ನವದೆಹಲಿ: ಗ್ರಾಮೀಣ ಕೃಷಿ ಮಾರುಕಟ್ಟೆ ಮತ್ತು ನಿಯಂತ್ರಿತ ಸಗಟು ಮಾರುಕಟ್ಟೆಗಳ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಮತ್ತು ಉನ್ನತೀಕರಣಗೊಳಿಸಲು ಕೇಂದ್ರ ಸರ್ಕಾರ ಬುಧವಾರ ರೂ.2000 ಕೋಟಿಗಳ ಕೃಷಿ ಮಾರುಕಟ್ಟೆ ಮೂಲಸೌಕರ್ಯ ಅನುದಾನ(ಎಎಂಐಎಫ್) ಸೃಷ್ಟಿಗೆ ಅನುಮೋದನೆಯನ್ನು ನೀಡಿದೆ.
ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ & ರೂರಲ್ ಡೆವಲಪ್ಮೆಂಟ್(ನಬಾರ್ಡ್)ನೊಂದಿಗೆ ಎಎಂಐಎಫ್ ರಚನೆಯಾಗಲಿದೆ. ಇದು 585 ಕೃಷಿ ಬೆಳೆ ಮಾರುಕಟ್ಟೆ ಸಮಿತಿಗಳಿಗೆ ಮತ್ತು 10 ಸಾವಿರ ಗ್ರಾಮೀಣ ಕೃಷಿ ಮಾರುಕಟ್ಟೆಗಳಿಗೆ ಮಾರುಕಟ್ಟೆ ಮೂಲಸೌಕರ್ಯಗಳನ್ನು ವೃದ್ಧಿಸಲು ರಾಜ್ಯ ಸರ್ಕಾರಿ ಸಬ್ಸಿಡಿ ಸಾಲಗಳನ್ನು ಒದಗಿಸುವಲ್ಲಿ ಸಹಾಯ ಮಾಡಲಿದೆ.
’ಹಬ್ & ಸ್ಪೋಕ್’ ವಿಧಾನ ಮತ್ತು ಪಬ್ಲಿಕ್ ಪ್ರೈವೇಟ್ ಪಾಟ್ನರ್ಶಿಪ್ ವಿಧಾನ ಸೇರಿದಂತೆ ನವೀನ ಏಕೀಕೃತ ಮಾರುಕಟ್ಟೆ ಮೂಲಸೌಕರ್ಯ ಯೋಜನೆಗಳಿಗೆ ಎಎಂಐಎಫ್ನ್ನು ಲಭ್ಯವಾಗುವಂತೆ ರಾಜ್ಯಗಳು ಮಾಡಬಹುದಾಗಿದೆ.
ಗ್ರಾಮೀಣ ಕೃಷಿ ಮಾರುಕಟ್ಟೆಗಳ ಬಾಹ್ಯ ಮತ್ತು ಮೂಲಸೌಕರ್ಯವನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ(ಮನರೇಗಾ) ಮತ್ತು ಇತರ ಸರ್ಕಾರಿ ಯೋಜನೆಗಳನ್ನು ಬಳಸಿ ಬಲಿಷ್ಠಗೊಳಿಸಬಹುದಾಗಿದೆ.
ಎಎಂಐಎಫ್ ಯೋಜನೆಗೆ ಅನುಮೋದನೆ ನೀಡಿದ ತರುವಾಯ, ಕೃಷಿ ಸಚಿವಾಲಯವು ಬಡ್ಡಿ ಸಬ್ಸಿಡಿಯನ್ನು ನಬಾರ್ಡ್ಗೆ ಒದಗಿಸಲಿದೆ. 2018-19, 2019-20 ಮತ್ತು 2024-25ರ ವಾರ್ಷಿಕ ಬಜೆಟ್ನ ಪ್ರಕಟನೆಯಂತೆ ಮೊತ್ತ ಒದಗಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.