ಬಾಗ್ದಾದ್; ಇರಾಕ್ ಮತ್ತು ಸಿರಿಯಾದಲ್ಲಿ ಸ್ವತಂತ್ರ ಇಸ್ಲಾಮಿಕ್ ರಾಷ್ಟ್ರವನ್ನು ನಿರ್ಮಾಣ ಮಾಡುವ ಸಲುವಾಗಿ ಮಾನವೀಯತೆಯೇ ಮರೆತು ಕ್ರೂರ ರೀತಿಯಲ್ಲಿ ಹೋರಾಟ ನಡೆಸುತ್ತಿರುವ ಇಸಿಸ್ ಉಗ್ರರು ಇದೀಗ ತಮ್ಮದೇ ಆದ ನಾಣ್ಯಗಳನ್ನು ಬಿಡುಗಡೆ ಮಾಡಲು ಹೊರಟಿದ್ದಾರೆ.
ಪ್ರಸ್ತುತ ಪ್ರಚಲಿತದಲ್ಲಿರುವ ಕರೆನ್ಸಿಗಳನ್ನು ಕಿತ್ತು ಹಾಕಿ ತಮ್ಮದೇ ಆದ ಕರೆನ್ಸಿಗಳನ್ನು ಆರಂಭಿಸಲು ಈ ಉಗ್ರರು ಪ್ರಯತ್ನ ಪಡುತ್ತಿದ್ದಾರೆ. ಈಗಾಗಲೇ ತಮ್ಮದೇ ಆದ ನಾಣ್ಯಗಳನ್ನು ಹೊರತಂದಿದ್ದಾರೆ.
ಹಲವು ಬಗೆಯ ನಾಣ್ಯಗಳನ್ನು ಟ್ವಿಟರ್ ಮೂಲಕ ಈ ಉಗ್ರರು ಪ್ರದರ್ಶಿಸಿದ್ದು, ಇದರಲ್ಲಿ ಜಗತ್ತಿನ ಚಿತ್ರ, ಗೋಧಿಯ ಕಾಂಡದ ಚಿತ್ರ ಸೇರಿದಂತೆ ಹಲವ್ಉ ಚಿತ್ರಗಳಿವೆ. ಈ ನಾಣ್ಯಗಳನ್ನು ಇರಾಕ್ ಮತ್ತು ಸಿರಿಯಾದಲ್ಲಿ ಜಾರಿಗೊಳಿಸಲು ಇವರು ಯೋಜಿಸಿದ್ದಾರೆ ಎಂದು ಶಂಕಿಸಲಾಗಿದೆ.
ಚಿನ್ನ, ಬೆಳ್ಳಿ, ತಾಮ್ರದ ನಾಣ್ಯಗಳನ್ನೂ ಹೊರತರಲು ಇಸ್ಲಾಮಿಕ್ ಸ್ಟೇಟ್ಸ್ ಉಗ್ರ ಸಂಘಟನೆಯ ಹಣಕಾಸು ಸಮಿತಿ ನಿರ್ಧರಿಸಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.