ವಾಷಿಂಗ್ಟನ್: ಪೆನ್ಸಿಲ್ವೇನಿಯಾ ಯೂನಿವರ್ಸಿಟಿಯ ಉಪಾಧ್ಯಕ್ಷೆ ಮತ್ತು ಕಾರ್ಯದರ್ಶಿಯಾಗಿ ಭಾರತೀಯ ಮೂಲದ ಅಮೆರಿಕನ್ ಪ್ರಜೆ ಮೇಧಾ ನಾರ್ವೆಕರ್ ಅವರು ಆಯ್ಕೆಯಾಗಿದ್ದಾರೆ. ನಾರ್ವೇಕರ್ ಅವರು ವಾರ್ಟನ್ ಸ್ಕೂಲ್ನಿಂದ ಎಂಬಿಎ ಪದವಿಯನ್ನು ಪಡೆದಿದ್ದು, ಜುಲೈ 1ರಿಂದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಉಪಾಧ್ಯಕ್ಷೆಯಾಗಿ ಅಧಿಕಾರವನ್ನು ವಹಿಸಲಿದ್ದಾರೆ.
ನಾರ್ವೆಕರ್ ಅವರು ಪೆನ್ಸ್ ಡೆವಲಪ್ಮೆಂಟ್ ಆ್ಯಂಡ್ ಅಲುಮಿನಿ ರಿಲೇಷನ್ಸ್ ಆಫೀಸ್ನಲ್ಲಿ ಮೂವತ್ತೆರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಆಯ್ಕೆಗೂ ಮುನ್ನ ಅವರು ಪೆನ್ಸ್ ಡೆವಲಪ್ಮೆಂಟ್ ಆ್ಯಂಡ್ ಅಲುಮಿನಿ ರಿಲೇಷನ್ಸ್ನಲ್ಲಿ ಹಿರಿಯ ಅಸೋಸಿಯೇಟ್ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದಾರೆ.
ಯು ಪೆನ್ ಅಧ್ಯಕ್ಷ ಆ್ಯಮ್ ಗುಡ್ ಮನ್ ಅವರು ಹೇಳುವಂತೆ, ಮೇದಾ ಅವರು ಪೆನ್ಸಿಲ್ವೇನಿಯಾದಾದ್ಯಂತ ಅತ್ಯಂತ ಗೌರವ ಮತ್ತು ಪ್ರತಿಷ್ಠೆಯನ್ನು ಹೊಂದಿದ್ದಾರೆ. ಆಕೆ ವಿಶ್ವವಿದ್ಯಾಲಯದ ಜನರೊಂದಿಗೆ ಅತ್ಯಂತ ಯಶಸ್ವಿಯಾಗಿ ಕಾರ್ಯಗಳನ್ನು ನಿರ್ವಹಿಸಿದ್ದಾರೆ, ಆಕೆ ಎಲ್ಲ ವಲಯಗಳಲ್ಲೂ ಅತ್ಯಂತ ಹೆಚ್ಚಿನ ಅನುಭವವನ್ನು ಹೊಂದಿದ್ದಾರೆ. ಟ್ರಸ್ಟಿಗಳೊಂದಿಗೆ ಹಿರಿಯ ಅಧಿಕಾರಿಗಳೊಂದಿಗೆ ವಿದೇಶಿ ವಿದೇಶಿಯರೊಂದಿಗೆ ಪೆನ್ಸ್ನ ಅತ್ಯಂತ ಉದಾರಿ ದಾನಿಗಳೊಂದಿಗೆ ನೇರವಾಗಿ ಕಾರ್ಯ ನಿರ್ವಹಿಸಿರುವ ಅವರಿಗೆ ವಿಶ್ವವಿದ್ಯಾಲಯದ ಉನ್ನತ ಉಪಾಧ್ಯಕ್ಷ ಹುದ್ದೆಯನ್ನು ಏರುವ ವಿಭಿನ್ನ ಸಾಮರ್ಥ್ಯವಿದೆ.
ನಾರ್ವೆಕರ್ ಅವರು 1981 ರಲ್ಲಿ ಸ್ಮಾರ್ಟ್ ಮೋರ್ ಕಾಲೇಜಿನಿಂದ ಪದವಿಯನ್ನು ಪಡೆದುಕೊಂಡಿದ್ದು, 1989 ರಲ್ಲಿ ಬರ್ತಾನ್ನಿಂದ ಎಂಬಿಎಯನ್ನು ಪಡೆದುಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.