ನವದೆಹಲಿ: ವಿಶ್ವದ 10ನೇ ಅತೀ ಹೆಚ್ಚು ಕಾಯ್ದಿಟ್ಟ ಚಿನ್ನವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಂದಿರಲಿದೆ ಎಂದು ಇತ್ತೀಚಿಗಷ್ಟೇ ಬಿಡುಗಡೆಯಾದ ವರ್ಲ್ಡ್ ಗೋಲ್ಡ್ ಕೌನ್ಸಿಲ್ನ ದತ್ತಾಂಶ ಹೇಳಿದೆ ಎಂದು ಬ್ಯುಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ. ಈ ಮೂಲಕ ಶೀಘ್ರದಲ್ಲೇ ಭಾರತ ನೆದರ್ಲ್ಯಾಂಡ್ನ್ನು ಹಿಂದಿಕ್ಕಲಿದೆ.
2019ರ ಜನವರಿಯಲ್ಲಿ ಆರ್ಬಿಐ ಒಟ್ಟು 6.5 ಟನ್ ಬಂಗಾರವನ್ನು ತನ್ನ ಖಜಾನೆಗೆ ಸೇರಿಸಿಕೊಂಡಿದೆ. ಹೀಗಾಗಿ ಅದರ ಬಳಿ ಇರುವ ಚಿನ್ನದ ಪ್ರಮಾಣ 607 ಟನ್ಗೆ ಏರಿಕೆಯಾಗಿದೆ. ಪ್ರಸ್ತುತ 10ನೇ ಸ್ಥಾನದಲ್ಲಿರುವ ನೆದರ್ಲ್ಯಾಂಡ್ ಬಳಿ 612.5 ಟನ್ ಬಂಗಾರವಿದೆ. ಆರ್ಬಿಐಗಿಂತ 5.5 ಟನ್ ಹೆಚ್ಚಿದೆ.
ಅಲ್ಲದೆ, ಇತರ ರಾಷ್ಟ್ರಗಳೊಂದಿಗೆ ಹೋಲಿಸಿದಾಗ ಭಾರತವು ಹೊಂದಿರುವ ಚಿನ್ನದ ಪಾಲು ವರ್ಷಗಳಲ್ಲಿ ಸ್ಥಿರವಾಗಿ ಏರಿಕೆ ಕಂಡಿದೆ ಮತ್ತು 2018 ರ ಅಂತ್ಯದ ವೇಳೆಗೆ ಏರಿಕೆ 6.2 ಶೇಕಡಾ ಇತ್ತು.
ಕಾಯ್ದಿಟ್ಟ ಚಿನ್ನವನ್ನು ಹೆಚ್ಚಳ ಮಾಡಿಕೊಂಡಿದ್ದು ಕೇವಲ ಆರ್ಬಿಐ ಮಾತ್ರವಲ್ಲ, ದತ್ತಾಂಶದ ಪ್ರಕಾರ, ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕುಗಳು ಜನವರಿ ತಿಂಗಳೊಂದರಲ್ಲಿ 35 ಟನ್ಗಳಷ್ಟು ಚಿನ್ನವನ್ನು ತಮ್ಮ ಬಳಿ ಸೇರ್ಪಡೆಗೊಳಿಸಿವೆ.
ಅಮೆರಿಕಾದ ಡಾಲರ್ಗಳು ಬಲಿಷ್ಠಗೊಳ್ಳುವ ಸಂದರ್ಭದಲ್ಲಿ ಬಂಗಾರಗಳು ಅಗತ್ಯ ಬೀಳುತ್ತವೆ ಎಂಬ ಭಾವನೆ ಕೇಂದ್ರೀಯ ಬ್ಯಾಂಕಿಗಳಿಗಿವೆ, ಇತರ ಕರೆನ್ಸಿಗಳಿಗೆ ಹೋಲಿಸಿದರೆ ಅಮೆರಿಕನ್ ಡಾಲರ್ಗೆ ಬಲಿಷ್ಠ ಸ್ಪರ್ಧೆಯೊಡ್ಡಬಲ್ಲ ಸಾಮರ್ಥ್ಯ ಚಿನ್ನಕ್ಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.