ವಡೋದರ: ಗುಜರಾತಿನ ವಡೋದರಾ ನಗರದ ಸೆಂಟ್ರಲ್ ಬಸ್ಸ್ಟ್ಯಾಂಡ್ನ್ನು 18 ದೇಶಗಳ 29 ಕಲಾವಿದರು ಕಲಾ ಸ್ವರ್ಗವನ್ನಾಗಿ ಮಾರ್ಪಡಿಸಿದ್ದಾರೆ. ವಿವಿಧ ಚಿತ್ರ, ಬಣ್ಣಗಳು ಗುಜರಾತ್ ರಾಜ್ಯ ರಸ್ತೆ ಸಾರಿಗೆ ನಿಗಮದ ಈ ಬಸ್ ನಿಲ್ದಾಣವನ್ನು ಕಂಗೊಳಿಸುವಂತೆ ಮಾಡಿದೆ.
ಕಚ್ಛ್ನಲ್ಲಿ ಗುಜರಾತ್ ಪ್ರವಾಸೋದ್ಯಮ ಮಂಡಳಿ ಆಯೋಜನೆಗೊಳಿಸಿದ್ದ ಗ್ಲೋಬಲ್ ಆರ್ಟ್ ಫೆಸ್ಟಿವಲ್ನಲ್ಲಿ ಭಾಗಿಯಾಗಲು ಬಂದಿದ್ದ 18 ದೇಶಗಳ 29 ಕಲಾವಿದರು ವಡೋದರಾ ಬಸ್ ಸ್ಟ್ಯಾಂಡ್ನ್ನು ಬಣ್ಣ ಬಣ್ಣಗಳ ಚಿತ್ತಾರಗಳ ಮೂಲಕ ಕಂಗೊಳಿಸುವಂತೆ ಮಾಡಿದ್ದಾರೆ.
ವಿಯಟ್ನಾಂ, ಕೆನಡಾ, ಬೆಲ್ಜಿಯಂ, ಮೆಕ್ಸಿಕೋ, ನೆದರ್ಲ್ಯಾಂಡ್, ಯುಕೆ, ಯುಎಸ್, ಇಟಲಿ, ಜರ್ಮನಿ, ಸ್ಪೇನ್, ಪೋರ್ಚುಗಲ್, ಜಪಾನ್, ನ್ಯೂಜಿಲ್ಯಾಂಡ್, ಉಗಾಂಡ, ರಾವಂಡ, ಚಿಲೆ, ಅರ್ಜೆಂಟೀನಾ, ಟರ್ಕಿ ದೇಶಗಳ ಕಲಾವಿದರು ಗೋಡೆಯ ಮೇಲೆ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.
‘ಕಲೆಗೆ ಭಾಷೆಯಿರುವುದಿಲ್ಲ, ಅದಕ್ಕೆ ಸಂವಹನ ಮಾಧ್ಯಮದ ಅಗತ್ಯವಿರುತ್ತದೆ. ಪ್ರತಿ ಕಲಾವಿದರಿಗೂ ಬಸ್ ನಿಲ್ದಾಣದ ಒಂದಿಷ್ಟು ಜಾಗವನ್ನು ನೀಡಿ ಅಲ್ಲಿ ಚಿತ್ರ ಬಿಡಿಸುವ ಅವಕಾಶ ನೀಡಲಾಗಿತ್ತು. ಅವರೆಲ್ಲರೂ ಬಿಡಿಸಿ ಚಿತ್ರ ಒಂದೇ ಸುಸಂಬದ್ಧ ಚಿತ್ರಣವಾಗಿ ಮೂಡಿ ಬಂದಿದೆ’ ಎಂದು ವಡೋದರ ಜಿಲ್ಲಾಧಿಕಾರಿ ಶಾಲಿನಿ ಅಗರ್ವಾಲ್ ತಿಳಿಸಿದ್ದಾರೆ.
ಭಾರತದಲ್ಲಿ ವಿಭಿನ್ನ ಸಂಸ್ಕೃತಿ ಇದೆ, ಹೀಗಾಗಿ ವಿಭಿನ್ನ ಕಲಾ ಅನುಭವವನ್ನು ನಾವು ಪಡೆದುಕೊಂಡಿದ್ದೇವೆ, ಇದು ಅದ್ಭುತ ಅನುಭವವಾಗಿದೆ. ಭಾರತೀಯ ಸಂಸ್ಕೃತಿ ಮತ್ತು ಕಲೆಯಿಂದ ಪ್ರೇರಿತಗೊಂಡಿದ್ದೇವೆ. ಭಾರತಕ್ಕೆ ಬರುವ ಹಲವು ದಿನಗಳ ಆಶಯ ಗ್ಲೋಬಲ್ ಆರ್ಟ್ ಫೆಸ್ಟ್ ಮೂಲಕ ಸಾಕಾರಗೊಂಡಿದೆ’ ಎಂದು ಬೆಲ್ಜಿಯಂ ಕಲಾವಿದೆ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.