ವಾಷಿಂಗ್ಟನ್: ಭಾರತಕ್ಕೆ ಎರಡು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಮಾರಾಟ ಮಾಡಲು ಅಮೆರಿಕಾ ಒಪ್ಪಿಕೊಂಡಿದೆ. ಯುಎಸ್ಡಿ 190 ಮಿಲಿಯನ್ ಅಂದಾಜು ಬೆಲೆಯ ಈ ವ್ಯವಸ್ಥೆಯನ್ನು ಭಾರತೀಯ ವಾಯುಸೇನೆಗೆ ಒದಗಿಸಲಾಗುತ್ತದೆ. ಪ್ರಧಾನಿ ಮತ್ತು ರಾಷ್ಟ್ರಪತಿಗಳು ಹಾರಾಟ ನಡೆಸುವ ವಿಮಾನಗಳ ಭದ್ರತೆಯನ್ನು ಇದು ವೃದ್ಧಿಸಲಿದೆ.
ಪೆಂಟಗಾನ್ ಪ್ರಕಾರ, ಈ ಮಾರಾಟ ಭಾರತ ಮತ್ತು ಅಮೆರಿಕಾದ ನಡುವಣ ಕಾರ್ಯತಾಂತ್ರಿಕ ಭದ್ರತೆಯನ್ನು ಬಲಿಷ್ಠಗೊಳಿಸುವ ಮೂಲಕ ಅಮೆರಿಕಾದ ವಿದೇಶಿ ನೀತಿ ಮತ್ತು ರಾಷ್ಟ್ರೀಯ ಭದ್ರತೆಗೆ ಸಹಾಯ ಮಾಡಲಿದೆ. ಟ್ರಂಪ್ ಆಡಳಿತ ಲಾರ್ಜ್ ಏರ್ಕ್ರಾಫ್ಟ್ ಇನ್ಫ್ರೇರ್ಡ್ ಕೌಂಟರ್ಮೆಝರ್ಸ್ (LAIRCAM) ಮತ್ತು ಸೆಲ್ಫ್ ಪ್ರೊಟೆಕ್ಷನ್ ಸೂಟ್ಸ್(SPS) ಎಂದು ಕರೆಯಲ್ಪಡುವ ಯುಎಸ್ಡಿ 190 ಮಿಲಿಯನ್ ಅಂದಾಜು ಬೆಲೆಯ ಎರಡು ವ್ಯವಸ್ಥೆಗಳನ್ನು ಮಾರಾಟ ಮಾಡಲು ಅನುಮೋದಿಸಿದೆ ಎಂದು ಯುಎಸ್ ಡಿಫೆನ್ಸ್ ಸೆಕ್ಯೂರಿಟಿ ಕೊಅಪರೇಶನ್ ಏಜೆನ್ಸಿ ಅಧಿಸೂಚನೆಯಲ್ಲಿ ತಿಳಿಸಿದೆ.
ಪ್ರಧಾನಿ ಮತ್ತು ರಾಷ್ಟ್ರಪತಿಗಳು ಹಾರಾಟ ನಡೆಸುವ ವಿಮಾನಗಳಿಗೆ ಹೆಚ್ಚಿನ ಬೆದರಿಕೆಗಳು ಇರುವ ಕಾರಣ, ಇತ್ತೀಚಿಗೆ ಭಾರತ ಈ ಎರಡು ವ್ಯವಸ್ಥೆಗಳಿಗೆ ಮನವಿಯನ್ನು ಸಲ್ಲಿಸಿತ್ತು ಎಂದು ಪೆಂಟಗಾನ್ ಹೇಳಿದೆ. ಈ ವ್ಯವಸ್ಥೆಯು ಘನ ವಿಮಾನಗಳನ್ನು ಮ್ಯಾನ್ ಪೋರ್ಟೆಬಲ್ ಮಿಸೈಲ್ ದಾಳಿಯಿಂದ ರಕ್ಷಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.