ಸಿಕ್ಕಿಂ: 107 ವರ್ಷದ ಸುಮಿತ್ರಾ ರಾಯ್ ಅವರು, ಸಿಕ್ಕಿಂನ ಅತೀ ಹಿರಿಯ ಮತದಾರಳಾಗಿ ಹೊರಹೊಮ್ಮಿದ್ದಾರೆ. ಇಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಅವರು ಮತದಾನ ಮಾಡಿ ಎಲ್ಲಾ ಕಿರಿಯರಿಗೂ ಪ್ರೇರಣಾಶೀಲರಾಗಿದ್ದಾರೆ.
ರಾಯ್ ಅವರು ದಕ್ಷಿಣ ಸಿಕ್ಕಿಂನ ಪೊಕ್ಲೋಕ್ ಕಮ್ರಾಂಗ್ ಸಮೀಪದ ಕಮ್ರಾಂಗ್ ಸೆಕಂಡರಿ ಸ್ಕೂಲ್ ಮತಗಟ್ಟೆಗೆ ವ್ಹೀಲ್ ಚೇರ್ ಮೂಲಕ ಆಗಮಿಸಿ ಮತ ಚಲಾಯಿಸಿದ್ದಾರೆ.
ತಮ್ಮ ಹಕ್ಕನ್ನು ಚಲಾವಣೆ ಮಾಡಿದ ಬಳಿಕ ರಾಯ್ ಅವರು ತಮ್ಮ ಐಡಿ ಕಾರ್ಡ್ ಜೊತೆಗೆ ಫೋಟೋಗೆ ಫೋಸ್ ನೀಡಿದ್ದಾರೆ.
ಸಿಕ್ಕಿಂನಲ್ಲಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳು ನಡೆಯುತ್ತಿದೆ. ಅಲ್ಲಿ 32 ವಿಧಾನಸಭಾ ಕ್ಷೇತ್ರವಿದೆ ಮತ್ತು ಒಂದು ಲೋಕಸಭಾ ಕ್ಷೇತ್ರವಿದೆ.
ಸಿಕ್ಕಿಂನಾದ್ಯಂತ ಸ್ಥಾಪಿಸಲಾಗಿರುವ 567 ಮತಗಟ್ಟೆಗಳಲ್ಲಿ ಚುನಾವಣೆ ನಡೆಯುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.