ. ಈಗಾಗಲೇ ಅವರಿಗೆ ಯುಎಇನ ಉನ್ನತ ಗೌರವ ಮತ್ತು ದಕ್ಷಿಣ ಕೊರಿಯಾ, ಸೌದಿ ಅರೇಬಿಯಾ, ಪ್ಯಾಲೇಸ್ಟೈನ್ ಮತ್ತು ಅಫ್ಘಾನಿಸ್ತಾನ ದೇಶಗಳ ಗೌರವವನ್ನು ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.