ನವದೆಹಲಿ: ನರೇಂದ್ರ ಮೋದಿ ಸರಕಾರದ ಕೊನೆಯ ನಾಲ್ಕು ವರ್ಷಗಳಲ್ಲಿ, ಕ್ಷಿಪ್ರ ವೇಗದಲ್ಲಿ ಭಾರತದಲ್ಲಿ ಡಿಜಿಟಲೀಕರಣ ಸಂಭವಿಸಿದೆ. WiFi ನಿಂದ ಹಿಡಿದು ಮೊಬೈಲ್ ಡಾಟಾದವರೆಗೆ ಮತ್ತು ಬ್ರಾಡ್ಬ್ಯಾಂಡ್ ಸಂಪರ್ಕಗಳೂ ಕ್ಷಿಪ್ರ ವೇಗದಲ್ಲಿ ವಿಸ್ತರಣೆಯಾಗಿದೆ. ದೇಶದ ಜನರಿಗೆ ಉತ್ತಮ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಟೆಲಿಕಾಂ ಕ್ರಾಂತಿಯನ್ನು ಬಳಸಿಕೊಳ್ಳುವಲ್ಲಿ ರೈಲ್ವೆ ಇಲಾಖೆಯು ಮುಂಚೂಣಿಯಲ್ಲಿದೆ. ಭಾರತೀಯ ರೈಲ್ವೆಯು ಸುಮಾರು 1,600 ರೈಲ್ವೇ ನಿಲ್ದಾಣಗಳನ್ನು ರೈಲ್ ವೈಯರ್ ವೈಫೈ ಝೋನ್ ಆಗಿ ಪರಿವರ್ತಿಸಿದೆ.
ವೈಫೈ ಸೇವೆಯನ್ನು ಪಡೆದ ದೇಶದ 1600ನೇ ರೈಲ್ ನಿಲ್ದಾಣವಾಗಿ ಮುಂಬಯಿಯ ಪಶ್ಚಿಮ ದಿಕ್ಕಿನಲ್ಲಿರುವ ಸಂತಾಕ್ರೂಝ್ ರೈಲ್ವೆ ನಿಲ್ದಾಣ ಹೊರಹೊಮ್ಮಿದೆ. ರೈಲ್ಟೆಲ್ ಭಾರತೀಯ ರೈಲ್ವೇಯ ಒಡೆತನದ ಕಂಪನಿಯಾಗಿದ್ದು, ಇದಕ್ಕೆ ರೈಲು ನಿಲ್ದಾಣಗಳನ್ನು ಹೈ ಸ್ಪೀಡ್ ಬ್ರಾಡ್ಬ್ಯಾಂಡ್ ನೆಟ್ವರ್ಕ್ ಆಗಿ ಪರಿವರ್ತಿಸುವ ಕಾರ್ಯವನ್ನು ನೀಡಲಾಗಿದೆ.
“ಒಂದು ವರ್ಷದೊಳಗೆ ವೇಗದ ಮತ್ತು ಉಚಿತ Wi-Fi ಅನ್ನು ಎಲ್ಲಾ ನಿಲ್ದಾಣಗಳಿಗೂ ನೀಡುವ ಭರವಸೆಯನ್ನು ಪೂರೈಸುವ ಸಲುವಾಗಿ, ರೈಲ್ವೆಟೆಲ್ ತಂಡವು ಕಾರ್ಯೋನ್ಮುಖಗೊಂಡಿದೆ, ನಿಗದಿತ ಗುರಿ ಸಾಧಿಸಲು ಹೆಚ್ಚಿನ ಶ್ರಮವನ್ನು ಹಾಕುತ್ತಿದೆ. ಇದರ ಪ್ರಯತ್ನದ ಭಾಗವಾಗಿ ಈಗ ಸಂತಾಕ್ರೂಸ್ ನಿಲ್ದಾಣವು ರೈಲ್ವೈಯರ್ ವೈಫೈ ಸಂಪರ್ಕ ಹೊಂದಿದ ದೇಶದ 1600ನೇ ರೈಲು ನಿಲ್ದಾಣವಾಗಿ ಹೊರಹೊಮ್ಮಿದೆ’ ಎಂದು” ಪಶ್ಚಿಮ ರೈಲ್ವೆ ಹೇಳಿಕೆಯಲ್ಲಿ ತಿಳಿಸಿದೆ.
ರೈಲ್ವೈಯರ್ ವೈಫೈ ಸಂಪರ್ಕ ಸೇವೆಯನ್ನು 2016ರಲ್ಲಿ, ರೈಲ್ಟೆಲ್ ಕಾರ್ಪೋರೇಶನ್ ಇಂಡಿಯಾ ಲಿಮಿಟೆಡ್ ಸಹಾಯದೊಂದಿಗೆ ರೈಲು ನಿಲ್ದಾಣಗಳಿಗೆ ಉಚಿತ ವೈಫೈ ನೀಡುವ ಉದ್ದೇಶದೊಂದಿಗೆ ಆರಂಭಿಸಲಾಯಿತು. ಗ್ರಾಮೀಣ ಮತ್ತು ನಗರ ಎರಡೂ ಭಾಗಗಳ ರೈಲು ನಿಲ್ದಾಣಗಳಿಗೂ ವೈಫೈ ಸಂಪರ್ಕವನ್ನು ಇದು ಒದಗಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.