ನವದೆಹಲಿ: ಸ್ವಂತ ದೇಶದ ಗುಪ್ತಚರ ಮಾಹಿತಿಯ ಬದಲು ಅಂತಾರಾಷ್ಟ್ರೀಯ ಮಾಧ್ಯಮಗಳನ್ನೇಕೆ ನಂಬುತ್ತೀರಿ ಎಂದು ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ಪ್ರತಿಪಕ್ಷಗಳನ್ನು ಪ್ರಶ್ನಿಸಿದ್ದಾರೆ. ಪಾಕಿಸ್ಥಾನದೊಳಕ್ಕೆ ನುಗ್ಗಿ ನಡೆಸಿದ ವೈಮಾನಿಕ ದಾಳಿಯಲ್ಲಿ ಸತ್ತ ಉಗ್ರರ ಸಂಖ್ಯೆ ಎಷ್ಟು ಎಂದು ಪ್ರಶ್ನಿಸಿದ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಅವರಿಗೆ ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡಿದ ಅವರು, ಪಾಕಿಸ್ಥಾನಕ್ಕೆ ಹೋಗಿ ನೀವೇ ಲೆಕ್ಕ ಹಾಕಿಕೊಂಡು ಬನ್ನಿ ಎಂದಿದ್ದಾರೆ.
‘ಕಪಿಲ್ ಸಿಬಲ್ ಅವರೇ, ನಮ್ಮ ಗುಪ್ತಚರಕ್ಕಿಂತ ಹೆಚ್ಚಾಗಿ ಅಂತಾರಾಷ್ಟ್ರೀಯ ಮಾಧ್ಯಮಗಳನ್ನೇ ನೀವು ನಂಬುತ್ತೀರಾ? ಏರ್ ಸ್ಟ್ರೈಕ್ನಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ಮಾಧ್ಯಮದಲ್ಲಿ ವರದಿ ಬಂದಿದ್ದರೆ ನೀವು ಬಹುಶಃ ಹೆಚ್ಚು ಖುಷಿ ಪಡುತ್ತಿದ್ದಿರೇನೋ. ಸರ್, ನಮಗಾಗಿ ನೀವು ಲಂಡನ್ಗೆ ತೆರಳಿ ಮತಯಂತ್ರ ಸರಿಯಿಲ್ಲ ಎಂದು ಸಾಬೀತುಪಡಿಸಲು ಮುಂದಾಗಿದ್ದಿರಿ, ಅದೇ ರೀತಿ ಬಾಲಾಕೋಟ್ಗೂ ತೆರಳಿ ಪರಿಶೀಲನೆ ಮಾಡುತ್ತೀರಾ?’ ಎಂದು ರಾಥೋಡ್ ಸಿಬಲ್ ಅವರಿಗೆ ಟ್ವೀಟ್ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.
Kapil Sibal ji:
You believe international media over own Intelligence agencies?
You seem happy when media quoted by you says “no losses in strike”?
..and sir, for us you went to london🤦🏽♂️ to find evidence against EVMs, will you please also go to Balakot to check? https://t.co/JefbNnGdqP
— Rajyavardhan Rathore (@Ra_THORe) March 5, 2019
ಕಪಿಲ್ ಸಿಬಲ್, ಮಮತಾ ಬ್ಯಾನರ್ಜಿ, ದಿಗ್ವಿಜಯ್ ಸಿಂಗ್ ಸೇರಿದಂತೆ ಹಲವರು ವೈಮಾನಿಕ ದಾಳಿಯಲ್ಲಿ ಸತ್ತವರ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದ್ದರು.
ಇಂತಹ ಅನುಮಾನಗಳಿಗೆ ತಿರುಗೇಟು ನೀಡಿದ್ದ ವಾಯುಸೇನಾ ಮುಖ್ಯಸ್ಥ ಮಾಷ್ಲ್ ಬಿಎಸ್ ಭನೋವಾ ಅವರು, ಏರ್ ಸ್ಟ್ರೈಕ್ ಬಳಿಕ ಪಾಕಿಸ್ಥಾನ ವರ್ತಿಸಿದ ರೀತಿಯಿಂದಲೇ ದಾಳಿ ಎಷ್ಟು ಭೀಕರವಾಗಿತ್ತು ಎಂದು ತಿಳಿದು ಬರುತ್ತದೆ. ಸತ್ತವರ ಲೆಕ್ಕ ಹಾಕುವ ಕೆಲಸ ನಮ್ಮದಲ್ಲ. ನಮಗೆ ನಿರ್ದಿಷ್ಟ ಗುರಿಯಿತ್ತು, ಆ ಗುರಿಯನ್ನು ತಲುಪಿ ದಾಳಿ ನಡೆಸಿ ಬಂದಿದ್ದೇವೆ. ಕಟ್ಟಡದೊಳಗೆ ಯಾರೆಲ್ಲಾ ಇದ್ದರೋ ಅವರೆಲ್ಲಾ ಸತ್ತಿರುತ್ತಾರೆ ಎಂದಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.