ಪ್ರೀತಿಯ ಪ್ರಧಾನಿ ಮೋದಿಯವರೇ,
ಈ ಹತ್ತು ದಿನಗಳು ಭಾರತಕ್ಕೆ ಕರಾಳ ದಿನಗಳಾಗಿವೆ. ಸಿಆರ್ಪಿಎಫ್ನ 44 ಯೋಧರು ಇಸ್ಲಾಮಿಕ್ ಭಯೋತ್ಪಾದಕರಿಂದ ಕೊಲೆಯಾಗಿದ್ದಾರೆ. ಎಷ್ಟು ದೊಡ್ಡ ನಷ್ಟ! ದೇಶಕ್ಕಾಗಿ ಕರ್ತವ್ಯ ನಿರ್ವಹಿಸುವ ವೇಳೆ ಹುತಾತ್ಮರಾದ ಯೋಧರ ಕುಟುಂಬಗಳು ಅನುಭವಿಸುತ್ತಿರುವ ನೋವನ್ನು, ದುಃಖವನ್ನು ಹೇಳಲು ಪದಗಳೇ ಸಿಗುತ್ತಿಲ್ಲ.
ಭಾರತದ ಉಪ್ಪು ತಿಂದ ಪ್ರತಿ ಭಾರತೀಯನೂ ಈ ಘಟನೆಯಿಂದ ಆಕ್ರೋಶಿತನಾಗಿದ್ದಾನೆ. ನೀವೂ ಕೂಡ ಇದನ್ನು ನಿಮ್ಮ ಭಾಷಣದಲ್ಲಿ ಉಲ್ಲೇಖ ಮಾಡಿದ್ದೀರಿ. ಇಂತಹ ಕೃತ್ಯವನ್ನು ಎಸಗಿ ನಮ್ಮ ನೆರೆಹೊರೆಯವರು ದೊಡ್ಡ ತಪ್ಪು ಮಾಡಿದ್ದಾರೆ, ಇದಕ್ಕೆ ಪ್ರತಿಫಲ ಅನುಭವಿಸುತ್ತಾರೆ ಎಂದು ಹೇಳಿದ್ದೀರಿ. ಈ ನಿಟ್ಟಿನಲ್ಲಿ ಕ್ರಮಗಳನ್ನು ಜರುಗಿಸಿದ್ದೀರಿ ಕೂಡ. ಪ್ರತಿ ದೇಶಪ್ರೇಮಿ, ಪ್ರತಿ ರಾಷ್ಟ್ರಪ್ರೇಮಿ ಭಾರತೀಯ ಕೂಡ ಪಾಕಿಸ್ಥಾನವನ್ನು ಶಿಕ್ಷಿಸಲು ಬಯಸುತ್ತಿದ್ದಾನೆ. ಸಾಮಾಜಿಕ ಜಾಲತಾಣಗಳ ತುಂಬಾ ಅಂತಹ ಆಕ್ರೋಶಗಳು ಹೊರಹೊಮ್ಮಿವೆ.
ಈ ನಿಟ್ಟಿನಲ್ಲಿ ನೀವು ಕೂಡ ನಾಗರಿಕರನ್ನು ಬೆಂಬಲಿಸಬೇಕು ಎಂದು ನಾನು ಬಯಸುತ್ತೇನೆ, ಜರುಗಿಸುವ ಕ್ರಮ ಕಡಿಮೆ ಅವಧಿಯ ಅತ್ಯುತ್ತಮ ಕ್ರಮವಾಗಿರಬೇಕು. ಸರಪಳಿ ತನ್ನ ದುರ್ಬಲ ಕೊಂಡಿಯವರೆಗೆ ಮಾತ್ರ ಬಲಿಷ್ಠವಾಗಿರುತ್ತದೆ. ಅದೇ ರೀತಿ ನಮ್ಮ ವಿಷಯದಲ್ಲಿ ನಮ್ಮ ದುರ್ಬಲತೆ ದೇಶದ ಹೊರಗೆ ಇಲ್ಲ, ನಮ್ಮ ದೇಶದ ಒಳಗೇ ಇದೆ. ವಿವಿಧ ವೃತ್ತಿಯನ್ನು ಮಾಡಿಕೊಂಡಿರುವ, ಬಲಿಷ್ಠ ಸಿದ್ಧಾಂತಗಳನ್ನು ಒಳಗೊಂಡ ಹಲವಾರು ಜನರನ್ನು ಇದು ಒಳಗೊಂಡಿದೆ.
ಈ ಜನರು ಮತ್ತು ಅವರ ಸಿದ್ಧಾಂತಗಳನ್ನು ಮೊದಲು ಹಿಮ್ಮೆಟ್ಟಿಸಬೇಕಾಗಿದೆ. ಇದುವರೆಗೆ ಅವರನ್ನು ಮಕ್ಕಳಂತೆ ಪರಿಗಣಿಸಲಾಗಿದೆ. 2014ರಲ್ಲಿ ನನ್ನನ್ನೂ ಒಳಗೊಂಡಂತೆ ನಿಮಗೆ ಮತ ಹಾಕಿದ ಪ್ರತಿಯೊಬ್ಬರೂ ಇದನ್ನೇ ಬಯಸುತ್ತಿದ್ದಾರೆ. ಆದರೆ ಈ ನಾಲ್ಕೂವರೆ ವರ್ಷಗಳಲ್ಲಿ ನೀವು ಅವರ ವಿರುದ್ಧ ಕ್ರಮ ಜರುಗಿಸಲಿಲ್ಲ. ಈಗಲಾದರೂ ಕ್ರಮಕೈಗೊಳ್ಳಿ. ನೀವು ಕ್ರಮಕೈಗೊಳ್ಳದಿರಲು ಕಾರಣವೇನು ಎಂದು ನನಗೆ ಗೊತ್ತಿಲ್ಲ, ಆದರೆ ಇನ್ನು ಮುಂದಾದರೂ ನೀವು ಕ್ರಮ ಜರುಗಿಸುತ್ತೀರಾ ಎಂದು ನಿಮ್ಮ ಬೆಂಬಲಿಗರು ಭಾವಿಸಿದ್ದಾರೆ. ಆಂತರಿಕ ಶತ್ರುಗಳ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದರೆ ಭಯೋತ್ಪಾದಕ ದಾಳಿ ಸೇರಿದಂತೆ ಅಂತಹ ಇನ್ನಿತರ ಘಟನೆಗಳು ದೇಶದಲ್ಲಿ ನಡೆಯುತ್ತಿರಲಿಲ್ಲ ಎಂಬುದು ನನ್ನ ಭಾವನೆಯಾಗಿದೆ.
1. ಎಡ ರಾಜಕೀಯ ವರ್ಗ- ಇದು ಕೇವಲ ಕಮ್ಯೂನಿಸ್ಟ್ಗಳಲ್ಲ. ಕಾಂಗ್ರೆಸ್ ಸೇರಿದಂತೆ ಎಡ ರಾಜಕೀಯದಲ್ಲಿ ಗುರುತಿಸಿಕೊಳ್ಳುವ ಎಲ್ಲಾ ಕಮ್ಯೂನಿಸ್ಟ್ ಪಕ್ಷಗಳನ್ನು ಇದು ಒಳಗೊಂಡಿದೆ. ಇತರ ಹಲವಾರು ಪಕ್ಷಗಳನ್ನೂ ಇದು ಒಳಗೊಂಡಿದೆ. ರಾಜಕೀಯವಾಗಿ ದೇಶದಲ್ಲಿ ಅವರು ಕುಸಿದು ಹೋಗಿದ್ದಾರೆ ಎಂಬುದು ನಿಜ. ಆದರೂ ಅವರು ಶಿಕ್ಷಣ ಮತ್ತು ಮಾಧ್ಯಮಗಳಲ್ಲಿ ಇನ್ನೂ ಪ್ರಭಾವಿಗಳು. ಇತರ ಪಕ್ಷಗಳ ಪಟ್ಟಿಯಲ್ಲಿ ’ನಾಮ್ ತಮಿಝರ್ ಕಚ್ಚಿ’ ಕೂಡ ಒಂದು. ಕೆಲ ವರ್ಷಗಳ ಹಿಂದೆ ಇದು ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸೀನ್ ಮಲಿಕ್ನನ್ನು ಕರೆಸಿ ಸಭೆ ನಡೆಸಿತ್ತು. ಮೊನ್ನೆ ದಾಳಿ ನಡೆದ ಬಳಿಕ ಪ್ರಕಟನೆಯನ್ನು ಹೊರಡಿಸಿ, ಘಟನೆಗೆ ಪಾಕಿಸ್ಥಾನವನ್ನು ಹೊಣೆ ಮಾಡಲು ಸಾಧ್ಯವಿಲ್ಲ ಎಂದಿತ್ತು. ಇದರ ಮುಖಂಡ ಸೀಮನ್ ನಿತ್ಯ ಬ್ರಾಹ್ಮಣರ ವಿರುದ್ಧ, ಉತ್ತರ ಭಾರತೀಯರ ವಿರುದ್ಧ, ಹಿಂದೂ ಸಂಸ್ಕೃತಿಯ ವಿರುದ್ಧ ವಿಷ ಕಾರುತ್ತಲೇ ಇರುತ್ತಾನೆ. ವಿದ್ಯಾವಂತರೂ ಸೇರಿ ಲಕ್ಷಾಂತರ ಜನರು ಇವರ ಬ್ರೈನ್ ವಾಶ್ಗೆ ಒಳಗಾಗುತ್ತಿದ್ದಾರೆ. ಆತನ ಅಪಪ್ರಚಾರ ತಪ್ಪಿಸುವ ಯಾವ ಕ್ರಮವನ್ನೂ ಕೈಗೊಳ್ಳಲಾಗಿಲ್ಲ. ಈ ರಾಜ್ಯದಲ್ಲಿ ಇಂತಹ ಹಲವಾರು ಸಂಘಟನೆಗಳಿವೆ, ಆದರೂ ತಮ್ಮ ದೇಶ ವಿರೋಧಿ ಚಟುವಟಿಕೆಯನ್ನು ಮುನ್ನಡೆಸಲು ಅವರಿಗೆ ಎಲ್ಲಾ ರೀತಿಯ ಸ್ವಾತಂತ್ರ್ಯವನ್ನು ನೀಡಲಾಗಿದೆ.
2. ಮಾಧ್ಯಮಗಳು- ನಿಮ್ಮನ್ನೂ ಸೇರಿಸಿದಂತೆ ಬಹಳಷ್ಟು ಮಂದಿ ಈ ಬಗ್ಗೆ ಸಮಗ್ರವಾಗಿ ಮಾತನಾಡುತ್ತಿರುತ್ತಾರೆ. ಆದರೆ ನಾನು ನಿಮಗೊಂದು ಪ್ರಶ್ನೆ ಕೇಳಲೇ- ಎನ್ಡಿಟಿವಿ ವಿರುದ್ಧ ಕಾನೂನು ಕ್ರಮಕ್ಕೆ ಏನಾಯಿತು? ಸಂಪೂರ್ಣ ಭ್ರಷ್ಟಾಚಾರಕ್ಕೀಡಾಗಿರುವ ಟಿವಿ ಚಾನೆಲ್ ವಿರುದ್ಧ ಕ್ರಮ ಜರುಗಿಸದಷ್ಟೂ ನಿಮ್ಮ ಸರ್ಕಾರ ದುರ್ಬಲ ಎಂದು ನಾವು ನಂಬಬೇಕೇ? ಈ ಚಾನೆಲ್ನ ಮಾಜಿ ಸಂಪಾದಕಿ ಬರ್ಖಾ ದತ್ತ್ ಅವರು, 26/11ರ ದಾಳಿಯ ವೇಳೆ ಜನರು ಎಲ್ಲಿ ಅವಿತು ಕುಳಿತುಕೊಂಡಿದ್ದಾರೆ ಎಂದು ಭಯೋತ್ಪಾದಕರಿಗೆ ಬಹುತೇಕ ಹೇಳಿದ್ದರು. ಈಗಲೂ ಆಕೆ ಸ್ವತಂತ್ರವಾಗಿದ್ದಾರೆ. ಈ ಬಗ್ಗೆ ನಿಮ್ಮ ಸ್ಪಂದನೆ ಏನು? ನಿಮ್ಮ ನಾಯಕರು ಈಗಲೂ ಆ ಚಾನೆಲ್ನಲ್ಲಿ ಹಾಜರಿರುತ್ತಾರೆ, ಅವರ ಸಂಸ್ಥೆಗಳಿಗೆ ಆಶೀರ್ವದಿಸುತ್ತಿದ್ದಾರೆ. ಇಂಡಿಯಾ ಟುಡೇ ಇತ್ತೀಚಿಗೆ ಪುಲ್ವಾಮ ದಾಳಿಕೋರನನ್ನು ಮಾನವೀಯತೆಯ ಅಡಿಗೆ ತರುವ ಲೇಖನವೊಂದನ್ನು ಪ್ರಕಟಿಸಿತ್ತು. ಜಮ್ಮು ಕಾಶ್ಮೀರದಲ್ಲಿನ ಭದ್ರತಾ ಪಡೆಗಳಿಂದಾಗಿ ಆತ ಭಯೋತ್ಪಾದಕ ಆದ ಎಂದು ಆ ಲೇಖನ ಹೇಳಿತ್ತು. ಆದರೂ ನೀವು ಮತ್ತು ನಿಮ್ಮ ಪಕ್ಷದವರು ಅದರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೀರಾ. ಬುರ್ವಾನ್ ವಾನಿಯನ್ನು ಮಾನವೀಯಗೊಳಿಸಲು ಪ್ರಯತ್ನಿಸಿದ ಬರ್ಖಾ ದತ್ತ್ ವಿರುದ್ಧ ಕ್ರಮ ಜರುಗಿಸಿದಿದ್ದರೆ ಇಂದು ಭಯೋತ್ಪಾದಕರ ಪರ ನಿಲ್ಲುವಂತಹ ಸನ್ನಿವೇಶ ಇರುತ್ತಿರಲಿಲ್ಲ.
3. ಶೈಕ್ಷಣಿಕ ಸಂಸ್ಥೆಗಳು – ಬಹುಶಃ ಎಲ್ಲದಕ್ಕಿಂತಲೂ ಇದು ನಿಮ್ಮ ದೊಡ್ಡ ವೈಫಲ್ಯ. ಶೈಕ್ಷಣಿಕ ಪಠ್ಯಕ್ರಮವು ಸಂಪೂರ್ಣವಾಗಿ ಕಮ್ಯುನಿಸ್ಟ್ ಪ್ರಚಾರದಿಂದ ತುಂಬಿದೆ ಮತ್ತು ಮಾನವ ಸಂಪನ್ಮೂಲ ಸಚಿವರು ಹೆಮ್ಮೆಯಿಂದ ಏನು ಘೋಷಿಸಿದ್ದಾರೋ – ಆ ರೀತಿ ಪಠ್ಯಕ್ರಮದಲ್ಲಿ ಒಂದೇ ವಿಷಯ ಬದಲಾಗಿಲ್ಲ! ಯುಪಿಎಸ್ಸಿ ಪರೀಕ್ಷೆಯಲ್ಲಿ ತಯಾರಿ ಮಾಡಲು ’ದಿ ಹಿಂದೂ’ ಅನ್ನು ಓದುವುದು ಇನ್ನೂ ಕಡ್ಡಾಯವಾಗಿದೆ. ನಿಮ್ಮ ಸರ್ಕಾರದಲ್ಲಿರುವ ಮಂತ್ರಿ ಸಂಘಟನೆಗಳು ನಿಯಮಿತವಾಗಿ ಎಡಪಂಥೀಯ ಬುದ್ಧಿಜೀವಿಗಳನ್ನು ಆಮಂತ್ರಿಸುತ್ತವೆ, ಮಾಧ್ಯಮದ ಅಧಿಕಾರಿಗಳನ್ನು ಕರೆಸಿ ತಮ್ಮ ಅಧಿಕಾರಿಗಳಿಗೆ ತರಬೇತಿಯನ್ನು ನೀಡುತ್ತಾರೆ. ಮೊಘಲರ ಬಗೆಗಿನ ಪಾಠಗಳನ್ನು ನಾವು ಈಗಲೂ ಹೊಂದಿದ್ದೇವೆ ಆದರೆ ಚೋಳರು ಅಥವಾ ವಿಜಯನಗರ ಸಾಮ್ರಾಜ್ಯದ ಬಗ್ಗೆ ಹಾದುಹೋಗುವ ವಿಷಯ ಏನೂ ಇಲ್ಲ. ನಮ್ಮ ಶೈಕ್ಷಣಿಕ ಸಂಸ್ಥೆಗಳ ಪಠ್ಯಕ್ರಮಗಳಲ್ಲಿ ತುಂಬಿದ ವಿಷವು ನಮ್ಮ ಸೈನಿಕರು, ನಮ್ಮ ಸೈನ್ಯ, ನಮ್ಮ ಆಂತರಿಕ ಭದ್ರತೆ, ನಮ್ಮ ಭಾರತೀಯ ಸಂಸ್ಕೃತಿಯನ್ನು ಪ್ರತಿದಿನ ಖಂಡಿಸುವ ವ್ಯಕ್ತಿಗಳಿಗೆ ಸ್ಥಳವನ್ನು ನೀಡಿದೆ. ಆರು ದಶಕಗಳ ಕಾಂಗ್ರೆಸ್ ಆಳ್ವಿಕೆಯ ಕಾರಣದಿಂದಾಗಿ ಈ ಅವ್ಯವಸ್ಥೆ ಇದೆ. ನಿಮ್ಮ ಸರಕಾರ ಅದನ್ನು ಬದಲಿಸುವಲ್ಲಿ ಸಾಂಕೇತಿಕ ಹೆಜ್ಜೆಯನ್ನು ತೆಗೆದುಕೊಂಡಿಲ್ಲ ಅಥವಾ ಭವಿಷ್ಯದಲ್ಲಿ ಅದನ್ನು ಮಾಡುವ ಯಾವುದೇ ಉದ್ದೇಶವನ್ನು ವ್ಯಕ್ತಪಡಿಸಿಲ್ಲ ಎಂಬುದು ನನ್ನ ಆರೋಪವಾಗಿದೆ.
ಮಣಿಶಂಕರ್ ಅಯ್ಯರ್ ಅವರು ನಿಮ್ಮನ್ನು ತೊಲಗಿಸಲು ಪಾಕಿಸ್ಥಾನದವರ ಸಹಾಯವನ್ನು ಕೇಳಿದಾಗ, ಅವರ ವಿರುದ್ಧ ದೇಶದ್ರೋಹದ ಆರೋಪವನ್ನು ಹೊರಿಸಿ, ಬಂಧಿಸಿ ಜೈಲಿಗೆ ಹಾಕಬಹುದಿತ್ತು. ಆದರೆ ನೀವು ಏನನ್ನೂ ಮಾಡಿಲ್ಲ. ಭದ್ರತೆ ಇಲ್ಲದೇ ರಾಹುಲ್ ಗಾಂಧಿ ಅವರು ತಮಗೆ ಬೇಕಾದಲ್ಲಿ ತಿರುಗಿ ತಮಗೆ ಬೇಕಾದವರನ್ನು ಭೇಟಿಯಾಗುತ್ತಾರೆ. ಈ ಬಗ್ಗೆ ಸರ್ಕಾರಕ್ಕೆ ಯಾವುದೇ ಮಾಹಿತಿ ಇರುವುದಿಲ್ಲ. ಸಂಸತ್ತು ಕೂಡ ಅವರನ್ನು ಖಂಡಿಸಿಲ್ಲ. ಯುಎಸ್ಎನ ಕಾಂಗ್ರೆಸ್ ನಾಯಕಿ ತುಳಸಿ ಗಬ್ಬಾರ್ಡ್ ಅವರು ತನ್ನ ವಾಸ್ತವ ಅನ್ವೇಷಣೆ ಪ್ರವಾಸದ ಭಾಗವಾಗಿ ಸಿರಿಯಾಗೆ ಅಘೋಷಿತ ಭೇಟಿಯನ್ನು ನೀಡಿದಾಗ ಯುಎಸ್ ಕಾಂಗ್ರೆಸ್ ಪ್ರತಿನಿಧಿಗಳು ಮತ್ತು ಮಾಧ್ಯಮಗಳು ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡವು. ಇದರಿಂದ ತಮ್ಮ ಜವಾಬ್ದಾರಿಯನ್ನು ಅವರು ಕಳೆದುಕೊಳ್ಳಬೇಕಾಯಿತು. ಅವರ ರಾಜಕಾರಣಿಗಳು ಸರ್ಕಾರದಲ್ಲಿರದಿದ್ದರೂ ಅವರು ತಮ್ಮ ಶತ್ರು ರಾಷ್ಟ್ರಗಳಿಗೆ ಹೇಳದೇ ಭೇಟಿ ಮಾಡಿದಾಗ ಅವರು ಅದನ್ನು ತೀವ್ರ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎಂಬುದಕ್ಕೆ ಇದು ಸಾಕ್ಷಿ. ಆದರೆ ನಮ್ಮ ಪ್ರತಿಕ್ರಿಯೆ ಏನು? ಏನೂ ಇಲ್ಲ. ಇದು ಭಾರತದ ವ್ಯವಹಾರಗಳಿಗೆ ತಮ್ಮ ಹಸ್ತಕ್ಷೇಪವನ್ನು ಬಯಸುವ ಜನರು ಮತ್ತು ಸಂಪನ್ಮೂಲಗಳು ಭಾರತದಲ್ಲಿವೆ ಎಂಬ ತಪ್ಪು ಸಂದೇಶವನ್ನು ಶತ್ರುಗಳಿಗೆ ಕಳುಹಿಸುತ್ತದೆ. ನಿಮ್ಮ 2014ರ ಪ್ರಚಾರದಲ್ಲಿ, ನಮ್ಮನ್ನು ಆಯ್ಕೆ ಮಾಡಿದರೆ 370 ನೇ ವಿಧಿಯ ಬಗ್ಗೆ ’ಚರ್ಚೆ’ ನಡೆಯಲಿದೆ ಎಂದು ನೀವು ಭರವಸೆ ನೀಡಿದ್ದೀರಿ. ಆದರೆ ಆ ಬಗ್ಗೆ ಯಾವ ಪ್ರಗತಿಯೂ ಕಂಡಿಲ್ಲ.
ಭಾರತದಲ್ಲಿ ಭಾರತವನ್ನು ವಿರೋಧಿಸುವವರು ಅನೇಕರಿದ್ದಾರೆ. ಜಗತ್ತಿನ ಮತ್ಯಾವ ದೇಶದಲ್ಲೂ ಇಂತಹ ಸನ್ನಿವೇಶ ಇಲ್ಲ. ಒಳಗಿನ ಶತ್ರುಗಳನ್ನು ನಿಭಾಯಿಸದ ಹೊರತು ಪಾಕಿಸ್ಥಾನದಂತಹ ದೇಶಗಳ ಮೇಲಿನ ದಾಳಿಯಿಂದ ಪ್ರಯೋಜನವಾಗದು. ಕೇವಲ ತಾತ್ಕಾಲಿಕ ಶಾಂತಿಯಷ್ಟೇ ನೆಲೆಸಬಹುದು. ಈಗಲ್ಲದಿದ್ದರೆ 10 ವರ್ಷಗಳ ಬಳಿಕ ಮತ್ತೆ ದೊಡ್ಡ ಮಟ್ಟದ ದಾಳಿಗಳಾಗಬಹುದು. ನಾವು ಆಂತರಿಕ ಶತ್ರುಗಳ ವಿರುದ್ಧ ಕ್ರಮಕೈಗೊಂಡಾಗ ಮಾತ್ರ ಸಾವಿರಾರು ಪಾಕಿಸ್ಥಾನಿಯರನ್ನು ಎದುರಿಸಲು ಸಾಧ್ಯ. ಆಗ ಬಾಹ್ಯ ಶತ್ರುಗಳಿಗೆ ನಮ್ಮೊಂದಿಗೆ ಕಾದಾಟಕ್ಕೆ ಇಳಿಯುವ ಧೈರ್ಯ ಬರುವುದಿಲ್ಲ. ಚುನಾವಣೆ ತೀರ ಸನಿಹದಲ್ಲಿದೆ. ಈಗ ಕ್ರಮಕೈಗೊಳ್ಳಲು ನಿಮ್ಮ ಬಳಿ ಸಮಯವಿಲ್ಲ. ಆದರೆ ಮುಂದಿನ ಬಾರಿ ನೀವು ಮತ್ತೆ ಚುನಾಯಿತರಾಗಿ ಬಂದಾಗ ನೀವು ಅವರ ವಿರುದ್ಧ ಖಂಡಿತಾ ಕ್ರಮಕೈಗೊಳ್ಳಬೇಕು ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ಇಲ್ಲವಾದರೆ ನಾವು ಇನ್ನಷ್ಟು ಬಾಹ್ಯ ಶತ್ರುಗಳ ದಾಳಿಯನ್ನು ಎದುರಿಸಬೇಕಾಗಬಹುದು.
ಜೈ ಹಿಂದ್
source: satyavijayi
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.