ನವದೆಹಲಿ: ಭಾರತದ ಜನಗಣತಿಯ 140 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಮೊಬೈಲ್ ಆ್ಯಪ್ ಮೂಲಕ ದತ್ತಾಂಶವನ್ನು ಸಂಗ್ರಹಿಸಲು ಪ್ರಸ್ತಾಪಿಸಲಾಗಿದೆ ಮತ್ತು ಗಣತಿ ಮಾಡುವವರಿಗೆ ತಮ್ಮದೇ ಮೊಬೈಲ್ ಅನ್ನು ಬಳಸುವಂತೆ ಉತ್ತೇಜಿಸಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
2021ರ ವೇಳೆಗೆ ಭಾರತದಲ್ಲಿ ಜನಗಣತಿ ನಡೆಯಲಿದ್ದು, ವಿಶ್ವದ ಅತೀದೊಡ್ಡ ಜನಗಣತಿ ಇದಾಗಲಿದೆ. ಒಟ್ಟು 33 ಲಕ್ಷ ಸಿಬ್ಬಂದಿಗಳು ಇದಕ್ಕಾಗಿ ನೇಮಕಗೊಳ್ಳಲಿದ್ದಾರೆ. ಮನೆ ಮನೆಗೆ ತೆರಳಿ ಇವರು ಜನರ ಲೆಕ್ಕ ಹಾಕಲಿದ್ದಾರೆ.
2020ರ ಅಕ್ಟೋಬರ್ 1ರ ವೇಳೆಗೆ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡದಲ್ಲಿ ಜನಗಣತಿ ನಡೆಯಲಿದೆ. 2021ರ ಮಾರ್ಚ್ 1ರ ವೇಳೆಗೆ ದೇಶದ ಉಳಿದ ಭಾಗಗಳಲ್ಲಿ ಜನಗಣತಿ ನಡೆಯಲಿದೆ.
ಈ ಜನಗಣತಿಯಲ್ಲಿ ದತ್ತಾಂಶವನ್ನು ಮೊಬೈಲ್ ಆ್ಯಪ್ ಮೂಲಕ ಸಂಗ್ರಹ ಮಾಡಲಾಗುತ್ತದೆ ಮತ್ತು ಗಣತಿ ನಡೆಸುವರರಿಗೆ ತಮ್ಮ ಮೊಬೈಲ್ ಅನ್ನೇ ಬಳಸಲು ಉತ್ತೇಜನ ನೀಡಲಾಗುತ್ತದೆ ಎಂದು ರಿಜಿಸ್ಟಾರ್ ಜನರಲ್ ಆಫ್ ಇಂಡಿಯಾದ ಅಧಿಕಾರಿಗಳು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.