ನವದೆಹಲಿ: ತನ್ನ 99 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಾಮಿಯಾ ಮಿಲಿಯ ಇಸ್ಲಾಮಿಯ ವಿಶ್ವವಿದ್ಯಾಲಯವು ಮಹಿಳೆಯೊಬ್ಬರನ್ನು ಉಪ ಕುಲಪತಿ ಹುದ್ದೆಗೆ ನೇಮಕ ಮಾಡಿದೆ. ಪ್ರೊಫೆಸರ್ ನಜ್ಮಾ ಅಖ್ತರ್ ಅವರು ಎಪ್ರಿಲ್ 10ರಂದು ಅಲ್ಲಿನ ಮೊದಲ ಮಹಿಳಾ ಉಪ ಕುಲಪತಿಯಾಗಿ ನೇಮಕವಾಗಿದ್ದಾರೆ.
ನಜ್ಮಾ ಅವರು, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನಲ್ ಪ್ಲ್ಯಾನಿಂಗ್ ಆ್ಯಂಡ್ ಅಡ್ಮಿನಿಸ್ಟ್ರೇಶನ್ (NIEPA)ನಿಂದ ಬಂದವರಾಗಿದ್ದು, ದೆಹಲಿಯ ಕೇಂದ್ರೀಯ ವಿಶ್ವವಿದ್ಯಾಲಯದ ಮೊದಲ ಮಹಿಳಾ ಉಪ ಕುಲಪತಿಗಳಾಗಿದ್ದಾರೆ. ಇದುವರೆಗೆ ಜಾಮಿಯ ಮಿಲಿಯದ ಉಪ ಕುಲಪತಿಗಳಾಗಿದ್ದ ತಲತ್ ಅಖ್ತರ್ ಅವರ ಅಧಿಕಾರಾವಧಿ ಮುಕ್ತಾಯಗೊಂಡಿದ್ದು, ಅವರ ಉತ್ತರಾಧಿಕಾರಿಯಾಗಿ ನಜ್ಮಾ ಆಯ್ಕೆಯಾಗಿದ್ದಾರೆ.
‘ಶೈಕ್ಷಣಿಕ ನಾಯಕತ್ವದ ಇತಿಹಾಸದಲ್ಲಿ ಇದು ಮಹತ್ವದ ಮೈಲಿಗಲ್ಲಿನ ನಿರ್ಧಾರವಾಗಿದೆ ಮತ್ತು ಜಾಮಿಯ ಮಿಲಿಯಾಗೆ ಹೆಮ್ಮೆಯ ವಿಷಯವಾಗಿದೆ. ಈ ನಿರ್ಧಾರವನ್ನು ಇಡೀ ಸಿಬ್ಬಂದಿ ವರ್ಗ ಅತ್ಯಂತ ಸಂತೋಷದಿಂದ ಸ್ವಾಗತ ಮಾಡಿದೆ, ನಜ್ಮಾ ಅವರಿಗೆ ಬೇಕಾದ ಎಲ್ಲಾ ಸಹಕಾರವನ್ನೂ ನೀಡಲಿದೆ’ ಎಂದು ಜಾಮಿಯ ಮಿಲಿಯ PRO ಅಧಿಕಾರಿ ಅಹ್ಮದ್ ಅಝೀಮ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನಜ್ಮಾ ಅವರು ಜಾಮಿಯ ಮಿಲಿಯ ವಿಶ್ವವಿದ್ಯಾಲಯದ 16ನೇ ಉಪ ಕುಲಪತಿಗಳಾಗಿ ನೇಮಕವಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.