ನವದೆಹಲಿ: 1984ರಲ್ಲಿ ಕಾನ್ಪುರದಲ್ಲಿ ನಡೆದ ಸಿಖ್ ವಿರೋಧಿ ದಂಗೆಯ ತನಿಖೆ ನಡೆಸಲು ಉತ್ತರಪ್ರದೇಶ ಸರ್ಕಾರ ಮಂಗಳವಾರ ನಾಲ್ಕು ಸದಸ್ಯರನ್ನೊಳಗೊಂಡ ವಿಶೇಷ ತನಿಖಾ ತಂಡ(ಎಸ್ಐಟಿ)ಯನ್ನು ರಚನೆ ಮಾಡಿದೆ.
ಈ ಬಗ್ಗೆ ಯುಪಿ ಗೃಹ ಕಾರ್ಯದರ್ಶಿ ಅರವಿಂದ್ ಕುಮಾರ್ ಅವರು ಮಾಹಿತಿಯನ್ನು ನೀಡಿದ್ದು, ‘ಕಾನ್ಪುರ ದಂಗೆಗೆ ಸಂಬಂಧಿಸಿದಂತೆ ನಝೀರಬಾದ್ ಪೊಲೀಸ್ ಸ್ಟೇಶನ್ನಲ್ಲಿ ದಾಖಲಾದ ಎಫ್ಐಆರ್ ಮತ್ತು ಇತರ ಎಫ್ಐಆರ್ಗಳಿಗೆ ಸಂಬಂಧಿಸಿದಂತೆ ಎಸ್ಐಟಿಯಿಂದ ಮತ್ತಷ್ಟು ತನಿಖೆ ನಡೆಸಬೇಕು ಎಂದು ಸುಪ್ರೀಂಕೋರ್ಟ್ ನೀಡಿದ ಆದೇಶದ ಹಿನ್ನಲೆಯಲ್ಲಿ ಎಸ್ಐಟಿ ರಚನೆ ಮಾಡಲಾಗಿದೆ’ ಎಂದಿದ್ದಾರೆ.
ಮಾಜಿ ಪೊಲೀಸ್ ಮಹಾನಿರ್ದೇಶಕ ಅತುಲ್ ಅವರು ಎಸ್ಐಟಿಯ ನೇತೃತ್ವವನ್ನು ಹೊಂದಿದ್ದಾರೆ. ಸುಭಾಷ್ ಚಂದ್ರ ಅಗರ್ವಾಲ್(ನಿವೃತ್ತ ನ್ಯಾಯಾಧೀಶ), ಯೋಗೇಶ್ವರ್ ಕೃಷ್ಣ ಶ್ರೀವಾಸ್ತವ(ನಿವೃತ್ತ ಹೆಚ್ಚುವರಿ ವಿಚಾರಣಾ ನಿರ್ದೇಶಕ) ಮತ್ತು ಹಾಲಿ ಸೀನಿಯರ್ ಸುಪರಿಟೆಂಡೆಂಟ್ ಆಫ್ ಪೊಲೀಸ್ ಈ ಎಸ್ಐಟಿಯ ಸದಸ್ಯರಾಗಿದ್ದಾರೆ.
ಎಸ್ಐಟಿಗೆ 6 ತಿಂಗಳು ಅವಧಿ ನೀಡಲಾಗಿದೆ. ದಂಗೆಯ ವೇಳೆ ದಾಖಲಾದ ಎಫ್ಐಆರ್ಗಳು, ಇದರ ಬಗ್ಗೆ ಜಿಲ್ಲಾ ಪೊಲೀಸರು ಸಲ್ಲಿಸಿದ ಅಂತಿಮ ವರದಿಗಳನ್ನು ಈ ತಂಡ ಪರಿಶೀಲನೆ ನಡೆಸಲಿದೆ. ಖುಲಾಸೆಗೊಂಡ ಆರೋಪಿಗಳ ವಿರುದ್ಧದ ಪ್ರಕರಣಗಳನ್ನೂ ಪರಿಶೀಲಿಸಲಿದೆ. ಅತ್ಯಂತ ಅಮಾನುಷ ಕೃತ್ಯಗಳನ್ನು ಆದ್ಯತೆಯ ಮೇರೆಗೆ ಪರಿಶೀಲಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.