ನವದೆಹಲಿ: ಪ್ರತಿ ಮನೆಗೂ ಶುದ್ಧ ಅಡುಗೆ ಅನಿಲವನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಡೆಸಿದ ಪ್ರಯತ್ನದಿಂದಾಗಿ, ಇಂದು ಭಾರತ ವಿಶ್ವದ ಎರಡನೇ ಅತೀದೊಡ್ಡ ಎಲ್ಪಿಜಿ ಬಳಕೆದಾರ ರಾಷ್ಟ್ರವಾಗಿ ಹೊರಹೊಮ್ಮಿದೆ. 2025ರ ವೇಳೆಗೆ ದೇಶದಲ್ಲಿ ಅಡುಗೆ ಅನಿಲದ ಬೇಡಿಕೆ ಶೇ.35ರಷ್ಟು ಏರಿಕೆಯಾಗುವ ನಿರೀಕ್ಷೆ ಇದೆ.
ಏಷ್ಯಾ ಎಲ್ಪಿಜಿ ಸಮಿತ್ನ್ನು ಉದ್ದೇಶಿಸಿ ಮಾತನಾಡಿದ ತೈಲ ಕಾರ್ಯದರ್ಶಿ ಎಂಎಂ ಕುಟ್ಟಿ ಅವರು, ‘ಎಲ್ಪಿಜಿ ಗ್ರಾಹಕರ ಪ್ರಮಾಣದಲ್ಲಿ ವಾರ್ಷಿಕವಾಗಿ ಮಹತ್ವದ ಪ್ರಗತಿ ಕಂಡು ಬಂದಿದೆ. 2014-15ರ ವೇಳೆಯಲ್ಲಿ ಗ್ರಾಹಕರ ಏರಿಕೆಯ ಪ್ರಮಾಣ ಶೇ.15ರಷ್ಟು ಇದ್ದು, 14.8 ಕೋಟಿ ಕುಟುಂಬ ಎಲ್ಪಿಜಿ ಹೊಂದಿತ್ತು. 2017-18ರ ವೇಳೆಗೆ ಇದು 22.8 ಕೋಟಿಯಾಗಿದೆ’ ಎಂದಿದ್ದಾರೆ.
‘ಗ್ರಾಮೀಣ ಭಾಗದಲ್ಲಿ ಎಲ್ಪಿಜಿಯನ್ನೊಳಗೊಂಡ ಜನಸಂಖ್ಯೆಯ ಕ್ಷಿಪ್ರ ಏರಿಕೆಯ ಪರಿಣಾಮವಾಗಿ ಎಲ್ಪಿಜಿ ಬಳಕೆಯ ಸರಾಸರಿ ಪ್ರಗತಿ ಶೇ.8.4ರಷ್ಟಾಗಿದೆ. ಇದರಿಂದಾಗಿ ದೇಶ, 22.5 ಮಿಲಿಯನ್ ಟನ್ ಬಳಕೆಯೊಂದಿಗೆ ಎರಡನೇ ಅತೀದೊಡ್ಡ ಎಲ್ಪಿಜಿ ಬಳಕೆದಾರ ರಾಷ್ಟ್ರವಾಗಿ ಹೊರಹೊಮ್ಮಿದೆ.
ತೈಲ ಸಚಿವಾಲಯದ ವರದಿಯ ಪ್ರಕಾರ, 2025ರ ವೇಳೆಗೆ ಭಾರತದ ಎಲ್ಪಿಜಿ ಬಳಕೆಯ ಪ್ರಮಾಣ 30.3 ಮಿಲಿಯನ್ ಟನ್ಗೆ ಏರಿಕೆಯಾಗಲಿದೆ ಮತ್ತು2040ರ ವೇಳೆಗೆ 40.6 ಟನ್ಗಳಿಗೆ ಏರಿಕೆಯಾಗಲಿದೆ.
ಭಾರತ ಸರ್ಕಾರ, ದೇಶದಾದ್ಯಂತ ಅದರಲ್ಲೂ ಪ್ರಮುಖವಾಗಿ ಕಟ್ಟಿಗೆಗೆ ಅವಲಂಬಿತವಾಗಿರುವ ಗ್ರಾಮೀಣ ಭಾಗದಲ್ಲಿ ಎಲ್ಪಿಜಿ ಬಳಕೆಗೆ ಹೆಚ್ಚಿನ ಉತ್ತೇಜನವನ್ನು ನೀಡುತ್ತಿದೆ. ಕಟ್ಟಿಗೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುತ್ತಿದೆ. ಬಡವರಿಗೆ ಉಚಿತವಾಗಿ ಎಲ್ಪಿಜಿ ಕಲ್ಪಿಸಲು ಉಜ್ವಲ ಯೋಜನೆಯನ್ನೂ ತಂದಿದೆ. 2016ರ ಮೇ.1ರಂದು ಆರಂಭವಾದ ಈ ಯೋಜನೆಯಡಿ 6 ಕೋಟಿಗೂ ಅಧಿಕ ಕುಟುಂಬಗಳು ಎಲ್ಪಿಜಿ ಸಂಪರ್ಕವನ್ನು ಪಡೆದುಕೊಂಡಿವೆ. 2020ರ ಮಾರ್ಚ್ನೊಳಗೆ 8 ಕೋಟಿ ಮನೆಗಳಿಗೆ ಎಲ್ಪಿಜಿ ಒದಗಿಸುವ ಗುರಿಯನ್ನು ಹೊಂದಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.