ನವದೆಹಲಿ: ರೈಲ್ವೇ ಸಚಿವಾಲಯವು ರೈಲು ನಿಲ್ದಾಣಗಳ ಉನ್ನತೀಕರಣ ಪ್ರಕ್ರಿಯೆಯನ್ನು ಆರಂಭಿಸಿದೆ. ರೈಲು ನಿಲ್ದಾಣ ಮರು ಅಭಿವೃದ್ಧಿ ಕಾರ್ಯಕ್ರಮದಡಿ ದೆಹಲಿಯ ಬಿಜ್ವಾಸನ್ ರೈಲು ನಿಲ್ದಾಣವನ್ನು ವಿಶ್ವದರ್ಜೆಗೆ ಏರಿಸಲು ನಿರ್ಧರಿಸಲಾಗಿದೆ. ಈ ಮೂಲಕ ದೆಹಲಿ ಎರಡನೇ ವಿಶ್ವದರ್ಜೆಯ ರೈಲು ನಿಲ್ದಾಣವನ್ನು ಶೀಘ್ರದಲ್ಲೇ ಹೊಂದಲಿದೆ.
ಬಿಜ್ವಾಸನ್ ರೈಲು ನಿಲ್ದಾಣ ಪ್ರಸ್ತುತ ಸ್ಥಳಿಯ ರೈಲುಗಳ ನಿರ್ವಹಣೆಯನ್ನು ಮಾಡುತ್ತಿದೆ. ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಇದು ಹತ್ತಿರದಲ್ಲಿ ಇರುವ ಕಾರಣಕ್ಕೆ, ಇದನ್ನು ಉನ್ನತೀಕರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ, ಅಲ್ಲದೇ ಇದನ್ನು ದೆಹಲಿ ಮೆಟ್ರೋ ಮೂಲಕ ನಗರಗಳ ವಿವಿಧ ಭಾಗಗಳಿಗೆ ಇದನ್ನು ಜೋಡಿಸಂಪರ್ಕಿಸುವವ ಕಾರ್ಯವೂ ನಡೆಯಲಿದೆ.
ಎರಡು ಹಂತದಲ್ಲಿ ಈ ರೈಲುನಿಲ್ದಾಣದ ಉನ್ನತೀಕರಣ ಪ್ರಕ್ರಿಯೆ ಜರುಗಲಿದೆ. ಮೊದಲ ಹಂತವನ್ನು ರೂ.350 ಕೋಟಿ ವೆಚ್ಚದಲ್ಲ ನಡೆಸಲಾಗುತ್ತಿತ್ತು, ಎರಡೂವರೆ ವರ್ಷದಲ್ಲಿ ಇದರ ಪ್ರಮುಖ ಟರ್ಮಿನಲ್, ಪ್ರಮುಖ ಸ್ಟೇಶನ್ ಏರಿಯಾವನ್ನು ಅಭಿವೃದ್ಧಿಪಡಿಸಲಾಗುತ್ತದೆ.
ಸ್ಪ್ಯಾನಿಶ್ ಕಂಪನಿ ಇದರ ವಿನ್ಯಾಸವನ್ನು ಮಾಡಲಿದೆ ಮತ್ತು ಇಂಡಿಯನ್ ರೈಲ್ವೇ ಸ್ಟೇಶನ್ ರಿಡೆವಲಪ್ಮೆಂಟ್ ಕಾರ್ಪೋರೇಶನ್ ಇದಕ್ಕೆ ಬೇಕಾದ ಸಾಲವನ್ನು ಇಂಡಿಯನ್ ರೈಲ್ವೇ ಫಿನಾನ್ಸ್ ಕಾರ್ಪೋರೇಶನ್ನಿಂದ ಪಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.