ನವದೆಹಲಿ: ಭಾರತದಲ್ಲಿ 2019 ರ ಲೋಕಸಭಾ ಚುನಾವಣೆ ಗುರುವಾರ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ವೇದಿಕೆ ಟ್ವಿಟರ್ನಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಸಂವಾದ ಮತ್ತು ಚರ್ಚೆಗಳನ್ನು ಒಳಗೊಂಡ ಟ್ವೀಟ್ಗಳ ಸಂಖ್ಯೆ ಒಂದೇ ದಿನದಲ್ಲಿ 1.2 ಮಿಲಿಯನ್ಗಳನ್ನು ದಾಟಿದೆ.
ಮೊದಲನೇ ಹಂತದ ಚುನಾವಣೆ ಗುರುವಾರ ಬೆಳಗ್ಗೆ 7 ಗಂಟೆಗೆ ಆರಂಭಗೊಂಡಿತ್ತು, ಸಂಜೆ 6 ರ ವರೆಗೆ ನಡೆದಿತ್ತು. 18 ರಾಜ್ಯ ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 91 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಮತದಾನದ ಬಿಸಿ ಟ್ವಿಟರ್ನಲ್ಲಿ ಪ್ರತಿಫಲನಗೊಂಡಿದೆ.
ಚುನಾವಣೆ ದಿನಾಂಕ 11 ರಿಂದ ಏಪ್ರಿಲ್ 11ರ ವರೆಗೆ ಚುನಾವಣೆ ಸಂಬಂಧಿತ 6 ಮಿಲಿಯನ್ ಟ್ವೀಟ್ಗಳನ್ನು ಮಾಡಲಾಗಿದೆ. ಇದರಲ್ಲಿ 1.2 ಮಿಲಿಯನ್ ಟ್ವೀಟ್ಗಳು ಒಂದೇ ದಿನದಲ್ಲಿ ಆಗಿದೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ವೇದಿಕೆಯನ್ನು ಅತ್ಯಂತ ಸಕ್ರಿಯವಾಗಿ ಬಳಸಿಕೊಂಡಿವೆ. ಪ್ರಚಾರ ಅಭಿಯಾನ ಪ್ರಣಾಳಿಕೆ ನೀತಿ ನಿಯಮಗಳ ಘೋಷಣೆಗಳು ಸಾಮಾಜಿಕ ವಿಷಯಗಳು ಇತ್ಯಾದಿಗಳನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ. ಸಾಮಾಜಿಕ ವಿಷಯಗಳು ಟ್ವಿಟರ್ನಲ್ಲಿ ಅತ್ಯಂತ ಖಚಿತವಾದ ವಿಷಯಗಳಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.