ನವದೆಹಲಿ: ಭಾರತೀಯ ರೈಲ್ವೇಯು ವಿಶ್ವದ ಅತೀ ಎತ್ತರದ ರೈಲ್ವೇ ಲೈನ್ ನಿರ್ಮಾಣ ಮಾಡುವಲ್ಲಿ ನಿರತವಾಗಿದೆ. ರಾಷ್ಟ್ರೀಯ ಸಾರಿಗೆಯು, ಭಾರತ-ಚೀನಾ ಗಡಿಯುದ್ದಕ್ಕೂ ಕಾರ್ಯತಾಂತ್ರಿಕವಾಗಿ ಅತ್ಯಂತ ಮಹತ್ವದ ಬಿಲ್ಸಾಪುರ್-ಮನಾಲಿ-ಲೇಹ್ ಲೈನ್ನನ್ನು ನಿರ್ಮಾಣ ಮಾಡುತ್ತಿದೆ. ಈ ಲೈನ್ ನವದೆಹಲಿಯನ್ನು ಲಡಾಖ್ ಪ್ರದೇಶಕ್ಕೆ ಸಂಪರ್ಕಿಸುತ್ತದೆ.
ಯೋಜನೆಗಾಗಿ ಮೊದಲ ಹಂತದ ಸ್ಥಳ ಸಮೀಕ್ಷೆ ಪೂರ್ಣಗೊಂಡಿದೆ. ಈ ಲೈನ್ ಶಸ್ತ್ರಾಸ್ತ್ರ ಪಡೆಗಳಿಗೆ ಕ್ಷಿಪ್ರ ಲಭ್ಯತೆಯನ್ನು ನೀಡುವುದು ಮಾತ್ರವಲ್ಲ, ಪ್ರಸ್ತುತ ವಾಯು ಮತ್ತು ರಸ್ತೆ ಸಂಪರ್ಕ ಮಾತ್ರ ಹೊಂದಿರುವ ಅತೀ ಸುಂದರ ಲಡಾಖ್ ಪ್ರದೇಶದ ಪ್ರವಾಸೋದ್ಯಮವನ್ನೂ ಈ ರೈಲ್ವೇ ಲೈನ್ ಉತ್ತೇಜಿಸಲಿದೆ. ಲಡಾಖ್-ಹಿಮಾಚಲ ಪ್ರದೇಶಗಳಲ್ಲಿ ಅತೀಹೆಚ್ಚು ಹಿಮಪಾತಗಳು ಆಗುತ್ತಿರುವುದರಿಂದ ಆಗಾಗ ವಾಯು ಮತ್ತು ರಸ್ತೆ ಸಂಪರ್ಕಗಳು ಮುಚ್ಚಿ ಹೋಗುತ್ತದೆ.
456 ಕಿಮೀ ಉದ್ದದ ಈ ರೈಲ್ವೇ ಲೈನ್ ನಿರ್ಮಾಣಕ್ಕೆ ರೂ.83,360 ಕೋಟಿ ವ್ಯಯವಾಗಲಿದೆ. ಈ ರೈಲ್ ಲೈನ್ ಸಮುದ್ರ ಮಟ್ಟದಿಂದ 5,360 ಮೀಟರ್ ಎತ್ತರದಲ್ಲಿ ರೋಡ್ ಪಾಯಿಂಟ್ ಹೊಂದಲಿದೆ. ಚೀನಾದ ಕ್ವಿಂಘಾಯ್-ಟಿಬೆಟ್ ರೈಲ್ವೇ ಲೈನ್ನಿಂದ ಇದು 2,000 ಮೀಟರ್ ಎತ್ತರದಲ್ಲಿದೆ.
ಸಮೀಕ್ಷೆ ಪ್ರಕಾರ, ಈ ಯೋಜನೆಯು 71 ಸುರಂಗ, 124 ದೊಡ್ಡ ಬ್ರಿಡ್ಜ್, 396 ಸಣ್ಣ ಬ್ರಿಡ್ಜ್ಗಳನ್ನು ಹೊಂದಿದೆ. 30 ಸ್ಟೇಶನ್ಗಳನ್ನು ಹೊಂದಲಿದೆ. ಕೆಲಾಂಗ್ ಸ್ಟೇಶನ್ನನ್ನು 3,000 ಎತ್ತರದ ಸುರಂಗದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಇದು ದೇಶದಲ್ಲೇ ಮೊದಲಾಗಲಿದೆ.
ಈ ರೈಲು ಮಾರ್ಗದ ಅರ್ಧಕ್ಕಿಂತಲೂ ಅಧಿಕ ಭಾಗ ಸುರಂಗದ ಮೂಲಕವೇ ಹಾದು ಹೋಗಲಿದೆ, ಸುರಂಗದ ಒಟ್ಟು ಉದ್ದ 244 ಕಿಮೀ ಇರಲಿದೆ. ಬಿಲ್ಸಾಪುರ ಮತ್ತು ಲೇಹ್ನ ಪ್ರಮುಖ ಸ್ಥಳಗಳಾದ ಸುಂದರ್ನಗರ್, ಮಂಡಿ, ಮನಾಲಿ, ಕೆಲಾಂಗ್, ಕೊಕ್ಸರ್, ದೋರ್ಚಾ, ಉಪ್ಶಿ ಮತ್ತು ಕರುಗಳನ್ನು ಇದು ಒಳಗೊಳ್ಳಲಿದೆ. ಹಿಮಾಚಲ ಮತ್ತು ಜಮ್ಮು ಕಾಶ್ಮೀರದ ಪ್ರಮುಖ ನಗರಗಳ ಮೂಲಕ ಹಾದು ಹೋಗಲಿದೆ.
ದೆಹಲಿ ಮತ್ತು ಲೇಹ್ಗೆ 20 ಗಂಟೆಗಳ ಪ್ರಯಾಣವನ್ನು ಇದು ಕಲ್ಪಿಸುತ್ತದೆ. ಪ್ರಸ್ತುತ ದೆಹಲಿಯಿಂದ ಲೇಹ್ಗೆ 40 ಗಂಟೆಗಳ ಪ್ರಯಾಣ ಬೇಕಾಗುತ್ತದೆ.
ಸಮೀಕ್ಷೆಯ ಅಂತಿಮ ಹಂತ ಶೀಘ್ರದಲ್ಲೇ ಅಂತಿಮವಾಗಲಿದ್ದು, ಬಳಿಕ ಯೋಜನೆಯ ವಿವರಗಳು ಅಂತಿಮವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.