ನವದೆಹಲಿ : ಚೌಕಿದಾರ್ ಚೋರ್ ಹೈ ಎಂಬ ಕಾಂಗ್ರೆಸ್ ಪಕ್ಷದ ಘೋಷಣೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಬುಧವಾರ ಕಿಡಿಕಾರಿದ್ದಾರೆ. ಇಂತಹ ಘೋಷ ವಾಕ್ಯ ದೇಶದ ಕಾವಲುಗಾರರನ್ನು ಅವಮಾನಿಸಿದಂತೆ ಎಂದಿರುವ ಅವರು ಚೌಕಿದಾರ್ ವಿಷಯ ಈ ಸೀಸನ್ನ ಅಚ್ಚುಮೆಚ್ಚಿನ ವಿಷಯವಾಗಿದೆ ಎಂದಿದ್ದಾರೆ.
ದೇಶಾದ್ಯಂತದ ಸುಮಾರು 25 ಲಕ್ಷ ಕಾವಲುಗಾರರೊಂದಿಗೆ ರೇಡಿಯೋ ಕಾನ್ಫರೆನ್ಸ್ ಮೂಲಕ ಸಂವಾದವನ್ನು ನಡೆಸಿ ಅವರು ಮಾತನಾಡಿದರು. ಬಿಜೆಪಿಯ ಮೈ ಭೀ ಚೌಕಿದಾರ್ ಎಂಬ ಅಭಿಯಾನದ ಭಾಗವಾಗಿ ಈ ಸಂವಾದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.
ಈಗ ಎಲ್ಲರೂ ಚೌಕಿದಾರರ ಬಗ್ಗೆ ಮಾತನಾಡುತ್ತಿದ್ದಾರೆ, ಇಂದು ಇಡೀ ದೇಶವೇ ಚೌಕಿದಾರನಾಗುವ ಪ್ರತಿಜ್ಞೆಯನ್ನು ಮಾಡಿದೆ. ಚೌಕಿದಾರ್ ಚೋರ್ ಎಂದು ನಿರಂತರವಾಗಿ ಹೇಳುವುದು ಕಾವಲುಗಾರ ಸಮುದಾಯವನ್ನು ಅವಮಾನಿಸಿದಂತೆ ಎಂದರು. ಯಾವುದೇ ಪಕ್ಷ ಅಥವಾ ವ್ಯಕ್ತಿಯ ಹೆಸರನ್ನು ಹೇಳದೆಯೇ ಮೋದಿಯವರು ಚೌಕಿದಾರ್ ಚೋರ್ ಹೇ ಎಂಬ ಹೇಳಿಕೆಯನ್ನು ಕಟುವಾಗಿ ಇಂದು ಖಂಡಿಸಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಚೌಕಿದಾರ ವಿರುದ್ಧ ಅಪಪ್ರಚಾರ ಮಾಡುವಂತಹ ಹೇಳಿಕೆಗಳನ್ನು ನೀಡುತ್ತಿವೆ. ಇದರಿಂದ ನಿಮಗೆ ನೋವು ಉಂಟಾಗಿರಬಹುದು. ಈಗ ಇದಕ್ಕಾಗಿ ನಾನು ನಿಮ್ಮ ಬಳಿ ಕ್ಷಮೆಯಾಚನೆ ಮಾಡುತ್ತೇನೆ ಎಂದು ಕಾವಲುಗಾರರಿಗೆ ಮೋದಿ ತಿಳಿಸಿದರು.
ಜೀವನದಲ್ಲಿ ನಾವು ಅತ್ಯುನ್ನತ ಪ್ರಗತಿಯನ್ನು ಕಾಣಬೇಕು ನಮ್ಮ ಮಕ್ಕಳನ್ನು ವೈದ್ಯರಿಗಾಗಿ, ಎಂಜಿನಿಯರುಗಳಾಗಿ, ಸೇನೆಯಲ್ಲಿ ಯೋಧರುಗಳನ್ನಾಗಿ ಮತ್ತು ದೇಶದ ಪ್ರಧಾನಿಯನ್ನಾಗಿ ಮಾಡಬೇಕು. ಆದರೆ ಅವರೊಳಗಿನ ಚೌಕಿದಾರ ಸಂಸ್ಕೃತಿಯನ್ನು ಸದಾ ಜಾಗೃತವಾಗಿಡಬೇಕು ಎಂದರು.
ಸಭೆ ಸಮಾರಂಭಗಳಲ್ಲಿ ತಮ್ಮನ್ನು ತಾವು ಚೌಕಿದಾರ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್ ಹೆಸರಿನ ಮೊದಲು ಚೌಕಿದಾರ ಎಂಬ ಶಬ್ದವನ್ನು ಸೇರಿಸಿಕೊಂಡಿದ್ದಾರೆ ಅಲ್ಲದೆ ತಮ್ಮ ಬೆಂಬಲಿಗರಿಗೂ ಅದೇ ರೀತಿ ಮಾಡುವಂತೆ ಅವರು ಕರೆ ನೀಡಿದ್ದಾರೆ. ಈಗಾಗಲೇ ಹಲವಾರು ಮಂದಿ ಬಿಜೆಪಿ ನಾಯಕರು ಮತ್ತು ಮೋದಿ ಬೆಂಬಲಿಗರು ತಮ್ಮ ಟ್ವಿಟ್ಟರ್ ಹೆಸರಿನ ಮೊದಲಿನ ಚೌಕಿದಾರ ಎಂಬ ಶಬ್ದವನ್ನು ಸೇರ್ಪಡೆಗೊಳಿಸಿದ್ದಾರೆ.
ಇಂದು ದೇಶದ 25 ಲಕ್ಷ ಕಾವಲುಗಾರರಿಗೆ ರೇಡಿಯೋ ಕಾನ್ಫರೆನ್ಸ್ ಮೂಲಕ ಸಂವಾದವನ್ನು ನಡೆಸುವ ಮೂಲಕ ಮೋದಿಯವರು ಮೈ ಭೀ ಚೌಕಿದಾರ್ ಅಭಿಯಾನವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.