ನವದೆಹಲಿ: ಭಾರತ ಮತ್ತು ಚೀನಾದ ದ್ವಿಪಕ್ಷೀಯ ಸಂಬಂಧಗಳಲ್ಲಿ ಏರಿಳಿತಗಳಾದರೂ, ದ್ವಿಪಕ್ಷೀಯ ವ್ಯವಹಾರ ಮಾತ್ರ ವೃದ್ಧಿಸುತ್ತಲೇ ಇದೆ. ಪ್ರಸ್ತುತ ವರ್ಷದಲ್ಲಿ ಚೀನಾಗೆ ಭಾರತದ ರಫ್ತು ಹಿಂದೆಂದಿಗಿಂತಲೂ ಹೆಚ್ಚಿನ ಮಟ್ಟದಲ್ಲಿ ಏರಿಕೆ ಕಂಡಿದೆ.
2018ರ ಎಪ್ರಿಲ್ ಮತ್ತು ಡಿಸೆಂಬರ್ ನಡುವೆ, ಭಾರತವು ಚೀನಾಗೆ ಯುಎಸ್ಡಿ 12.7 ಬಿಲಿಯನ್ ಮೊತ್ತದ ಸರಕುಗಳನ್ನು ರಫ್ತು ಮಾಡಿದೆ. ಹಲವಾರು ವರ್ಷಗಳ ಬಳಿಕ ಚೀನಾಗೆ ಭಾರತದ ರಫ್ತಿನಲ್ಲಿ ಏರಿಕೆಯಾಗುತ್ತಿದೆ.
ಸಮುದ್ರ ಉತ್ಪನ್ನಗಳು, ಸಾವಯವ ರಾಸಾಯನಿಕ, ಪ್ಲಾಸ್ಟಿಕ್, ಪೆಟ್ರೋಲಿಯಂ ಉತ್ಪನ್ನ, ದ್ರಾಕ್ಷಿ ಮತ್ತು ಅಕ್ಕಿಯನ್ನು ಚೀನಾಗೆ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲಾಗಿದೆ. ಚೀನಾದ ನಿರ್ಬಂಧಿತ ಪರಿಸರವನ್ನು ಅರ್ಥ ಮಾಡಿಕೊಂಡಿರುವ ಭಾರತ, ಕಳೆದ ಹಣಕಾಸು ವರ್ಷದಲ್ಲಿ ಚೀನಾದೊಂದಿಗೆ ಮೂರು ಪ್ರೊಟೊಕಾಲ್ಗಳಿಗೆ ಸಹಿ ಹಾಕಿದೆ.
2018ರ ಜೂನ್ನಲ್ಲಿ, ಚೀನಾಗೆ ಭಾರತೀಯ ಅಕ್ಕಿ ರಫ್ತು ಮಡುವ ಪ್ರೊಟೊಕಾಲ್ಗೆ ಸಹಿ ಹಾಕಲಾಯಿತು, ಇದರಿಂದ ಅಕ್ಕಿ ರಫ್ತಿಗೆ ಸುಗಮ ದಾರಿ ಸಿಕ್ಕಿತು. 2018ರ ನವೆಂಬರ್ನಲ್ಲಿ, ಭಾರತೀಯ ಫಿಶ್ಮೀಲ್ ಮತ್ತು ಫಿಶ್ ಆಯಿಲ್ನ್ನು ರಫ್ತು ಮಾಡುವ ಪ್ರೊಟೊಕಾಲ್ಗೆ ಸಹಿ ಹಾಕಲಾಯಿತು. 2019ರ ಜನವರಿ 22ರಂದು ಭಾರತೀಯ ತಂಬಾಕನ್ನು ಚೀನಾಗೆ ರಫ್ತು ಮಾಡುವ ಪ್ರೊಟೊಕಾಲ್ಗೆ ಸಹಿ ಹಾಕಲಾಯಿತು. ಇದರಿಂದಾಗಿ ಇತ್ತೀಚಿನ ದಿನಗಳಲ್ಲಿ ಚೀನಾಗೆ ಭಾರತದ ರಫ್ತಿನಲ್ಲಿ ಏರಿಕೆಯಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.