ಬಲಸೋರ್: ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಹೆಲಿಕಾಫ್ಟರ್ ಲಾಂಚ್ಡ್ ವರ್ಶನ್ನ ಆ್ಯಂಟಿ ಟ್ಯಾಂಕ್ ವೆಪನ್ ‘ಹೆಲಿನಾ’ವನ್ನು ಶುಕ್ರವಾರ ಒರಿಸ್ಸಾ ಕರಾವಳಿಯಲ್ಲಿ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಲಾಗಿದೆ.
‘ಹೆಲಿನಾ’ ವೆಪನ್ ಸಿಸ್ಟಮ್ನ್ನು ಮಧ್ಯಾಹ್ನ 12.55 ಗಂಟೆಗೆ ಬಲಸೋರ್ ಜಿಲ್ಲೆಯ ಚಂಡೀಪುರದಲ್ಲಿನ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ನಲ್ಲಿ ಪರೀಕ್ಷೆಗೊಳಪಡಿಸಲಾಗಿದೆ.
ಹೆಲಿಕಾಫ್ಟರ್ನಿಂದ ’ಹೆಲಿ’ ಶಬ್ದ ಮತ್ತು ನಾಗ್(ನಾಗರ ಹಾವು)ನಿಂದ ’ನಾ’ ಶಬ್ದವನ್ನು ತೆಗೆದುಕೊಂಡು ಹೆಲಿನಾ ಎಂಬ ಹೆಸರನ್ನು ಇಡಲಾಗಿದೆ. ಹೆಲಿನಾಗೆ 7-8 ಕಿಮೀ ರೇಂಜ್ ಸಾಮರ್ಥ್ಯವಿದ್ದು, ಇದನ್ನು ಆರ್ಮಿ ಹೆಲಿಕಾಫ್ಟರ್ ಮೂಲಕ ಪರೀಕ್ಷೆಗೊಳಪಡಿಸಲಾಗಿದೆ.
ಡಿಆರ್ಡಿಓ ಹೆಲಿನಾವನ್ನು 47 ಮಿಲಿಯನ್ ಡಾಲರ್ ಬಜೆಟ್ನಲ್ಲಿ ಅಭಿವೃದ್ಧಿಪಡಿಸಿದೆ. ಇದು ವಿಶ್ವದ ಅತ್ಯಂತ ಸುಧಾರಿತ ಯ್ಯಾಂಟಿ ಟ್ಯಾಂಕ್ ವೆಪನ್ಸ್ಗಳಲ್ಲಿ ಒಂದಾಗಿದೆ.
ಇದು ಲಾಕ್-ಆನ್-ಲಾಂಚ್ (ಬಿಡುಗಡೆಗೂ ಮುನ್ನ ಮುಚ್ಚುವಿಕೆ ವಿಧಾನ) ಮೋಡ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಗೆಂಪು ಇಮೇಜಿಂಗ್ ಅನ್ವೇನರ್ (ಐಐಆರ್) ಮೂಲಕ ನಿರ್ದೇಶಿಸಲ್ಪಡುತ್ತದೆ ಮತ್ತು ದೇಶದ ಸುರಕ್ಷಾ ಸಾಮರ್ಥ್ಯಗಳನ್ನು ಮತ್ತಷ್ಟು ಬಲಪಡಿಸುವಲ್ಲಿ ನೆರವಾಗುತ್ತದೆ.
ಪರೀಕ್ಷೆಯ ವೇಳೆ, ಹೆಲಿನಾ ಲಾಂಚ್ ಪ್ಲಾಟ್ಫಾರ್ಮ್ನಿಂದ ಅತ್ಯಂತ ಸುಗಮವಾಗಿ ಬಿಡುಗಡೆಗೊಂಡಿದ್ದು, ಇದರ ಬಳಿಕ ಕ್ಷಿಪಣಿಯು ನಿಖರತೆಯೊಂದಿಗೆ ದಾಳಿ ನಡೆಸಲು ಗುರಿಯನ್ನು ಪತ್ತೆ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.