ಬೆಂಗಳೂರು: ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಭಾಗಿಯಾಗುವ ಸಲುವಾಗಿ ಮೂರು ರಫೆಲ್ ಯುದ್ಧವಿಮಾನಗಳು ಈಗಾಗಲೇ ಬೆಂಗಳೂರಿನ ಯಲಹಂಕ ವಾಯುನೆಲೆಗೆ ಬಂದಿಳಿದಿವೆ. ಫೆ. 20 ರಿಂದ 24ರ ವರೆಗೆ ಇಲ್ಲಿ ವೈಮಾನಿಕ ಪ್ರದರ್ಶನಗಳು ಜರುಗಲಿವೆ.
ರಫೆಲ್ ಯುದ್ಧವಿಮಾನ ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿಯನ್ನು ಸೃಷ್ಟಿಸಿದ ಯುದ್ಧವಿಮಾನವಾಗಿದೆ. ಫ್ರೆಂಚ್ನ ಡೆಸಾಲ್ಟ್ ಕಂಪನಿ ಭಾರತಕ್ಕೆ 36 ರಫೆಲ್ ಯುದ್ಧವಿಮಾನಗಳನ್ನು ಪೂರೈಕೆ ಮಾಡುತ್ತಿದ್ದು, ಈ ಬಗೆಗಿನ ಒಪ್ಪಂದ ಪ್ರತಿಪಕ್ಷಗಳ ಆರೋಪದಿಂದಾಗಿ ವಿವಾದ ಸೃಷ್ಟಿಸಿತ್ತು.
ಮೂರು ರಫೆಲ್ ಯುದ್ಧವಿಮಾನಗಳು ಯಲಹಂಕಕ್ಕೆ ಬಂದಿಳಿದಿದ್ದು, ಇದರಲ್ಲಿ ಎರಡು ವೈಮಾನಿಕ ಪ್ರದರ್ಶನದಲ್ಲಿ ಭಾಗಿಯಾಗಲಿವೆ. ಒಂದನ್ನು ಸಾರ್ವಜನಿಕರ ವೀಕ್ಷಣೆಗಾಗಿ ಇಡಲಾಗುತ್ತದೆ. ಇದು ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾದ 12ನೇ ಆವೃತ್ತಿಯಾಗಿದೆ.
ದೇಶ ವಿದೇಶಗಳ ಸುಮಾರು 365 ಸಂಸ್ಥೆಗಳು ಏರೋ ಇಂಡಿಯಾದಲ್ಲಿ ಭಾಗಿಯಾಗುತ್ತಿವೆ. 31 ವಿಮಾನಗಳು ಆಗಸದಲ್ಲಿ ಹಾರಾಟ ನಡೆಸಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲಿವೆ, 22 ವಿಮಾನಗಳನ್ನು ಜನರ ವೀಕ್ಷಣೆಗೆಂದು ಇಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.