ನವದೆಹಲಿ: ಫೆಬ್ರವರಿ 16ರಿಂದ ಭಾರತೀಯ ವಾಯುಸೇನೆ ಆಯೋಜಿಸಿರುವ ‘ವಾಯುಶಕ್ತಿ 2019’ ಸಮರಭ್ಯಾಸದಲ್ಲಿ, ರಷ್ಯಾ ನಿರ್ಮಿತ ಆಕ್ರಮಣ ರಕ್ಷಾ ಕವಚ-ನಿರೋಧಕ ಹೆಲಿಕಾಫ್ಟರ್ Mi-35(assault anti-armour helicopter ) ತನ್ನ ಫೈರಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ.
ಪೋಕ್ರಾನ್ನ ಜೈಸಲ್ಮೇರ್ನಲ್ಲಿ ‘ವಾಯುಶಕ್ತಿ 2019’ ಸಮರಭ್ಯಾಸ ನಡೆಯಲಿದೆ. ಸುಖೋಯ್ 30, ಮಿರಾಜ್ 2000 ಸೇರಿದಂತೆ 100 ವಿವಿಧ ಮಾದರಿಯ ಯುದ್ಧ ವಿಮಾನಗಳು ಇದರಲ್ಲಿ ಭಾಗಿಯಾಗಲಿವೆ. ಜಿಲ್ಲಾಡಳಿತ ಈ ಸಮರಾಭ್ಯಾಸಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ನಡೆಸುತ್ತಿದೆ.
Mi-35ಯು ಈ ಸಮರಾಭ್ಯಾಸದಲ್ಲಿ ತನ್ನ ಫೈರಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಲಿದ್ದು, ಆಕರ್ಷಣೆಯ ಕೇಂದ್ರ ಬಿಂದು ಆಗಿದೆ. Mi-35 ಆಕ್ರಮಣ ರಕ್ಷಾ ಕವಚ ನಿರೋಧಕ ಹೆಲಿಕಾಫ್ಟರ್ ಆಗಿದ್ದು, ಹಲವಾರು ಯುದ್ಧ ಪಾತ್ರಗಳಿಗೆ ಇದನ್ನು ಬಳಸಬಹುದಾಗಿದೆ.
ಈ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಹೆಲಿಕಾಫ್ಟರ್ನ್ನು, ಯ್ಯಾಂಟಿ ಟ್ಯಾಂಕ್ ಆಪರೇಶನ್, ಹೆಲಿಬೋರ್ನ್ ಆಪರೇಶನ್, ಶತ್ರುಗಳ ವಾಯು ರಕ್ಷಣಾ ಮಿಶನ್ಗಳನ್ನು ಧ್ವಂಸ ಮಾಡುವ ಪ್ರಕ್ರಿಯೆಗಳಿಗೆ ಇದನ್ನು ಬಳಸಬಹುದು. ಶ್ರಾಮ್ ಮಿಸೈಲ್, ಬಾಂಬ್, ಕೆನಾನ್, ವಿವಿಧ ಕ್ಯಾಲಿಬರ್ನ ರಾಕೆಟ್ಗಳೊಂದಿಗೆ ಈ ಹೆಲಿಕಾಫ್ಟರ್ ದಾಳಿ ನಡೆಸಬಲ್ಲದು.
ರಷ್ಯಾ ನಿರ್ಮಿತ ಈ ಹೆಲಿಕಾಫ್ಟರ್, ನಾಲ್ಕು ಸಿಬ್ಬಂದಿಗಳನ್ನು ಮತ್ತು ಎರಡು ಸ್ಟ್ರೆಚರ್ಗಳನ್ನು ಹೊತ್ತೊಯ್ಯಬಲ್ಲದು. ಗಂಟೆಗೆ 315 ಕಿ.ಮೀ ವೇಗದಲ್ಲಿ ಸಂಚರಿಸಬಲ್ಲದು.
4,500 ಮೀಟರ್ ಎತ್ತರಕ್ಕೆ ಹಾರಬಲ್ಲದು. ಇದರ ಒಟ್ಟು ಉದ್ದ 21.6 ಮೀಟರ್ ಆಗಿದೆ. ರೆಕ್ಕೆಯ ಅಗಲ 6.5 ಮೀಟರ್ ಇದ್ದು, ಎತ್ತರ 6.5 ಮೀಟರ್ ಇದೆ, ಇದರ ಟೆಕಾಫ್ ಭಾರ 12,000 ಕೆಜಿಯಾಗಿದೆ.
Mi-35 ಆಧುನಿಕ ಯುದ್ಧ ಹೆಲಿಕಾಫ್ಟರ್ ಆಗಿದ್ದು, ಇವುಗಳನ್ನು ವೆನುಜುವೆಲಾ, ಬ್ರೆಝಿಲ್, ಅಝೆರ್ಬೈಜನ್, ನೈಜೀರಿಯಾ, ಕಜಕೀಸ್ತಾನ, ಮಾಲಿಯ ಶಸ್ತ್ರಾಸ್ತ್ರ ಪಡೆಗಳೂ ಕಾರ್ಯಾಚರಿಸುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.