ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಪ್ರಯಾಗ್ರಾಜ್ ಕುಂಭಮೇಳಕ್ಕೆ ಭೇಟಿ ನೀಡಿ, ಅಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ ಆಯೋಜನೆಗೊಳಿಸಿದ್ದ ಸ್ವಚ್ಛ ಕುಂಭ ಸ್ವಚ್ಛ ಆಭಾರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಸ್ವಚ್ಛತಾ ಕಾರ್ಮಿಕರಿಗೆ ’ಸ್ವಚ್ಛ ಕುಂಭ ಸ್ವಚ್ಛ ಆಭಾರ್’ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಮಾತ್ರವಲ್ಲ, ಸ್ವಚ್ಛತಾ ಕರ್ಮಿಕರ ಪಾದ ತೊಳೆದು ವಿಧೇಯತೆ ವ್ಯಕ್ತಪಡಿಸಿದರು.
ಮೋದಿಯವರು ಪಾದ ತೊಳೆದು ತಮಗೆ ವಿಧೇಯತೆಯನ್ನು ವ್ಯಕ್ತಪಡಿಸಿದ್ದು, ಸ್ವಚ್ಛತಾ ಕಾರ್ಮಿಕರಿಗೆ ಅಚ್ಚರಿ, ಸಂತೋಷ ಎರಡನ್ನೂ ಉಂಟು ಮಾಡಿದೆ. ಈ ತರದ ಪ್ರೀತಿ ಮತ್ತು ಗೌರವ ನಮಗೆ ಸಿಗುತ್ತದೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ ಎಂಬುದಾಗಿ ಇವರು ಹೇಳಿಕೊಂಡಿದ್ದಾರೆ.
‘ಮೊದಲು ಮೋದಿ ನಮ್ಮ ಕಾಲಿಗೆ ನೀರು ಹಾಕಿ ತೊಳೆದರು, ಬಳಿಕ ಬಟ್ಟೆಯಿಂದ ಒರೆಸಿದರು. ಶಾಲು ಹಾಕಿ ಸನ್ಮಾನಿಸಿ ನಮಸ್ಕರಿಸಿದರು, ನಂತರ ತಮ್ಮ ಕೈಯನ್ನು ನಮ್ಮ ತಲೆ ಮೇಲಿಟ್ಟು ಆಶೀರ್ವದಿಸಿದರು’ ಎಂದು ಮಹಿಳೆ ಹೇಳಿಕೊಂಡಿದ್ದಾರೆ.
ಕಾರ್ಮಿಕರಿಗೆ ಗೌರವವನ್ನು ನೀಡುವುದು ರಾಷ್ಟ್ರದ ಕರ್ತವ್ಯವಾಗಿರುತ್ತದೆ. ಸ್ವತಃ ಪ್ರಧಾನಿಗಳೇ ಸ್ವಚ್ಛತಾ ಕಾರ್ಮಿಕರ ಪಾದ ತೊಳೆದ ಹಿನ್ನಲೆಯಲ್ಲಿ ಮುಂಬರುವ ದಿನಗಳಲ್ಲಿ ಅವರಿಗೆ ಹೆಚ್ಚಿನ ಗೌರವಗಳು, ಸ್ಥಾನಮಾನಗಳು ಸಿಗುವ ನಿರೀಕ್ಷೆ ಇದೆ. ಯಥಾ ರಾಜ, ತಥಾ ಪ್ರಜಾ ಎಂಬಂತೆ ಪ್ರಧಾನಿಯನ್ನು ದೇಶದ ನಾಗರಿಕರೂ ಅನುಸರಿಸಬಹುದು.
ಕಾರ್ಯಕ್ರಮದಲ್ಲಿ ಪ್ರಧಾನಿಯವರು ಪೊಲೀಸರು ಮತ್ತು ದೋಣಿಗಾರರಿಗೆ ‘ಸ್ಚಚ್ಛಾಗ್ರಹಿ’ ಪ್ರಶಸ್ತಿಯನ್ನೂ ಪ್ರದಾನಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.