ನವದೆಹಲಿ: ರಿಪಬ್ಲಿಕ್ ಟಿವಿಯನ್ನು ಹಿಂದಿಕ್ಕಿ ಡಿಡಿ ಇಂಡಿಯಾ ದೇಶದ ಟಾಪ್ ಇಂಗ್ಲೀಷ್ ನ್ಯೂಸ್ ಚಾನೆಲ್ ಆಗಿ ಹೊರಹೊಮ್ಮಿದೆ. ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್(ಬಿಎಆರ್ಸಿ)ನ ಇತ್ತೀಚಿನ ವರದಿಯಲ್ಲಿ ಡಿಡಿ ಇಂಡಿಯಾ ಅಗ್ರಗಣ್ಯ ಇಂಗ್ಲೀಷ್ ನ್ಯೂಸ್ ಚಾನೆಲ್ ಆಗಿ ಹೊರಹೊಮ್ಮಿದೆ.
ಈ ವರ್ಷದ ಮೊದಲ ಐದು ವಾರಗಳಲ್ಲಿ 1503 ರೇಟಿಂಗ್ ಪಡೆದುಕೊಳ್ಳುವ ಮೂಲಕ ಡಿಡಿ ಇಂಡಿಯಾ ಮೊದಲ ಸ್ಥಾನಕ್ಕೆ ಬಂದು ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದೆ. ರಿಪಬ್ಲಿಕ್ ಟಿವಿ ಎರಡನೇ ಸ್ಥಾನದಲ್ಲಿದ್ದು, 725 ರೇಟಿಂಗ್ಸ್ ಪಡೆದುಕೊಂಡಿದೆ, ಟೈಮ್ಸ್ ನೌ ಮೂರನೇ ಸ್ಥಾನದಲ್ಲಿದ್ದು, 611 ರೇಟಿಂಗ್ಸ್ ಪಡೆದುಕೊಂಡಿದೆ.
ಡಿಡಿ ಇಂಡಿಯಾದ ಪ್ರೇಕ್ಷಕ ವರ್ಗ ಹೆಚ್ಚಿರುವುದು, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ರಾಜ್ಯವರ್ಧನ್ ಸಿಂಗ್ ಅವರ ಶ್ರಮವನ್ನು ತೋರಿಸುತ್ತದೆ. ದೂರದರ್ಶನದ ಪುನರುಜ್ಜೀವನಕ್ಕೆ ಇದು ಹೊಸ ಅವಕಾಶವನ್ನೂ ಕಲ್ಪಿಸಿಕೊಟ್ಟಿದೆ.
ಒಂದು ಕಾಲದಲ್ಲಿ ದೂರದರ್ಶನ ದೇಶದ ಏಕೈಕ ಅಗ್ರಗಣ್ಯ ಚಾನೆಲ್ ಆಗಿ ಮನೆಮಾತಾಗಿತ್ತು, ಆದರೆ ಬಳಿಕ ಸರ್ಕಾರದ ನಿರ್ಲಕ್ಷ್ಯ ಮತ್ತು ಭಾರೀ ಹೂಡಿಕೆಯ ಖಾಸಗಿ ಚಾನೆಲ್ಗಳ ಆರ್ಭಟದಿಂದಾಗಿ ಹಿನ್ನಲೆಗೆ ಸರಿದಿತ್ತು. ಇದೀಗ ಮೋದಿ ಸರ್ಕಾರ ದೂರದರ್ಶನದ ಪುನರುಜ್ಜೀವನವನ್ನು ಮಾಡುತ್ತಿದೆ. ಡಿಡಿ ಇಂಗ್ಲೀಷ್ ನ್ಯೂಸ್ ಚಾನೆಲ್ ಆರಂಭಿಸಿ, ಅದನ್ನೀಗ ನಂಬರ್ 1 ಆಗುವಂತೆ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.