ನವದೆಹಲಿ: ಭಾರತದ ಮರಳು ಶಿಲ್ಪದ ಬಗ್ಗೆ ಯೋಚಿಸಿದಾಗ ನಮಗೆ ಮೊದಲು ಹೊಳೆಯುವ ಹೆಸರು ಸುದರ್ಶನ್ ಪಟ್ನಾಯಕ್. ಮರಳಿನ ಮೂಲಕವೇ ಸಮಕಾಲೀನ ಆಗು ಹೋಗುಗಳ ಬಗ್ಗೆ ಮಾಹಿತಿ ನೀಡುವ ಅಪ್ರತಿಮ ಮರಳು ಶಿಲ್ಪಿ ಇವರು. ಪ್ರಸ್ತುತ ಜಪಾನಿನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಮರಳು ಶಿಲ್ಪ ಪ್ರದರ್ಶನದಲ್ಲಿ ಭಾಗಿಯಾಗಿರುವ ಅವರು, ಅಲ್ಲಿ ಕೊನಾರ್ಕಿನ ಸೂರ್ಯ ದೇವಾಲಯದ ಐತಿಹಾಸಿಕ ಚಕ್ರವನ್ನು ರಚಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಸುದರ್ಶನ್ ಅವರು ರಚಿಸಿದ ಈ ಮರಳು ಶಿಲ್ಪ, ಅಂತಾರಾಷ್ಟ್ರೀಯ ಮರಳು ಶಿಲ್ಪ ಪ್ರದರ್ಶನದಲ್ಲಿ ಜಾದೂ ಮಾಡಿದೆ. ಎಲ್ಲರೂ ಇವರ ಶಿಲ್ಪವನ್ನು ನೋಡಲು ಮುಗಿ ಬೀಳುತ್ತಿದ್ದಾರೆ.
ಒರಿಸ್ಸಾದಲ್ಲಿನ ಕೊನಾರ್ಕ್ ಸೂರ್ಯ ದೇವಾಲಯ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿದೆ. ಇಂತಹ ಅದ್ಭುತವಾದ ದೇವಾಲಯದಲ್ಲಿನ ಅತ್ಯದ್ಭುತ ಚಕ್ರದ ಪ್ರತಿಬಿಂಬವನ್ನು ಅವರು ಜಪಾನಿನಲ್ಲಿ ರಚಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಜಗತ್ತಿನ 21 ಮರಳು ಶಿಲ್ಪಿಗಳು ಈ ಅಂತಾರಾಷ್ಟ್ರೀಯ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಸುದರ್ಶನ್ ಅವರು ತಮ್ಮ ಕಲಾಕೃತಿಯನ್ನು ಟ್ವಟರ್ನಲ್ಲಿ ಹಂಚಿಕೊಂಡಿದ್ದು, ಎಲ್ಲರ ಪ್ರಶಂಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಒರಿಸ್ಸಾ ಪ್ರವಾಸೋದ್ಯಮ ಇಲಾಖೆ ಅವರ ಕಾರ್ಯಕ್ಕೆ ಅಭಿನಂದನೆಗಳನ್ನು ತಿಳಿಸಿದೆ.
My sand sculpture of #Konark wheel at International #SandArt Exhibition in a sand museum in Japan. 21 artists from around the world are participating in this exhibition. pic.twitter.com/6kd65cF837
— Sudarsan Pattnaik (@sudarsansand) March 28, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.