ಮುಂಬಯಿ: ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಅಪರಾಧಗಳನ್ನು ಎಸಗಿ ಜೈಲು ಸೇರುವ ಕೈದಿಗಳಿಗೆ ಸೆರೆವಾಸ ಜೀವನಾನುಭವವನ್ನು ಕಲಿಸಿಕೊಡುತ್ತದೆ. ತಪ್ಪಿಗೆ ಪ್ರಾಯಶ್ಚಿತವನ್ನು ಮಾಡಿಕೊಂಡು ಮರಳಿ ಜೀವನ ಕಟ್ಟಿಕೊಳ್ಳುವ ತವಕ ಅವರಲ್ಲಿರುತ್ತದೆ. ಕೈದಿಗಳ ದುಃಖ, ದುಮ್ಮಾನಗಳನ್ನು ನಿವಾರಿಸಿ, ಅವರಲ್ಲಿ ಮಾನವೀಯ ಮೌಲ್ಯವನ್ನು ತುಂಬಬೇಕಾದ ಕರ್ತವ್ಯ ಜೈಲುಗಳಾದ್ದಾಗಿರುತ್ತದೆ. ನವೀ ಮುಂಬಯಿಯ ತಲೋಜಾ ಸೆಂಟ್ರಲ್ ಜೈಲ್ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದೆ.
ಮಧ್ಯಾಹ್ನವಾಗುತ್ತಿದ್ದಂತೆ ಈ ಜೈಲಿನಲ್ಲಿ ಸುಮಧುರವಾದ ಗೀತೆಗಳು ತೇಲಿ ಬರುತ್ತವೆ. ಸಂಗೀತಕ್ಕೆ ಎಂತಹ ನೋವನ್ನೂ ಅಳಿಸುವ ಶಕ್ತಿಯಿದೆ. ದುಷ್ಟನನ್ನು ಶಿಷ್ಟನನ್ನಾಗಿ ರೂಪಿಸುವ ಅಗಾಧ ಶಕ್ತಿಯೂ ಸಂಗೀತದ ಸಾಹಿತ್ಯಕ್ಕಿದೆ. ಇದೇ ಕಾರಣಕ್ಕೆ, ಈ ಜೈಲಿನ ಪ್ರತಿಮೂಲೆಯಲ್ಲೂ ಮಧ್ಯಾಹ್ನದ ವೇಳೆ ಸುಮಧುರ, ಸ್ಪೂರ್ತಿದಾಯಕ ಗೀತೆಗಳು ತೇಲಿ ಬರುತ್ತವೆ.
ಇಲ್ಲಿನ ಕೈದಿಗಳೇ ಎಫ್ಎಮ್ ರೇಡಿಯೋವೊಂದನ್ನು ನಡೆಸುತ್ತಿದ್ದಾರೆ. ಸ್ಕ್ರಿಪ್ಟ್ ರೈಟರ್, ರೇಡಿಯೋ ಜಾಕಿ, ಸಿಸ್ಟಮ್ ಆಪರೇಟರ್-ಈ ಮೂರು ಮಂದಿಯ ತಂಡ ಮೊದಲೇ ಕಾರ್ಯಕ್ರಮವನ್ನು ರೆಕಾರ್ಡ್ ಮಾಡಿಕೊಂಡು, ನಿತ್ಯ ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಪ್ಲೇ ಮಾಡುತ್ತದೆ. ಪ್ರಸಾರಗೊಳ್ಳುವುದಕ್ಕೂ ಮುನ್ನ ಜೈಲಿನ ಅಧಿಕಾರಿಗಳು ಇದನ್ನೊಮ್ಮೆ ಪರಿಶೀಲಿಸುತ್ತಾರೆ. ಜೈಲಿನಲ್ಲೇ ಇವರಿಗೆ ತರಬೇತಿಯನ್ನು ನೀಡಲಾಗಿದೆ.
ಇವರ ಬಳಿ 75 ಸಾವಿರ ಗೀತೆಗಳ ಡಾಟಾಬೇಸ್ ಇದೆ, ಇದರಲ್ಲಿ ಆಯ್ಕೆ ಮಾಡಿ ನಿತ್ಯ ಸಂಗೀತ ಪ್ರಸಾರ ಮಾಡುತ್ತಾರೆ. ಜೀವನ, ಪ್ರೀತಿ, ಸಂತೋಷಕ್ಕೆ ಸಂಬಂಧಿಸಿದ ಹಾಡುಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.