ಮುಂಬಯಿ: ಭಾರತದ ಅತಿದೊಡ್ಡ ಸಾರ್ವಜನಿಕವಾಗಿ ಪಟ್ಟಿಮಾಡಲಾದ ಕಂಪೆನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಪ್ರವೇಶಿಸಲು ಸಿದ್ಧವಾಗಿದೆ. ಮುಂದಿನ 10 ವರ್ಷಗಳಲ್ಲಿ 75 ಬಿಲಿಯನ್ ಡಾಲರ್ ಮೌಲ್ಯದ ಹೂಡಿಕೆಯೊಂದಿಗೆ ಮುಂಬೈ ಬಳಿ ಮುಖೇಶ್ ಅಂಬಾನಿಯವರು ಮೆಗಾ ಸಿಟಿ ನಿರ್ಮಾಣಕ್ಕೆ ಬ್ಲೂಪ್ರಿಂಟ್ ತಯಾರಿಸಿದ್ದಾರೆ.
ರಿಲಾಯನ್ಸ್ ಸಂಸ್ಥೆಯು ಯೋಜನೆಯನ್ನು ಅಭಿವೃದ್ಧಿಪಡಿಸುವ ಮತ್ತು ನಿರ್ವಹಿಸುವ ಕಾರ್ಯವನ್ನು ವಿಶೇಷ ಯೋಜನಾ ಪ್ರಾಧಿಕಾರದ ಮೂಲಕ ಮಾಡಲಿದೆ. ಈ ಯೋಜನೆಯನ್ನು ಅನುಷ್ಠಾನಗೊಳಿಸಲಿರುವ ನವೀ ಮುಂಬಯಿ ವಿಶೇಷ ಆರ್ಥಿಕ ವಲಯ (ಎನ್ಎಂಎಸ್ಇಝಡ್)ವು ಜವಾಹರಲಾಲ್ ನೆಹರೂ ಪೋರ್ಟ್ ಟ್ರಸ್ಟ್ ಬಳಿ 4,300 ಎಕರೆ ಭೂಮಿಯನ್ನು ಈಗಾಗಲೇ ಹೊಂದಿದೆ. ಹೊಸ ವಿಮಾನ ನಿಲ್ದಾಣವೂ ಸಹ ಶೀಘ್ರದಲ್ಲೇ ಸ್ಥಾಪನೆಯಾಗಲಿದೆ. ಹೀಗಾಗಿ ಹೊಸದಾಗಿ ನಿರ್ಮಾಣಗೊಳ್ಳಲಿರುವ ಮೆಗಾ ಸಿಟಿಯು ಭೂಮಿ, ಗಾಳಿ ಮತ್ತು ಸಮುದ್ರ ಮಾರ್ಗಗಳ ಮೂಲಕ ಸುಲಭವಾಗಿ ಲಭ್ಯವಾಗಲಿದೆ.
ಮೆಗಾಸಿಟಿಯನ್ನು ಸಿಂಗಾಪುರ ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆ ಮತ್ತು ನಿರ್ವಹಿಸಲಾಗುತ್ತದೆ. ಇದು ಮಹಾರಾಷ್ಟ್ರದ ಮೊದಲ ಏಕೀಕೃತ ಕೈಗಾರಿಕಾ ಯೋಜನೆಯಾಗಿದೆ. ಜೇಮ್ಶೆಡ್ ಪುರ ಮತ್ತು ಜಾಮ್ನಗರ್ ದೇಶದ ಇತರ ಸಂಘಟಿತ ಕೈಗಾರಿಕಾ ಯೋಜನೆಗಳಾಗಿವೆ. “ರಿಲಾಯನ್ಸ್ ಸಂಸ್ಥೆ ರೂಪಿಸುತ್ತಿರುವ ಯೋಜನೆಯೊಳಗಿನ ಯೋಜನೆಯ ಅತೀದೊಡ್ಡ ಸಿಂಗಲ್ ಪ್ರಾಜೆಕ್ಟ್ ಇದಾಗಿದೆ, ಈ ಯೋಜನೆಯಲ್ಲಿನ ಪ್ರತಿಯೊಂದು ಅಂಶವೂ ಸ್ವತಃ ಒಂದು ಯೋಜನೆಯಾಗಿರುತ್ತದೆ” ಎಂದು ಯೋಜನೆಗೆ ಸಂಬಂಧಪಟ್ಟ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ. “ಜಿಯೋದಂತೆಯೇ, ಗುಣಮಟ್ಟ ಮತ್ತು ಅಸಾಧಾರಣತೆಗೆ ಸಂಬಂಧಿಸಿದಂತೆ ಇದು ದೇಶದಲ್ಲಿ ಒಂದು ಅಲೆಯನ್ನು ಇದು ಸೃಷ್ಟಿಸುತ್ತದೆ” ಎಂದು ಹೇಳಿದ್ದಾರೆ. ಅರ್ಧ ಮಿಲಿಯನ್ ಜನರಿಗೆ ಇದು ವಸತಿ ಕಲ್ಪಿಸಲಿದೆ.
ಹೊಸದಾಗಿ ನಿರ್ಮಿಸಿದ ಮೆಗಾಸಿಟಿಯ ಮೂಲಕ ದಕ್ಷಿಣ ಮುಂಬೈ ಮತ್ತು ನವೀ ಮುಂಬಯಿಗೆ ಸುಲಭವಾಗಿ ತಲುಪಬಹುದು. ಇದು ದಕ್ಷಿಣ ಮುಂಬೈಯಲ್ಲಿ ರಿಯಲ್ ಎಸ್ಟೇಟ್ ದರಗಳನ್ನು ತಗ್ಗಿಸಲಿದೆ ಮತ್ತು ಮುಖ್ಯ ನಗರದ ಜನನಿಬಿಡತೆಯನ್ನೂ ತಗ್ಗಿಸಲಿದೆ. “ನೇರ ರಸ್ತೆ ಸಂಪರ್ಕದೊಂದಿಗೆ, ಇದು ಮುಂಬೈಯನ್ನು ಬದಲಾಯಿಸಲಿದೆ. ವಲಸೆಯನ್ನು ಕಡಿಮೆ ಮಾಡಲಿದೆ, ಮುಂಬಯಿಗಿಂತ ಇಲ್ಲಿನ ದರಗಳು ಅಗ್ಗವಾಗಿರಲಿದೆ ಎಂದು ರಿಯಲ್ ಎಸ್ಟೇಟ್ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.