ನವದೆಹಲಿ: ಇದೇ ತಿಂಗಳ 24 ರಿಂದ 30 ರ ವರೆಗೆ ಜರುಗಲಿರುವ ‘ಅಬುಧಾಬಿ ಇಂಟರ್ನ್ಯಾಷನಲ್ ಬುಕ್ ಫೇರ್ 2019’ಗೆ ಭಾರತ ಗೌರವ ಅತಿಥಿ ರಾಷ್ಟ್ರ ಎಂದು ಯುಎಇ ಘೋಷಣೆ ಮಾಡಿದೆ. ಯುಎಇಯ ಶ್ರೀಮಂತ ಪರಂಪರೆ, ಅದರ ವಿಶ್ವಾಸಾರ್ಹತೆ, ಸಂಸ್ಕೃತಿ, ಸಾಕ್ಷರತಾ ಫಲಿತಾಂಶ ಮತ್ತು ಆಧುನಿಕತೆಯನ್ನು ಜಗತ್ತಿಗೆ ತೋರಿಸುವ ಉದ್ದೇಶದಿಂದ ಈ ಬುಕ್ ಫೇರ್ ಆಯೋಜನೆಗೊಳಿಸಲಾಗಿದೆ.
ಭಾರತದ ಭಾಗವಹಿಸುವಿಕೆಯಿಂದಾಗಿ ಬುಕ್ ಫೇರ್ ಹೆಚ್ಚಿನ ಜನರನ್ನು ಆಕರ್ಷಿಸಲಿದೆ ಎಂದು ಹೇಳಲಾಗುತ್ತಿದೆ. ಇಲ್ಲಿ ಹಲವಾರು ಕಾರ್ಯಕ್ರಮಗಳು, ಚಟುವಟಿಕೆಗಳು ಜರುಗಲಿದೆ.
ಇಂಡಿಯನ್ ಪೆವಿಲಿಯನ್ನಲ್ಲಿ ಭಾರತೀಯ ಬರಹಗಾರರು, ಲೇಖಕರು ಮತ್ತು ಸಾಹಿತ್ಯ ಪಂಡಿತರು ಭಾಗವಹಿಸಲಿದ್ದು, ದೇಶದ ಸಾಹಿತ್ಯ ಮತ್ತು ಕಲೆಯ ರಾಯಭಾರಿಗಳಾಗಿ ಕಾರ್ಯನಿರ್ವಹಣೆ ಮಾಡಲಿದ್ದಾರೆ.
‘ಭಾರತ ಮತ್ತು ಅರಬ್ ಜಗತ್ತಿನ ಆಳವಾದ ಬಾಂಧವ್ಯ ಮತ್ತು ಸುದೀರ್ಘ ಯುಎಇ-ಭಾರತ ಸಂಬಂಧದ ದ್ಯೋತಕವಾಗಿ ಭಾರತಕ್ಕೆ ಬುಕ್ ಫೇರ್ನಲ್ಲಿ ಗೌರವ ಅತಿಥಿಯ ಸ್ಥಾನವನ್ನು ನೀಡಲಾಗಿದೆ. ಭಾರತದ ಶಕ್ತಿ ಅದರ ಆರ್ಥಿಕತೆ ಮತ್ತು ವಿಶ್ವ ಮೆಚ್ಚಿದ ಸಿನಿಮಾ ಕ್ಷೇತ್ರಕ್ಕಷ್ಟೇ ಸಿಮೀತವಾಗಿಲ್ಲ, ಅದರ ಮಹಾನ್ ಶಕ್ತಿ ಅದರ ಸಾಂಸ್ಕೃತಿಕ ಪರಂಪರೆಯಲ್ಲಿದೆ, 16 ಸಾವಿರಕ್ಕೂ ಅಧಿಕ ಪ್ರಕಾಶಕರನ್ನು ಅದು ಕಾಣುತ್ತದೆ’ ಎಂದು ಅಬುಧಾಬಿ ಸಾಂಸ್ಕೃತಿ ಮತ್ತು ಪ್ರವಾಸೋದ್ಯಮ ಕಾರ್ಯದರ್ಶಿ ಸೈಫ್ ಸಯೀದ್ ಘೋಬಶ್ ಹೇಳಿದ್ದಾರೆ.
‘ಈ ಬುಕ್ ಫೇರ್ ಭಾರತದ ವಿಶ್ವಾಸಾರ್ಹ ಸಂಸ್ಕೃತಿ, ಕಲೆ, ಪರಂಪರೆ ಮತ್ತು ಜ್ಞಾನ ಆಧಾರಿತ ಪದ್ಧತಿಗಳನ್ನು ಸಂಭ್ರಮಿಸಲಿದೆ ಎಂದು ಬುಕ್ ಫೇರ್ ನಿರ್ದೇಶಕ ಅಬ್ದುಲ್ಲಾ ಮಜೀದ್ ಅಲಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.