ಬೀರುತ್: ರಂಜಾನ್ ಉಪವಾಸದ ವೇಳೆ ಆಹಾರ ಸೇವಿಸಿದರು ಎಂಬ ಕಾರಣಕ್ಕೆ ಇಸಿಸ್ ಉಗ್ರರು ಇಬ್ಬರು ಯುವಕರನ್ನು ನೇಣು ಬಿಗಿದು ಕೊಲೆ ಮಾಡಿದ್ದಾರೆ ಎಂದು ಸಿರಿಯನ್ ಮಾನವ ಹಕ್ಕು ಸಂಘಟನೆ ತಿಳಿಸಿದೆ.
ಹತ್ಯೆಗೀಡಾದ ಇಬ್ಬರು ಯುವಕರು 18 ವರ್ಷದೊಳಗಿನವರು, ಉಪವಾಸವಿದ್ದರೂ ಆಹಾರ ಸೇವಿಸುತ್ತಿದ್ದ ವೇಳೆ ಇವರು ಉಗ್ರರ ಕೈಗೆ ಸಿಕ್ಕಿ ಬಿದ್ದಿದ್ದರು. ಇದರಿಂದ ಕ್ರೋಧಗೊಂಡ ಉಗ್ರರು ಅವರನ್ನು ನೇಣು ಬಿಗಿದು ಕೊಂದು ಹಾಕಿದ್ದಾರೆ.
ಅವರ ಶವದ ಮೇಲೆ ‘ಧರ್ಮದ ಸಮರ್ಥನೆ ಇಲ್ಲದೆ ಇವರು ಉಪವಾಸ ತ್ಯಜಿಸಿದ್ದಾರೆ’ ಎಂದು ಕಾಗದವನ್ನು ಅಂಟಿಸಿದ್ದಾರೆ.
ಉಗ್ರರ ಈ ನೀಚ ಕೃತ್ಯಕ್ಕೆ ಭಾರೀ ಆಕ್ರೋಶಗಳು ವ್ಯಕ್ತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.