ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಗುರುವಾರ ನವದೆಹಲಿಯ ವಿಜ್ಞಾನ ಭವನದಲ್ಲಿ 3 ಮಹತ್ವದ ಯೋಜನೆಗಳಾದ ಸ್ಮಾರ್ಟ್ ಸಿಟಿ ಯೋಜನೆ, ಅಮೃತ್ Atal Mission for Rejuvenation and Urban Transformation (AMRUT) ಮತ್ತು ಪ್ರಧಾನ್ ಮಂತ್ರಿ ಆವಾಜ್ ಯೋಜನೆಗೆ ಚಾಲನೆ ನೀಡಿದರು.
ದೇಶದ ನಗರಗಳನ್ನು ಮತ್ತು ಪಟ್ಟಣಗಳನ್ನು ಪ್ರಗತಿ ಇಂಜಿನ್ಗಳಾಗಿ ಅಭಿವೃದ್ಧಿ ಪಡಿಸುವುದೇ ಈ ಮೂರು ಯೋಜನೆಯ ಉದ್ದೇಶವಾಗಿದೆ.
ಈ ವೇಳೆ ಮಾತನಾಡಿದ ಮೋದಿ, ‘ನಗರಗಳಲ್ಲಿ ಮೂಲಭೂತ ಸೌಕರ್ಯವನ್ನು ಒದಗಿಸುವುದು, ಸ್ಮಾರ್ಟ್ ಆಪ್ಗಳ ಮೂಲಕ ಸೇವೆಗಳನ್ನು ಸುಧಾರಿಸುವುದು, ಸ್ವಚ್ಛ ಮತ್ತು ಸುಸ್ಥಿತ ಪರಿಸರವನ್ನು ನಿರ್ಮಾಣ ಮಾಡುವುದು ಆ ಮೂಲಕ ಜನರ ಜೀವನ ಮಟ್ಟವನ್ನು ಸುಧಾರಿಸುವುದು ಸ್ಮಾರ್ಟ್ ಸಿಟಿ ಯೋಜನೆಯ ಉದ್ದೇಶ’ ಎಂದರು.
ಅಲ್ಲದೇ ಹಣೆಬರಹ ಎಂದು ಭಾವಿಸಿ ಬಡವರನ್ನು ನಾವು ಕೈಬಿಡಲಾರೆವು ಎಂದು ಭರವಸೆ ನೀಡಿದ ಪ್ರಧಾನಿ, ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 40ರಷ್ಟು ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ. ಅವರ ಜೀವನಮಟ್ಟವನ್ನು ಉನ್ನತೀಕರಿಸುವುದು ಸರ್ಕಾರದ ಜವಾಬ್ದಾರಿ. ಸರ್ಕಾರ ಬಡವರ ಬಗ್ಗೆ ಕಾಳಜಿ ಹೊಂದಿದೆ. ಸರ್ಕಾರ ಬಡವರ ಕೈ ಬಿಡದು’ ಎಂದಿದ್ದಾರೆ.
ಈ ಮೂರು ಯೋಜನೆಗೆ ಕೇಂದ್ರ ಸರ್ಕಾರ ೪ ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.