ಭಾರತ ನಡೆಸಿದ ವೈಮಾನಿಕ ದಾಳಿ ಪಾಕಿಸ್ಥಾನಕ್ಕೆ ದಿಟ್ಟ ಸಂದೇಶವನ್ನು ರವಾನಿಸಿದೆ. ಸಂದೇಶ ಸ್ಪಷ್ಟ ಮತ್ತು ಗಟ್ಟಿಯಾಗಿದೆ- ನಮ್ಮೊಂದಿಗೆ ಕಾಲ್ಕೆರೆದು ಜಗಳಕ್ಕೆ ಬಂದರೆ ಪ್ರತ್ಯುತ್ತರ ನೀಡುತ್ತೇವೆ, ಕಠಿಣ ಪ್ರತ್ಯುತ್ತರ ನೀಡುತ್ತೇವೆ. ಈ ನೀತಿಯನ್ನು ಇತ್ತೀಚಿನ ಕೆಲವು ವರ್ಷಗಳಿಂದ ಭಾರತ ಪಾಲಿಸಿಕೊಂಡು ಬರುತ್ತಿದೆ. ಭಾರತದ ನೀತಿಯಲ್ಲಿ ಮಹತ್ವದ ಪರಿವರ್ತನೆಯನ್ನು ತಂದ ಕೀರ್ತಿ ನಮ್ಮ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ಸಲ್ಲಬೇಕು.
ಗುಪ್ತಚರ ಕಾರ್ಯಾಚರಣೆಗಳಲ್ಲಿ ಮಹತ್ತರವಾದ ಸಾಧನೆಯನ್ನು ಮಾಡಿರುವ ಅವರು, 1986ರ ಅವಧೀಯಲ್ಲೇ ಸೂಪರ್ಸ್ಪೈ ಎಂದೇ ಹೆಸರಾಗಿದ್ದಾರೆ. ಫೀಲ್ಡ್ ಏಜೆಂಟ್ ಆಗಿ, ಈಶಾನ್ಯದ ಬಂಡುಕೋರರನ್ನು ಮಟ್ಟ ಹಾಕುವಲ್ಲಿ ಮಹತ್ತರವಾದ ಕೊಡುಗೆ ನೀಡಿದ್ದಾರೆ. 1988ರಲ್ಲಿ ನಡೆದ ಆಪರೇಶನ್ ಬ್ಲ್ಯಾಕ್ ಥಂಡರ್ನಲ್ಲಿ ಇವರ ಕೊಡುಗೆ ಅತೀ ಮಹತ್ತರವಾಗಿದೆ. ಅಮೃತಸರದಲ್ಲಿ ರಿಕ್ಷಾ ಎಳೆಯುವವನಂತೆ ನಟಿಸಿ, ಇವರು ಕಾರ್ಯಾಚರಣೆಗೂ ಮುನ್ನ ಸ್ವರ್ಣದೇಗುಲದೊಳಗೆ ನಡೆಯುತ್ತಿದ್ದ ಚಟುವಟಿಕೆಗಳ ಮಾಹಿತಿಯನ್ನು ಪಡೆದುಕೊಳ್ಳಲು ಯಶಸ್ವಿಯಾಗಿದ್ದರು. ತಾನು ನಿಮಗೆ ಸಹಾಯ ಮಾಡಲು ಬಂದು ಐಎಸ್ಐ ಏಜೆಂಟ್ ಎಂದು ಅಲ್ಲಿದ್ದವರನ್ನು ನಂಬಿಸಿದ್ದರು.
ಭಾರತ ಪಾಕಿಸ್ಥಾನದ ಗಡಿಯಲ್ಲಿ ಆಕ್ರಮಣಕಾರಿ ಧೋರಣೆಯನ್ನು ತಳೆಯಲು ಇವರು ಮುಖ್ಯ ಕಾರಣೀಕರ್ತರಾಗಿದ್ದಾರೆ. 2014ರ ಅಕ್ಟೋಬರ್ 7ರಂದು ಬಿಎಸ್ಎಫ್ ನಿರ್ದೇಶಕರಿಗೆ ಸಮನ್ಸ್ ನೀಡಿದ್ದ ಇವರು, ಗಡಿಯಲ್ಲಿ ಪಾಕಿಸ್ಥಾನ ಒಂಚೂರು ಫೈರಿಂಗ್ ಮಾಡಿದರೂ ಪ್ರತ್ಯುತ್ತರವನ್ನು ಅತ್ಯಂತ ತೀಕ್ಷ್ಣವಾಗಿ ದೊಡ್ಡ ಮಟ್ಟದಲ್ಲೇ ನೀಡಬೇಕು ಎಂದು ಸೂಚನೆ ನೀಡಿದ್ದರು. ಇವರ ‘ಆಕ್ರಮಣಕಾರಿ ರಕ್ಷಣಾತ್ಮಕ’ ಕಾರ್ಯತಂತ್ರ ದೊಡ್ಡ ಮಟ್ಟದಲ್ಲೇ ಯಶಸ್ಸನ್ನು ನೀಡಿದೆ. ರಾಷ್ಟ್ರೀಯ ಭದ್ರತಾ ಸಲೆಹೆಗಾರರಾಗಿ ಇವರು ನೇಮಕವಾದ ಬಳಿಕ, ಭಾರತದ ಭದ್ರತಾ ನಿಯಮದಲ್ಲಿ ದೊಡ್ಡ ಮಟ್ಟದ ಪರಿವರ್ತನೆಯಾಗಿದೆ. ಶತ್ರು ನೆರೆಹೊರೆಯೊಂದಿಗೆ ಆಕ್ರಮಣಕಾರಿ ಧೋರಣೆಯನ್ನು ಇವರು ಬಲವಾಗಿ ಬೆಂಬಲಿಸುತ್ತಾರೆ.
ಭಾರತದ ವಿರುದ್ಧ ಪರೋಕ್ಷ ಯುದ್ಧ ಮಾಡಿದರೆ, ನೀವು ಹೆಚ್ಚು ರಕ್ತ ಹರಿಸಲು ಸಿದ್ಧರಾಗಿರಬೇಕಾಗುತ್ತದೆ ಎಂದು ಈಗಾಗಲೇ ಪಾಕಿಸ್ಥಾನಕ್ಕೆ ಸ್ಪಷ್ಟ ಸಂದೇಶವನ್ನು ನೀಡಲಾಗಿದೆ. ಅಧಿಕೃತವಾಗಿ ಏನೆಲ್ಲಾ ಬದಲಾಗಿದೆ ಎಂದರೆ, ಪಾಕಿಸ್ತಾನದ ಚಟುವಟಿಕೆಗಳನ್ನು ಖಂಡಿಸುವ ರಾಜಕೀಯ ಹೇಳಿಕೆಗಳು ಮತ್ತು ನಿಯಮಿತ ಆಕ್ರಮಣಶೀಲತೆಯು ಯೋಧರು ಹೇಗೆ ಪ್ರತಿಕ್ರಿಯೆ ನೀಡಬೇಕು ಎಂಬುದನ್ನು ನಿರ್ಧರಿಸುತ್ತಿಲ್ಲ. ಬಿಎಸ್ಎಫ್ ಮತ್ತು ಸೇನೆಯು ತಮ್ಮ ಮೇಲೆ ದಾಳಿಗಳಾದ ಕೈಕಟ್ಟಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿಗಳಿಲ್ಲ. ಅವರ ಮೇಲೆ ಫೈರಿಂಗ್ ಆದರೆ ಒಂದು ಮಟ್ಟ ಹೆಚ್ಚಿನ ಫೈರಿಂಗ್ ನಡೆಸುವಂತೆ ಅವರಿಗೆ ಸೂಚನೆ ನೀಡಲಾಗಿದೆ.
ದಾಳಿಗಳಾದ ಸಂದರ್ಭದಲ್ಲಿ ಏನೂ ಪರಿಹಾರ ಎಂಬ ಬಗ್ಗೆ ಮೂರ್ಖರಂತೆ ಹೇಳಿಕೆ ನೀಡುವ ಸ್ಥಿತಿಯಿಂದ ನಾವು ಆಚೆಗೆ ಬಂದಿದ್ದೇವೆ, ಆಕ್ರಮಣಕಾರಿ ರಕ್ಷಣಾತ್ಮಕ ನೀತಿಯನ್ನು ಅಳವಡಿಸಿಕೊಂಡಿದ್ದೇವೆ. ಇದಕ್ಕೆಲ್ಲಾ ಕಾರಣರಾದ ಅಜಿತ್ ದೋವಲ್. ಅವರಿಗೆ ನಾವು ಧನ್ಯವಾದಗಳನ್ನು ಹೇಳಬೇಕು. ‘ನೀವು ಒಂದು ಗುಂಡು ಹಾರಿಸಿದರೆ, ನಮ್ಮ ಗನ್ಗಳಿಂದ ಹೊರಡುವ ಗುಂಡುಗಳ ಲೆಕ್ಕವನ್ನು ನಾವು ಇಟ್ಟುಕೊಳ್ಳುವುದಿಲ್ಲ’ ಇದು ಭಾರತ ಶತ್ರುವಿಗೆ ನೀಡಿರುವ ಸಂದೇಶ. ಪಾಕಿಸ್ಥಾನ ಭಯೋತ್ಪಾದಕ ದಾಳಿಗಳನ್ನು ನಡೆಸಿದ ಬಳಿಕ ಮಾತುಕತೆಯೊಂದಿಗೆ ಸಮಸ್ಯೆ ಬಗೆಹರಿಸುವ ಕನಸನ್ನು ನಾವು ಬಿಟ್ಟು ಬಿಟ್ಟಿದ್ದೇವೆ. ಪಾಕ್ ಆಕ್ರಮಣಕ್ಕೆ ಪ್ರತಿ ಆಕ್ರಮಣ ಅತ್ಯಂತ ದಿಟ್ಟವಾಗಿಯೇ ನೀಡುತ್ತಿದ್ದೇವೆ.
ಭಾರತ ಪಾಕಿಸ್ಥಾನದೊಳಗೆ ನುಗ್ಗಿ ನಡೆಸಿದ ವೈಮಾನಿಕ ದಾಳಿ ನಾವೆಂದೂ ಹಿಂದೆ ತಿರುಗಿ ನೋಡುವುದಿಲ್ಲ ಎಂಬುದಕ್ಕೆ ಉದಾಹರಣೆಯಾಗಿದೆ. ಭಾರತದ ರಕ್ಷಣಾ ನೀತಿಯಲ್ಲಿ ಬದಲಾವಣೆಯನ್ನು ತಂದು, ಅದನ್ನು ಸರಿಯಾದ ದಾರಿಯಲ್ಲಿ ನಡೆಸುತ್ತಿರುವ ಶ್ರೇಯಸ್ಸು ದೋವಲ್ ಅವರಿಗೆ ಸಲ್ಲಬೇಕು.
source: Rightlog
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.