ನವದೆಹಲಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ, ಶುಕ್ರವಾರ ಕೇಂದ್ರ ಚುನಾವಣಾ ಆಯೋಗ ವೋಟರ್ ವೆರಿಫಿಕೇಶನ್ ಮತ್ತು ಇನ್ಫಾರ್ಮೆಶನ್ ಪ್ರೋಗ್ರಾಂ(ವಿವಿಐಪಿ) ಆರಂಭಿಸಿದೆ. ಇದರಡಿ ಹೆಸರುಗಳ ಪರಿಶೀಲನೆ, ಹೊಸ ನೋಂದಾವಣೆ, ಮತದಾರರ ವಿವರ ಬದಲಾವಣೆ ಮತ್ತು ಗುರುತಿನ ಚೀಟಿಯ ತಿದ್ದುಪಡಿಯನ್ನು ನಡೆಸಲಾಗುತ್ತದೆ.
ಮತದಾರರ ಸಹಾಯವಾಣಿ ಸಂಖ್ಯೆ 1950 ಆಗಿದ್ದು, ಚುನಾವಣಾ ಆಯೋಗವು ದೇಶದ ಎಲ್ಲಾ ಜಿಲ್ಲೆಗಳಲ್ಲೂ ಸಂಪರ್ಕ ಕೇಂದ್ರಗಳನ್ನು ತೆರೆದಿದೆ.
ಸಾರ್ವತ್ರಿಕ ಚುನಾವಣೆ 2019ರಲ್ಲಿ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನದ ಬಳಕೆಯ ಬಗ್ಗೆ ನಡೆದ ಎರಡು ದಿನಗಳ ತರಬೇತಿ ಕಾರ್ಯಗಾರದ ಸಂದರ್ಭ ವಿವಿಐಪಿ ಪ್ರೋಗ್ರಾಂನ್ನು ಆರಂಭಿಸಲಾಗಿದೆ. ತರಬೇತಿ ಕಾರ್ಯಗಾರದ ಸಂದರ್ಭದಲ್ಲಿ ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳು, ಮಾಹಿತಿ ತಂತ್ರಜ್ಞಾನದ ಉಸ್ತುವಾರಿಗಳು, ನೋಡಲ್ ಆಫೀಸರ್ಸ್, ರಾಜ್ಯಮಟ್ಟ ಮಾಸ್ಟರ್ ಟ್ರೈನರ್ಸ್, ತಂತ್ರಜ್ಞಾನ ಸಂಪನ್ಮೂಲ ವ್ಯಕ್ತಿಗಳು ಭಾಗಿಯಾಗಿದ್ದರು.
ಚುನಾವಣಾ ಪ್ರಕ್ರಿಯೆಯನ್ನು ಅತ್ಯಂತ ಸರಳಗೊಳಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಹತ್ತು ಹಲವು ಕ್ರಮಗಳನ್ನು ತೆಗೆದುಕೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.