ಮುಂಡ್ರಾ: ಭಾರತೀಯ ವಾಯುಸೇನೆಗಾಗಿ ಮೊದಲ ಬ್ಯಾಚ್ನ ನಾಲ್ಕು ಚಿನೂಕ್ ಹೆಲಿಕಾಫ್ಟರ್ಗಳು ಗುಜರಾತ್ನ ಮುಂಡ್ರಾ ಏರ್ಪೋರ್ಟ್ಗೆ ಭಾನುವಾರ ಬಂದಿಳಿದಿವೆ. ಇದರಿಂದ ಭಾರತದ ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ.
ಅಮೆರಿಕಾದಿಂದ 15 ಚಿನೂಕ್ ಹೆಲಿಕಾಫ್ಟರ್ಗಳನ್ನು ಖರೀದಿ ಮಾಡಲು ಭಾರತ ಒಪ್ಪಂದ ಮಾಡಿಕೊಂಡಿದೆ. ಇವುಗಳ ಪೈಕಿ ನಾಲ್ಕು ನಿನ್ನೆ ಭಾರತವನ್ನು ಬಂದು ಮುಟ್ಟಿವೆ.
ಈ ಹೆಲಿಕಾಫ್ಟರ್ಗಳನ್ನು ಬೋಯಿಂಗ್ ತಯಾರು ಮಾಡಿದ್ದು, ಭಾರತೀಯ ವಾಯುಸೇನೆಯು ಇವುಗಳನ್ನು ಆಳವಾಗಿ ಪರೀಕ್ಷೆಗೊಳಪಡಿಸಿ ಬಳಿಕ ವೈಮಾನಿಕ ಕಾರ್ಯಾಚರಣೆಗೆ ನಿಯೋಜಿಸಲಿದೆ. ಪ್ರಸ್ತುತ ಭಾರತೀಯ ವಾಯುಸೇನೆಯು, ರಷ್ಯಾ ಉತ್ಪಾದಿತ ಮಿ-17 ಮತ್ತು ಮಿ26 ಹೆಲಿಕಾಫ್ಟರ್ಗಳನ್ನು ಬಳಸುತ್ತಿದೆ.
ಭಾರತ ಸರ್ಕಾರವು ಈಗಾಗಲೇ 15 ಚಿನೂಕ್ ಹೆಲಿಕಾಫ್ಟರ್ ಮತ್ತು 22 ಅಪಾಚೆ ದಾಳಿ ಹೆಲಿಕಾಫ್ಟರ್ಗಳಿಗಾಗಿ ಯುಎಸ್ಡಿ 3 ಬಿಲಿಯನ್ನನ್ನು ವ್ಯಯಿಸಿದೆ. ಹೆಚ್ಚುವರಿಯಾಗಿ 6 ಅಪಾಚೆಗಳನ್ನು ಖರೀದಿ ಮಾಡುವ ಆಯ್ಕೆ ಭಾರತದ ಮುಂದಿದ್ದು ಈಗಾಗಲೇ ಅಮೆರಿಕಾ ಇದಕ್ಕೆ ಅನುಮೋದನೆಯನ್ನು ನೀಡಿದೆ.
ಸಿಯಾಚಿನ್ ಮತ್ತು ಪೂರ್ವ ಲಡಾಖ್ ಸೆಕ್ಟರ್ಗಳಿಗೆ ಅತ್ಯಗತ್ಯ ವಸ್ತುಗಳನ್ನು ಪೂರೈಕೆ ಮಾಡುವ ಜವಾಬ್ದಾರಿ ಹೊತ್ತಿರುವ ಚಂಡೀಗಢ ಏರ್ ಬೇಸ್ನಲ್ಲಿ ಚಿನೂಕ್ ಹೆಲಿಕಾಫ್ಟರ್ಗಳನ್ನು ನಿಲುಗಡೆ ಮಾಡಲಾಗುತ್ತದೆ.
ಚಿನೂಕ್ ಹೆಲಿಕಾಫ್ಟರ್ಗಳು ಏರ್ಕ್ರಾಫ್ಟ್ಗಳ ಹೊಸ ಮಾದರಿಗಳಾಗಿದ್ದು, ಇವುಗಳ ನಿಯೋಜನೆ ಖಂಡಿತವಾಗಿಯೂ ಭಾರತೀಯ ವಾಯುಸೇನೆಯ ಆಧುನೀಕರಣಕ್ಕೆ ಸಹಾಯ ಮಾಡಲಿದೆ. ಚಿನೂಕ್ ಹೆಲಿಕಾಫ್ಟರ್ನ್ನು ವಿಶ್ವದ ಇತರ 18 ರಕ್ಷಣಾ ಪಡೆಗಳೂ ಬಳಸುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.