ನವದೆಹಲಿ: 2018ರ ಡಿಸೆಂಬರ್ನಲ್ಲಿ ಭಾರತ 7.16 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ ಎಂಬುದು ಇಪಿಎಫ್ಓದ ಇತ್ತೀಚಿನ ಪೇರೋಲ್ ಡಾಟಾದಿಂದ ತಿಳಿದು ಬಂದಿದೆ. ಇದು ಕಳೆದ 16 ತಿಂಗಳುಗಳಲ್ಲಿನ ಅತೀಹೆಚ್ಚು ಉದ್ಯೋಗ ಸೃಷ್ಟಿ ಎಂದು ಹೇಳಲಾಗಿದೆ.
2017ರ ಸೆಪ್ಟಂಬರ್ನಿಂದ 2018ರ ಡಿಸೆಂಬರ್ವರೆಗೆ ದೇಶದಲ್ಲಿ ಒಟ್ಟು 72.32 ಲಕ್ಷ ಹೊಸ ಉದ್ಯೋಗಿಗಳು ಪ್ರೊವಿಡೆಂಟ್ ಫಂಡ್ ಆರ್ಗನೈಝೇಶನ್ಗೆ ಸೇರ್ಪಡೆಯಾಗಿದ್ದಾರೆ. ಇದರರ್ಥ, ದೇಶದ ಆರ್ಥಿಕತೆಯ ಸಂಘಟಿತ ವಲಯದಲ್ಲಿ 72.32 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು.
ಭಾರತದ ಸಂಘಟಿತ ಮತ್ತು ಅರೆ ಸಂಘಟಿತ ವಲಯಗಳ ಕಾರ್ಮಿಕರ ಸಾಮಾಜಿಕ ಭದ್ರತಾ ಫಂಡ್ಗಳನ್ನು ಎಂಪ್ಲಾಯೀಸ್ ಪ್ರೊವಿಡೆಂಟ್ ಫಂಡ್ ಆರ್ಗನೈಝೇಶನ್ ನಿರ್ವಹಣೆ ಮಾಡುತ್ತದೆ. ಇದರಡಿ ಸುಮಾರು 6 ಕೋಟಿ ಸಕ್ರಿಯ ಸದಸ್ಯರಿದ್ದು, ಇವರು ವರ್ಷಕ್ಕೆ ಕನಿಷ್ಠ ಒಂದು ತಿಂಗಳ ಕೊಡುಗೆಯನ್ನಾದರೂ ನೀಡುತ್ತಿದ್ದಾರೆ.
ಇಪಿಎಫ್ಓ, ಇಎಸ್ಐಸಿ, ಎನ್ಪಿಎಸ್ನಡಿ ನೋಂದಾವಣಿಗೊಂಡ ಫಲಾನುಭವಿಗಳ ಅಂಕಿಅಂಶಗಳನ್ನು ಆಧರಿಸಿ, ಕೇಂದ್ರ ಅಂಕಿಅಂಶ ಮತ್ತು ಯೋಜನೆ ಅನುಷ್ಠಾನ ಸಚಿವಾಲಯದಡಿಯಲ್ಲಿನ ಇಪಿಎಫ್ಓ ಉದ್ಯೋಗ ಆಧಾರಿತ ವದರಿಯನ್ನು ಬಿಡುಗಡೆ ಮಾಡುತ್ತದೆ. ಉದ್ಯೋಗಿಗಳ ನೋಂದಣಿ, ನಿವೃತ್ತಿ ನಿರಂತರ ಪ್ರಕ್ರಿಯೆಯಾಗಿದ್ದು, ಇವುಗಳಿಗೆ ಅನುಗುಣವಾಗಿ ಅಂಕಿಅಂಶಗಳನ್ನು ಪರಿಷ್ಕರಣೆ ಮಾಡಲಾಗುತ್ತದೆ.
ಉದ್ಯೋಗ ಸೃಷ್ಟಿಯ ವಿಷಯದಲ್ಲಿ ಮೋದಿ ಸರ್ಕಾರ ಉತ್ತಮ ಹೆಜ್ಜೆಯನ್ನೇ ಇಟ್ಟಿದೆ ಎಂಬುದನ್ನು ಈ ಅಂಕಿಅಂಶ ತೋರಿಸಿಕೊಡುತ್ತದೆ. 2016ರ ಆ.7ರಂದು ಇವರ ಸರ್ಕಾರ ಆರಂಭಿಸಿದ ಪ್ರಧಾನ ಮಂತ್ರಿ ರೋಝ್ಗಾರ್ ಪ್ರೋತ್ಸಾಹನ್ ಯೋಜನೆಯು 2019ರ ಜನವರಿ 14ರಂದು ಒಂದು ಕೋಟಿ ಫಲಾನುಭವಿಗಳನ್ನು ದಾಟುವ ಮೂಲಕ ಮಹತ್ವದ ಸಾಧನೆ ಮಾಡಿದೆ. ಹೆಚ್ಚು ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ನೇಮಿಸುವಂತೆ ಈ ಯೋಜನೆ ಉದ್ಯೋಗದಾತರಿಗೆ ಪ್ರೇರಣೆಯನ್ನು ನೀಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.